ನಮ್ಮ ಸುತ್ತಲಿನ ಪರಿಸರ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ, ದಿನೆ ದಿನೆ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ನಿಂದ ಮನೆಯ ಹೊರಗೆ ಹೋಗಲು ಭಯಪಡುವ ಸ್ಥಿತಿಗೆ ನಾವು ತಲುಪಿದ್ದೇವೆ. ಗಾಳಿ-ಮಳೆಗೆ ಒಡ್ಡಿ ನಿಲ್ಲುವಂತಹ ಭದ್ರವಾಗಿ ನಾವು ಹೇಗೆ ಮನೆಯನ್ನು ಕಟ್ಟುತ್ತೇವೆಯೊ ಹಾಗೆ ವೈರಸ್ ಗಳಿಂದ ರಕ್ಷಣೆ ಮಾಡಿಕೊಳ್ಳಲು ದೇಹವನ್ನು ಸದೃಢ ದೇಹವನ್ನಾಗಿ ಮಾಡಿಕೊಳ್ಳುವ ಅನಿವಾರ್ಯತೆ ನಮಗೆ ಈಗ ಎದುರಾಗಿದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ಮಾತ್ರ ನಾವು ವೈರಸ್ ವಿರುದ್ಧ ಹೋರಾಡಬಹುದು. ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವಾರು ಕಷಾಯಗಳಿವೆ. ಅವುಗಳಲ್ಲಿ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡುವಂತಹ ಒಂದು ಕಷಾಯದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ದೇಶಾದ್ಯಂತ ಕೊರೋನ ವೈರಸ್ ನಮ್ಮೆಲ್ಲರನ್ನು ಕಾಡುತ್ತಿದೆ. ವೇಗವಾಗಿ ಹರಡುತ್ತಿದ್ದು ಜನರು ಭಯ ಪಡುತ್ತಿದ್ದಾರೆ. ಈ ವೈರಸ್ ಈ ಬಾರಿ ಮೊದಲು ಬಂದಿರುವುದು ಅಲ್ಲ, ವರ್ಷ ವರ್ಷ ಚಳಿಗಾಲದಲ್ಲಿ ಹೊಸ ಹೆಸರಿನಿಂದ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ, ಅದನ್ನು ನಾವು ನೋಡುತ್ತಲೆ ಇದ್ದೇವೆ. ಪ್ರಚಾರ ಮಾಡಿದಾಗ ಒಮ್ಮೆ ಎಲ್ಲರೂ ಮಾಸ್ಕ್ ಹಾಕಿಕೊಂಡು ಓಡಾಡುವುದನ್ನು ನೋಡುತ್ತೇವೆ. ಹೆಸರು ಬೇರೆ ಬೇರೆ ಆದರೂ ಅದರ ಪರಿಣಾಮ ತೀವ್ರವಾಗಿರುತ್ತದೆ. ಈ ವೈರಸ್ ನಿಂದ ನಾವು ತಪ್ಪಿಸಿಕೊಳ್ಳಬೇಕು ಅಂದರೆ ನಮಗೆ ರೋಗ ನಿರೋಧಕ ಶಕ್ತಿ ಬೇಕಾಗುತ್ತದೆ. ಭೂಮಿಯ ಮೇಲೆ ಮನುಷ್ಯ ಹುಟ್ಟುವ ಕೋಟ್ಯಾಂತರ ವರ್ಷಗಳ ಹಿಂದೆ ವೈರಸ್ ಗಳು ಹುಟ್ಟಿಕೊಂಡಿವೆ. ಈ ಪ್ರಪಂಚದಲ್ಲಿ ವೈರಸ್ ಇಲ್ಲದ ಸ್ಥಳವೆ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ವೈರಸ್ ಗಳು ನಾವು ತಿನ್ನುವ ಆಹಾರದಲ್ಲಿ, ಉಸಿರಾಡುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ ಸದಾಕಾಲ ಇರುತ್ತದೆ. ಮಾನವನ ದೇಹವು ವೈರಸ್ ಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ, ಇಲ್ಲದೆ ಇದ್ದರೆ ಇಷ್ಟು ವರ್ಷ ಮನುಷ್ಯ ಜೀವಿಸಲು ಸಾಧ್ಯವಿಲ್ಲ. ಈ ವೈರಸ್ ನಮ್ಮ ಜೀವನಶೈಲಿಯಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರಾಣಿಗಳಿಗಿಲ್ಲದ ವೈರಸ್ ಮನುಷ್ಯರನ್ನು ಕಾಡಲು ಕಾರಣ ಮನುಷ್ಯ ನಿಸರ್ಗದಿಂದ ದೂರ ಉಳಿದು ಜೀವನ ಮಾಡುತ್ತಿದ್ದಾನೆ. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ನಮಗೆ ಯಾವ ವೈರಸ್ ಬರುವುದಿಲ್ಲ. ಕೆಲವರಿಗೆ ಉಸಿರಾಟದ ಸಮಸ್ಯೆ ಇರುತ್ತದೆ ಅವರಿಗೆ ಕೊರೋನ ವೈರಸ್ ಬೇಗ ಅಟ್ಯಾಕ್ ಆಗುತ್ತದೆ.
ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗಲು ಹಾಗೂ ಉಸಿರಾಟದ ಸಮಸ್ಯೆ ನಿವಾರಣೆಯಾಗಲು ಮನೆಯಲ್ಲಿ ತಯಾರಿಸಬಹುದಾದ ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು 7-8 ಕಾಳುಮೆಣಸು, ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. 4 ಲವಂಗ, ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಪ್ರಾಪರ್ಟಿ ಬಹಳ ಇದೆ, ನಮ್ಮ ದೇಹವನ್ನು ಇನ್ಫೆಕ್ಷನ್ ನಿಂದ ಕಾಪಾಡುತ್ತದೆ. ಲವಂಗ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಲು ಸ್ಪೂನ್ ಓಮ್ ಕಾಳು, ಇದು ಜೀರ್ಣಕ್ರಿಯೆ ಸಕ್ರಿಯವಾಗುವಂತೆ ನೋಡಿಕೊಳ್ಳುತ್ತದೆ. ಅರ್ಧ ಸ್ಪೂನ್ ಒಣ ಶುಂಠಿ ಪುಡಿ, ಇದು ಆಯುರ್ವೇದ ಶಾಪ್ ಗಳಲ್ಲಿ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೆ ವೈರಸ್ ನಮ್ಮ ಹತ್ತಿರ ಸುಳಿಯದಂತೆ ಶುಂಠಿ ತಡೆಯುತ್ತದೆ. ಕಾಲು ಸ್ಪೂನ್ ಅರಿಶಿಣ, ಮನೆಯಲ್ಲಿ ಬೆಳೆದ ಅರಿಶಿಣ ಕೊಂಬು ಇದ್ದರೆ ಒಳ್ಳೆಯದು, ಅದನ್ನು ತುರಿದು ಕಷಾಯಕ್ಕೆ ಬಳಸಬಹುದು. 2 ಏಲಕ್ಕಿ, 2 ಸ್ಪೂನ್ ಬೆಲ್ಲ. ಕಷಾಯವನ್ನು ಮಾಡುವ ವಿಧಾನವೆಂದರೆ ಮೊದಲು ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ ಕಾಳುಮೆಣಸು, ಲವಂಗ, ಶುಂಠಿ ಪೌಡರ್, ಅರಿಶಿಣ, ಏಲಕ್ಕಿ, ಬೆಲ್ಲವನ್ನು ಹಾಕಿ ಕುದಿಸಬೇಕು. ನಂತರ ತಣ್ಣಗಾಗಲು ಬಿಟ್ಟು ತಣ್ಣಗಾದನಂತರ ಫಿಲ್ಟರ್ ಮಾಡಬೇಕು. ನಂತರ ಇದಕ್ಕೆ ಎರಡು ಮೂರು ಹನಿ ಪುದೀನಾ ರಸವನ್ನು ಹಾಕಬೇಕು. ಪುದೀನಾ ರಸ ಆಯುರ್ವೇದ ಶಾಪ್ ಗಳಲ್ಲಿ ಸಿಗುತ್ತದೆ. ನೆಗಡಿ, ಶೀತ, ಕೆಮ್ಮು, ಗಂಟಲುನೋವು, ಕಫ ಸಮಸ್ಯೆಗಳನ್ನು ನೀವು ಈಗಾಗಲೆ ಎದುರಿಸುತ್ತಿದ್ದರೆ ತಕ್ಷಣ ಈ ಕಷಾಯವನ್ನು ಮಾಡಿ ಕುಡಿಯಿರಿ. ಈ ಕಷಾಯವನ್ನು ದೊಡ್ಡವರಾದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ 1 ಸ್ಪೂನ್ ಕುಡಿಯಬಹುದು. ಚಿಕ್ಕಮಕ್ಕಳಾದರೆ ದಿನಕ್ಕೆ ಒಂದು ಸ್ಪೂನ್ ಸಾಕು. ಈ ಕಷಾಯದಲ್ಲಿ ಹಾಕಿರುವ ಸಾಮಗ್ರಿಗಳು ಔಷಧೀಯ ಗುಣಗಳನ್ನು ಹೊಂದಿದ್ದು ಯಾವುದೆ ರೀತಿಯಲ್ಲಿ ದೇಹಕ್ಕೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.