ಬಹಳ ಸುಲಭವಾಗಿ ಹಾಗೂ ಸೊಗಸಾಗಿ ರುಚಿಯಾಗಿ ಘೀ ರೈಸ್ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತೀವಿ. ಘೀ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು ಏನು ಅಂತ ಮೊದಲು ನೋಡೋಣ. ೨ಕಪ್ ಅಕ್ಕಿ ೪ ಟಿ ಸ್ಪೂನ್ ಹಸಿರು ಬಟಾಣಿ, ೧ ಈರುಳ್ಳಿ, ತುಪ್ಪ ೨ ಟಿ ಸ್ಪೂನ್, ಎಣ್ಣೆ ೨ ಟಿ ಸ್ಪೂನ್, ಗೋಡಂಬಿ ೧೦/೧೫, ಶುಂಠಿ ಬೆಳ್ಳಳ್ಳಿ ಪೇಸ್ಟ್ ೨ ವರೆ ಟಿ ಸ್ಪೂನ್, ಕಸೂರಿ ಮೇತಿ ಸ್ವಲ್ಪ, ಸೋಂಪು ಕಾಳು ಸ್ವಲ್ಪ, ೪/೫ ಹಸಿರು ಮೆಣಸಿನ ಕಾಯಿ, ೧ಟಿ ಸ್ಪೂನ್ ನಿಂಬೆ ರಸ, ಪಲಾವ್ ಎಲೆ ೨, ಚಕ್ಕೆ ೧ ಇಂಚು, ೧ ಸ್ಟಾರ್ ಮೊಗ್ಗು, ೨ ಏಲಕ್ಕಿ, ೪ ಲವಂಗ, ರುಚಿಗೆ ತಕ್ಕಷ್ಟು ಉಪ್ಪು.ಇವಿಷ್ಟು ಘೀ ರೈಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು. ಇನ್ನು ಇದನ್ನ ಮಾಡೋದು ಹೇಗೆ ಅಂತ ನೋಡೋಣ.

ಮಾಡುವ ವಿಧಾನ :– ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ೧೦ ನಿಮಿಷ ನೆನೆಸಿ ಇಟ್ಟುಕೊಳ್ಳಬೇಕು. ನಂತರ ಒಂದು ಕುಕ್ಕರ್ ಸ್ಟೋವ್ ಮೇಲೆ ಇಟ್ಟು ಬಿಸಿ ಮಾಡಿಕೊಂಡು ೨ ಟಿ ಸ್ಪೂನ್ ಎಣ್ಣೆ ಹಾಗೂ ಎರಡು ಟಿ ಸ್ಪೂನ್ ತುಪ್ಪ ಹಾಕಿ, ತುಪ್ಪ ಕರಗಿದ ನಂತರ ಮೇಲೆ ಹೇಳಿದ ಮಸಾಲ ಪದಾರ್ಥಗಳು ಚಕ್ಕೆ, ಲವಂಗ, ಸ್ಟಾರ್ ಮೊಗ್ಗು, ಏಲಕ್ಕಿ, ಪಲಾವ್ ಎಲೆ ಇವುಗಳನ್ನ ಸ್ವಲ್ಪ ಹುರಿದುಕೊಳ್ಳಬೇಕು. ಹಾಗೆ ಅದಕ್ಕೆ ಸೋಂಪು ಕಾಳು ಕಸೂರಿ ಮೆತಿ ಹಾಗೂ ಗೋಡಂಬಿಯನ್ನು ಸೇರಿಸಿ ಈ ಎಲ್ಲವನ್ನೂ ಒಂದು ನಿಮಿಷ ಫ್ರೈ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಮಧ್ಯ ಸೀಳಿ ಕಟ್ ಮಾಡಿದ ಹಸಿಮೆಣಸಿನ ಕಾಯಿ ಹಾಗೂ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿಯನ್ನು ಸಹ ಹಾಕಿ ಎರಡರಿಂದ ಮೂರು ನಿಮಿಷ ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ೩೦ ಸೆಕೆಂಡ್ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಬೇಕು. ನಂತರ ಎರಡು ಕಪ್ ಅಕ್ಕಿಗೆ ಮೂರು ಕಪ್ ನೀರನ್ನು ತೆಗೆದುಕೊಂಡು ಕುಕ್ಕರ್ ಗೆ ಹಾಕಿ (ಅಕ್ಕಿಯನ್ನು ಮೊದಲೇ ೧೦ ನಿಮಿಷ ನೀರಿನಲ್ಲಿ ನೆನೆಸಿ ಇಟ್ಟರೆ ೨ ಕಪ್ ಅಕ್ಕಿಗೆ ಮೂರು ಕಪ್ ನೀರು ಸಾಕು. ನೆನೆಸಿ ಇಡದೇ ಇದ್ದರೆ ೨ ಕಪ್ ಅಕ್ಕಿ ೪ ಕಪ್ ನೀರು ಹಾಕಬೇಕಾಗುತ್ತದೆ) ಹಾಗೆ ನೆನೆಸಿಟ್ಟ ಅಕ್ಕಿಯನ್ನು ಹಾಗೂ 4 ಟಿ ಸ್ಪೂನ್ ಹಸಿರು ಬಟಾಣಿ ಕೂಡ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನಿಂಬೆರಸ ಸೇರಿಸಿ ಒಮ್ಮೆ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಸಿಲ್ ಕುಗಿಸಿಕೊಳ್ಳಬೇಕು. ಬಿಸಿಯಾದ, ರುಚಿಯಾದ ಘೀ ರೈಸ್ ರೆಡಿ.

Leave a Reply

Your email address will not be published. Required fields are marked *