ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಎಷ್ಟೋ ಮಂದಿ ಸಾವನ್ನಪ್ಪುತ್ತಿದ್ದಾರೆ. ನೀವು ಅಥವಾ ನಿಮಗೆ ಗೊತ್ತಿರುವವರು ಹೃದಯಾಘಾತಕ್ಕೆ ಒಳಗಾದಾಗ ಏನು ಮಾಡಬೇಕು ಅನ್ನೋದು ತಿಳಿಯುವುದಿಲ್ಲ ಅಂತ ಸಂದರ್ಭದಲ್ಲಿ ನಾವು ನಿಮಗೆ ತಿಳಿಸಿಕೊಡುವ ಈ ಸಿಂಪಲ್ ಟಿಪ್ಸ್ ಅನುಸರಿಸಿ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಿ. ಅದೇನು ಅನ್ನೋದನ್ನ ಮುಂದೆ ನೋಡಿ, ನಂತರ ಈ ಮಾಹಿತಿ ಉಪಯುಕ್ತ ಅನಿಸಿದರೆ ಶೇರ್ ಮಾಡಿ
ಹೊಟ್ಟೆಯುಬ್ಬರ, ಹೊಟ್ಟೆ ನೋವು, ತೇಗು ಇವೆಲ್ಲವೂ ನಮಗೆ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ ಸರಿಯಾಗಿ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ಉಂಟಾಗುತ್ತದೆ. ಕೋಪ ಬರುವುದು, ಕಿರಿ ಕಿರಿ ಆದಂತೆ ಅನಿಸುವುದು ಇವೆಲ್ಲವೂ ಗ್ಯಾಸ್ ಟ್ರಬಲ್ ನ ಲಕ್ಷಣಗಳು. ಇಂತಹ ಗ್ಯಾಸ್ಟ್ರಿಕ್ ಸಮಸ್ಯೆಯ ನಿವಾರಣೆಗಾಗಿ ಆಯುರ್ವೇದದಲ್ಲಿ ಒಂದು ಒಳ್ಳೆಯ ಪರಿಹಾರವನ್ನು ಸೂಚಿಸಲಾಗಿದೆ. ಅದರ ಜೊತೆಗೆ ಇನ್ನೂ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಗ್ಯಾಸ್ ಟ್ರಬಲ್ ಸಮಸ್ಸ್ಯೆ ದೂರ ಆಗುತ್ತದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ನಿತ್ಯ ಯೋಗ ಮತ್ತು ಪ್ರಾಣಾಯಾಮವನ್ನು ತಪ್ಪದೆ ಮಾಡಬೇಕು. ಪ್ರತಿ ದಿನ ಕನಿಷ್ಟ ಅರ್ಧ ಗಂಟೆ ಆದರೂ ವ್ಯಾಯಾಮ ಮಾಡಬೇಕು. ನಾರಿನ ಅಂಶ ಅಧಿಕವಾಗಿ ಇರುವ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಆಗಾಗ ಟೀ ಮತ್ತು ಕಾಫೀ ಕುಡಿಯುತ್ತಿದ್ದರೆ ಅವುಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ನಿಯಂತ್ರಣಕ್ಕೆ ತಂದು ತ್ಯಜಿಸಬೇಕು. ಅದರ ಜೊತೆಗೆ ತಂಬಾಕು ಸೇವನೆ, ಧೂಮ ಪಾನ, ಮಧ್ಯ ಪಾನ ಸೇವನೆ ಇವುಗಳನ್ನು ಸಹ ತ್ಯಜಿಸಬೇಕು. ಮಸಾಲೆ ಪದಾರ್ಥಗಳು, ಕರಿದ ತಿಂಡಿಗಳು ಹಾಗೂ ಫಾಸ್ಟ್ ಫುಡ್ ಇವುಗಳನ್ನು ಸಹ ತಿನ್ನಬಾರದು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು ಹಾಗೂ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತಾ ಇರಬೇಕು.
ಗ್ಯಾಸ್ ಟ್ರಬಲ್ ಸಮಸ್ಯೆಗೆ ಅದನ್ನು ನಿವಾರಿಸಿಕೊಳ್ಳಲು ಪ್ರತಿ ದಿನ ಬೆಳಿಗ್ಗೆ ಶುಂಠಿ ಚೂರ್ಣವನ್ನು ಬೆಲ್ಲದ ಜೊತೆಗೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ನಂತರ ಒಂದು ಲೋಟ ಬಿಸಿ ನೀರನ್ನು ಕುಡಿದರೆ ಗ್ಯಾಸ್ ಟ್ರಬಲ್ ಸಮಸ್ಯೆ ದೂರ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಇರುವ ಗಾಳಿಯನ್ನು ಶುಂಠಿ ತೆಗೆದು ಹಾಕುತ್ತದೆ. ಧನಿಯಾ ಹಾಗೂ ಶುಂಠಿ ಇವೆರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಆ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ತಿಂಡಿಗು ಮೊದಲು ಮತ್ತು ರಾತ್ರಿ ಊಟದ ನಂತರ ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಹೊಟ್ಟೆಯಲ್ಲಿ ಇರುವ ಗ್ಯಾಸ್ ನಿಂದ ಮುಕ್ತಿ ಪಡೆಯಬಹುದು ಹಾಗೂ ಇದರಿಂದ ಮಲ ವಿಸರ್ಜನೆ ಸಹ ಸರಿಯಾಗಿ ಆಗುತ್ತದೆ. ಹಸಿ ಶುಂಠಿ ರಸವನ್ನು ಬೆಲ್ಲದ ಜೊತೆ ಸೇರಿಸಿ ಕುದಿಸಿ ಒಂದು ಚಮಚದಷ್ಟು ಸೇವಿಸಿದರೆ ಹೊಟ್ಟೆಯುಬ್ಬರ ಸಹ ಕಡಿಮೆ ಆಗುತ್ತದೆ.
ಇವಿಷ್ಟು ನಮಗೆ ಪ್ರತೀ ನಿತ್ಯ ಕಾಡುತ್ತಿರುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ನಾವೇ ಮಾಡಿಕೊಳ್ಳಬಹುದಾದ ಸುಲಭವಾದ ಮನೆಮದ್ದುಗಳು. ಮನೆಯಲ್ಲಿ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ.