ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆ ಅಕ್ಷರ ಸಹ ಸುಳ್ಳಲ್ಲ. ಅಂತಹ ಮಹತ್ವದ ಗಾಧೆಗಳಲ್ಲಿ ಸ್ಥಾನ ಪಡೆದಿದೆ ಈ ಒಂದು ಗಾದೆ ಮಾತು. “ತಾಯಿಯ ಮಡಿಲು ಹೊಂಗೆಯ ನೆರಳು” ಎನ್ನುವ ಮಾತಿದೆ. ಅದರ ಅರ್ಥ ತಾಯಿಯ ಮಡಿಲಿನಂತೆಯೇ ಹೊಂಗೆಯ ಮರದ ನೆರಳು ನೆಮ್ಮದಿ ನೀಡುತ್ತದೆ ಎಂದು. ಅಂತಹ ಹೊಂಗೆ ಮರ ಬತೇ ಗಾದೆ ಮಾತಿಗೆ , ಕೇವಲ ನೆರಳಿಗೆ ಮಾತ್ರವಲ್ಲದೆ ಎಷ್ಟೋ ರೋಗಗಳಿಗೆ ರಾಮಬಾಣ ಕೂಡಾ ಆಗಿದೆ. ಈ ಲೇಖನದಲ್ಲಿ ಹೊಂಗೆ ಮರದ ಉಪಯೋಗಗಳು ಏನು? ಅದನ್ನು ಹೇಗೆ ಯಾವ ಪ್ರಮಾಣದಲ್ಲಿ ಬಳಸಬೇಕು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬೇಸಿಗೆಯ ಬಿಸಿಲಿನಲ್ಲಿ ತಾಪ ತಾರಕ್ಕಕ್ಕೆ ಏರುತ್ತದೆ. ಇಂತಹ ಹೊತ್ತಿನಲ್ಲಿ ಎಲ್ಲಿಯಾದರೂ ಹೊಂಗೆ ಮರ ಸಿಕ್ಕಿದರೆ ಆರಾಮವಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಹೋಗಬಹುದು ಎನ್ನುವುದು ಎಲ್ಲರ ಅನಿಸಿಕೆ ಆಗಿರುತ್ತದೆ. ಅಷ್ಟರ ಮಟ್ಟಿಗೆ ಹೊಂಗೆ ಮರ ನಮ್ಮ ಜೀವನದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಅದೆಷ್ಟೇ ಬಿಸಿಲು ಇದ್ದರೂ ಸಹ ಹೊಂಗೆ ಮರದ ನೆರಳು ತಂಪಾಗಿ ಇರುತ್ತದೆ. ಇಂತಹ ಹೊಂಗೆ ಮರ ಬಹುಪಯೋಗಿ ಎನ್ನಬಹುದು. ಇದರಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಮೊದಲಿಗೆ ಹೊಂಗೆ ಮರದ ಕಡ್ಡಿಯನ್ನ ಜಗಿದು ಹಲ್ಲು ಉಜ್ಜಿದರೆ ಹಲ್ಲುಗಳು ಆರೋಗ್ಯಕರವಾಗಿ ಇರುತ್ತದೆ ಜೊತೆಗೆ ವಸಡಿನ ಆರೋಗ್ಯ ಸಹ ಚೆನ್ನಾಗಿ ಇರುತ್ತದೆ ಹಾಗೂ ಕೀಟಾಣುಗಳು ನಾಶವಾಗಿ ಬಾಯಿಂದ ಬರುವ ದುರ್ಗಂಧ ಸಹ ಕಡಿಮೆ ಆಗತ್ತೆ.

ಇನ್ನು ಇತ್ತೀಚೆಗೆ ಹೊಂಗೆ ಮರ ಎಲ್ಲರಿಗೂ ಬಹು ಪ್ರೀತಿಯಾಗಿ ಬಿಟ್ಟಿದೆ. ಅದಕ್ಕೆ ಕಾರಣ ಹೊಂಗೆ ಮರದಲ್ಲಿ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆ ಎಂದು. ಹೊಂಗೆ ಮರದ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ. ಹೊಂಗೆ ಎಲೆಗಳನ್ನು ಒಣಗಿಸಿ ಅದರ ಜೊತೆಗೆ ಹಾಗಲಕಾಯಿ ಹಾಗೂ ನೇರಳೆ ಬೀಜವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಒಣಗಿಸಿ ಪುಡಿ ಮಾಡಿಟ್ಟುಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸಹ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ತಲೆಯಲ್ಲಿ ಇದ್ದಕ್ಕಿದ್ದ ಹಾಗೆ ಕೂದಲು ಉದುರಲು ಆರಂಭಿಸಿದರೆ ಹೊಂಗೆ ಬೀಜವನ್ನ ನೀರಿನಲ್ಲಿ ತೇಯ್ದು ಕೂದಲು ಉದುರುವ ಜಾಗಕ್ಕೆ ಹಚ್ಚಿದರೆ ಅಲ್ಲಿರುವ ಕೀಟಾಣುಗಳು ಸತ್ತು ಕೂದಲು ಉದುರುವುದು ನಿಲ್ಲುತ್ತದೆ. ಹೊಂಗೆ ಬೀಜ ಅರ್ಧ ತಲೆನೋವಿಗೆ ರಾಮಬಾಣ. ಎರಡು ಮೂರು ಹೊಂಗೆ ಬೀಜವನ್ನು ನೀರಿನಲ್ಲಿ ಅರೆದು ಅದರ ಒಂದೆರಡು ಹನಿ ರಸವನ್ನು ಮೂಗಿಗೆ ಹಾಕುವುದರಿಂದ ಅರ್ಧ ತಲೆನೋವು ಮಾಯವಾಗುತ್ತದೆ. ಜೇನು ಹುಳ ಅಥವಾ ಕಣಜದ ಹುಳ ಕಚ್ಚಿದಾಗ ಆ ಜಾಗಕ್ಕೆ ಹೊಂಗೆ ಎಣ್ಣೆಯನ್ನು ಹಚ್ಚುವುದರಿಂದ ನೋವು ಕಡಿಮೆಯಾಗಿ ಗಾಯ ಸಹ ಬೇಗ ಕಡಿಮೆ ಆಗುತ್ತದೆ. ಕೈ ಕಾಲು ಹಾಗೂ ಕೀಲುನೋವು ಇದ್ದರೆ ಅದಕ್ಕೂ ಸಹ ಹೊಂಗೆ ಎಣ್ಣೆ ಪರಿಹಾರ ನೀಡುತ್ತದೆ. ಒಂದು ಚಮಚ ಹೊಂಗೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಪಚ್ಚ ಕರ್ಪೂರವನ್ನು ಸೇರಿಸಿ ಎಣ್ಣೆ ತಣಿದ ನಂತರ ಆ ಎಣ್ಣೆಯನ್ನು ಹಚ್ಚುವುದರಿಂದ ನೋವು ಶಮನವಾಗುತ್ತದೆ.

ಹೊಂಗೆ ಮಲೇರಿಯಾ ಜ್ವರಕ್ಕೂ ಸಹ ಪರಿಹಾರವನ್ನು ಒದಗಿಸುತ್ತದೆ. ಮಲೇರಿಯಾ ಜ್ವರ ಬಂದವರು ಹೊಂಗೆ ಮರದ ಬೀಜಗಳನ್ನು ಶೇಖರಿಸಿಮೇಲಿನ ಕೆಂಪು ಸಿಪ್ಪೆಯನ್ನ ತೆಗೆದು ಚೂರ್ಣ ಮಾಡಿಟ್ಟುಕೊಳ್ಳಬೇಕು. ಈ ಚೂರ್ಣವನ್ನು ದಿನಕ್ಕೆ ಕಾಲು ಚಮಚದಂತೆ ಜೇನುತುಪ್ಪದಲ್ಲಿ ಬೆರೆಸಿ ಸೇವಿಸುವುದರಿಂದ ಜ್ವರ ಕಡಿಮೆ ಆಗುವುದು. ದೇಹದಲ್ಲಿ ಕುರುಗಳು ಆಗಿದ್ದರೆ ಹೊಂಗೆ ಎಲೆ, ಬೇವಿನ ಎಲೆ ಅರಿಷಿನವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನ ಅರೆದು ಕುರುಗಳು ಇರುವ ಕಡೆ ಹಚ್ಚುವುದರಿಂದ ಕಡಿಮೆ ಆಗುವುದು. ಗಜಕರ್ಣ, ತುರಿಕೆ ಇರುವವರು ಹೊಂಗೆ ಎಣ್ಣೆ ಜೊತೆಗೆ ಸ್ವಲ್ಪ ಪ್ರಮಾಣದ ಗಂಧಕ ಹಾಗೂ ಸ್ವಲ್ಪ ಕರ್ಪೂರವನ್ನು ಸೇರಿಸಿ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ ಹಚ್ಚುವುದರಿಂದ ಗಜಕರ್ಣ, ಕಜ್ಜಿ, ತುರಿಕೆ ಇಲ್ಲವಾಗುತ್ತದೆ. ಕುಷ್ಟ ರೋಗದ ಚಿಕಿತ್ಸೆಯಲ್ಲಿ ಸಹ ಹೊಂಗೆ ಮರದ ಎಲೆಗಳನ್ನು ಬಳಕೆ ಮಾಡಲಾಗುತ್ತದೆ. ಮನೆಯಲ್ಲಿ ಹೊಂಗೆ ಎಣ್ಣೆಯ ದೀಪ ಹಚ್ಚುವುದರಿಂದ ಸೊಳ್ಳೆಗಳು ಮನೆಯ ಒಳಗೆ ಬರದಂತೆ ತಡೆಯಬಹುದು. ಇಷ್ಟೊಂದು ಪ್ರಯೋಜನಕಾರಿ ಇರುವಂತಹ ಹೊಂಗೆಯನ್ನು ನೇರವಾಗಿ ಯಾವುದೇ ಕಾರಣಕ್ಕೂ ಬಳಸಬಾರದು. ಯಾವುದಕ್ಕೂ ಇದನ್ನು ಬಳಕೆ ಮಾಡುವ ಮೊದಲು ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

By

Leave a Reply

Your email address will not be published. Required fields are marked *