ನಾವೆಲ್ಲರೂ ಆಹಾರವನ್ನು ಸೇವಿಸುತ್ತೇವೆ ಆದರೆ ಯಾವ ರೀತಿಯ ಆಹಾರವನ್ನು ಹೇಗೆ ಸೇವಿಸಬೇಕು ಆಹಾರ ಪದ್ಧತಿಯ ಬಗ್ಗೆ ತಿಳಿದಿರುವುದಿಲ್ಲ. ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸಿದಾಗ ಮಾತ್ರ ದೇಹಕ್ಕೆ ಸಾಕಷ್ಟು ಶಕ್ತಿ ದೊರೆತು ಉತ್ಸಾಹದಿಂದ ಇರಲು ಸಾಧ್ಯ ಸದ್ಗುರು ಅವರು ಆಹಾರದ ಪದ್ಧತಿಯ ಬಗ್ಗೆ ಮಾಹಿತಿ ತಿಳಿಸಿದ್ದಾರೆ ಅದೇನೆಂದು ಈ ಲೇಖನದ ಮೂಲಕ ತಿಳಿಯೋಣ.

ಆರೋಗ್ಯ ಎಂದರೆ ರೋಗ ಇಲ್ಲದೆ ಇರುವದನ್ನು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ. ಬೆಳಗ್ಗೆ ಎದ್ದಕೂಡಲೆ ಜೀವಂತ ಉತ್ಸಾಹದಿಂದಿರಬೇಕು. ಆರೋಗ್ಯ ಇದು ಸಮಗ್ರ ಎಂಬ ಪದದಿಂದ ಬಂದಿದೆ. ನಿಮ್ಮಲ್ಲಿ ದೇಹ, ಮನಸ್ಸು, ಪ್ರಾಣಶಕ್ತಿ, ಮೂಲಸ್ವರೂಪಗಳು ಸಮಗ್ರತೆಯಿಂದ ಇರಬೇಕು ಇವೆಲ್ಲ ಲಯಬದ್ಧವಾಗಿದ್ದರೆ ಬೆಳಗ್ಗೆ ಎದ್ದಕೂಡಲೆ ನಿಮಗೆ ಈಗಷ್ಟೆ ಹುಟ್ಟಿದಿನಿ ಎನ್ನುವಂಥ ಉತ್ಸಾಹ ಕಂಡುಬರುತ್ತದೆ ಆಗ ಆರೋಗ್ಯವಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೆಣ್ಣುಮಕ್ಕಳು 40%-50%ನಷ್ಟು ಆಹಾರವನ್ನು ಹಸಿಯಾದ ರೂಪದಲ್ಲಿ ತರಕಾರಿ, ಹಣ್ಣು, ಮೊಳಕೆಯೊಡೆದ ಕಾಳುಗಳನ್ನು ತಿನ್ನಬೇಕು ಇವುಗಳಲ್ಲಿ ಜೀವಂತ ಕಣಗಳಿರುತ್ತದೆ ಜೀವಂತ ಆಹಾರವನ್ನು ಸೇವಿಸಬೇಕು. ನಾವು ಆಹಾರವನ್ನು ಬೇಯಿಸಿದಾಗ ಆಹಾರದಲ್ಲಿರುವ ಎನ್ಜೈಂ ನಾಶವಾಗುತ್ತದೆ ಇದರಿಂದ ದೇಹಕ್ಕೆ ಶಕ್ತಿ ಸಿಗಲಾರದು.

ಊಟ ಮಾಡಿದ ಒಂದೂವರೆ ಗಂಟೆ ದೇಹ ಮಂಕಾಗಿರತ್ತೆ ಆನಂತರ ಪುನಶ್ಚೇತನಗೊಳ್ಳುತ್ತದೆ ಆಹಾರವನ್ನು ಬೇಯಿಸಿ ತಿನ್ನುವುದರಿಂದ ಒಂದೂವರೆ ಗಂಟೆ ಶಕ್ತಿ ಹೀರಿಕೊಳ್ಳುತ್ತದೆ ನಂತರ ಸಹಜ ಸ್ಥಿತಿಗೆ ಬರುತ್ತದೆ. ಜೀರ್ಣ ಕ್ರಿಯೆ ಪ್ರಬಲವಾಗಿದ್ದರೆ ಎಂಜೈಮ್ ಗಳನ್ನು 40%-50% ಪುನರನಿರ್ಮಿಸಿಕೊಳ್ಳಬಹುದು ನಾಶವಾದ ಎನ್ಜೈಂಗಳನ್ನು ಪುನಃ ನಿರ್ಮಿಸಲು ದೇಹ ಸಾಕಷ್ಟು ಶ್ರಮಿಸಬೇಕು ದೇಹಕ್ಕೆ ಆಹಾರವು ಇಂಧನ ಇದ್ದಂತೆ ಸರಿಯಾದ ಇಂಧನ ಹಾಕಿದರೆ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಬೇಯಿಸಿದ ಆಹಾರ ತಿನ್ನುವ ಬದಲು ಹಣ್ಣುಗಳನ್ನು ತಿನ್ನುವುದರಿಂದ ಬೆಳಗ್ಗೆ ಎದ್ದೇಳುವಾಗ ಮನಸ್ಸು ನೀರಾಳವಾಗಿರತ್ತೆ ಉತ್ಸಾಹ ಭರಿತವಾಗಿರತ್ತೆ. ನೆಲಗಡಲೆ, ತಾಟಿಬೆಲ್ಲ, ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು ಇದರಿಂದ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಆಹಾರವನ್ನು ಸರಿಯಾದ ವಿಧಾನದಲ್ಲಿ ಸೇವಿಸಬೇಕು. ಸದ್ಗುರು ಅವರು ಹೇಳಿದ ಆಹಾರ ಪದ್ಧತಿಯನ್ನು ಪ್ರತಿಯೊಬ್ಬರು ಅನುಸರಿಸಬೇಕು ಇದರಿಂದ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!