ಭಾರತೀಯರು ಬಂಗಾರ ಪ್ರಿಯರು, ನಮ್ಮಲ್ಲಿ ಯಾವುದೆ ಹಬ್ಬ ಸಮಾರಂಭಗಳಲ್ಲಿ ಚಿನ್ನಕ್ಕೆ ಬಹಳ ಪ್ರಾಮುಖ್ಯತೆ ಇರುತ್ತದೆ. ಮಹಿಳೆಯರಿಗೂ ಚಿನ್ನ ಎಂದರೆ ಬಹಳ ಅಚ್ಚು ಮೆಚ್ಚು. ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಭರ್ಜರಿ ಸುದ್ದಿ ಗೋಲ್ಡ್ ಲೋನ್ ಬಗ್ಗೆ ಬದಲಾದ ನಿಯಮಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಚಿನ್ನದ ಬೆಲೆ ಎಷ್ಟೆ ದುಬಾರಿ ಆದರೂ ಕೂಡ ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನು ಖರೀದಿ ಮಾಡುತ್ತಾರೆ, ಮಹಿಳೆಯರು ಚಿನ್ನ ಖರೀದಿಗೆ ಹಣ ಕೂಡಿಸಿ ಇಡುತ್ತಾರೆ. ಚಿನ್ನ ಕೇವಲ ಆಭರಣದ ವಸ್ತುವಲ್ಲ ಸಾಕಷ್ಟು ಜನ ಹೂಡಿಕೆಗಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ ತಮ್ಮ ಬಳಿ ಇರುವ ಚಿನ್ನವನ್ನು ಹೂಡಿಕೆ ಮಾಡಿ ಬಿಸಿನೆಸ್ ಮಾಡುತ್ತಾರೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರಲಿ ಎಂದು ಚಿನ್ನ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಚಿನ್ನದ ಬೆಲೆ ಯಾವತ್ತೂ ಕಡಿಮೆ ಆಗುವುದಿಲ್ಲ ಹೀಗಾಗಿ ಜನರು ಹಣದ ಅಗತ್ಯ ಇದ್ದಾಗ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಸರ್ಕಾರ ಸಿಹಿಸಿದ್ದಿಯೊಂದು ನೀಡಿದೆ. ಚಿನ್ನವನ್ನು ಆಪದ್ಭಾಂದವ ಎಂದೆ ಕರೆಯಲಾಗುತ್ತದೆ ಹೀಗಾಗಿ ಕಷ್ಟದ ಸಮಯದಲ್ಲಿ ಬ್ಯಾಂಕಿನಲ್ಲಿ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲಾಗುತ್ತದೆ. ಚಿನ್ನ ಅಡವಿಟ್ಟು ಸಾಲ ಪಡೆಯಲು ಸಿಬಿಲ್ ಸ್ಕೋರ್ ಅಗತ್ಯ ಇರುವುದಿಲ್ಲ ಹೀಗಾಗಿ ಚಿನ್ನದ ಸಾಲವನ್ನು ಸುಲಭ ಸಾಲ ಎಂದು ಪರಿಗಣಿಸಲಾಗುತ್ತದೆ.

ಇದೀಗ ಹಣಕಾಸು ಸಂಸ್ಥೆಗಳಲ್ಲಿ ಚಿನ್ನವನ್ನು ಅಡವಿಡಲು ಇರುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಸಹಕಾರಿ ಸಂಘಗಳಲ್ಲಿ ಅಂದರೆ ಅರ್ಬನ್ ಕೋ ಆಪರೆಟಿವ್ ಬ್ಯಾಂಕ್ ಗಳಲ್ಲಿ ಬಂಗಾರದ ಮೇಲಿನ ಸಾಲದ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಗ್ರಾಹಕರು ಅಡ ಇಟ್ಟ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವಾಗ ಬೇರೆ ಯಾವುದೆ ರೀತಿಯ ಅಡಮಾನ ಅಥವಾ ಗ್ಯಾರೆಂಟಿ ಕೊಡುವ ಅಗತ್ಯವಿಲ್ಲ.

ಚಿನ್ನದ ಮೇಲೆ ಗರಿಷ್ಠ ಸಾಲದ ಮಿತಿ 2 ಲಕ್ಷದವರೆಗೆ ಮಾತ್ರ ಸಾಲ ಪಡೆಯಬೇಕಾಗಿತ್ತು ಆದರೆ ಇದೀಗ 4 ಲಕ್ಷದವರೆಗೆ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಚಿನ್ನದ ಮೇಲಿನ ಸಾಲಕ್ಕೆ ಅಸಲು ಪಾವತಿ ಮಾಡುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು ಒಂದು ವೇಳೆ ಅಸಲನ್ನು ಪಾವತಿ ಮಾಡದೆ ಇದ್ದರೆ ಬ್ಯಾಂಕ್ ಪ್ರಶ್ನಿಸುವಂತಿಲ್ಲ ಆದರೆ ಬಡ್ಡಿಯನ್ನು ಸರಿಯಾಗಿ ಕಟ್ಟಬೇಕು ಅಂದರೆ ಸಾಲ ಪಡೆದ ನಂತರ ಅಸಲು ಮತ್ತು ಬಡ್ಡಿ ಎರಡು ಸೇರಿಸಿ ಬರುವ ಈಎಮ್ಐ ಮೊತ್ತವನ್ನು ಪಾವತಿಸುವ ಅಗತ್ಯವಿಲ್ಲ ಕೇವಲ ಬಡ್ಡಿಯನ್ನು ಪಾವತಿಸಿಕೊಂಡು ಹೋಗಬಹುದು.

Leave a Reply

Your email address will not be published. Required fields are marked *