ಹಾಲು ಇದು ದೇಹಕ್ಕೆ ಎಷ್ಟೋ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆಯನ್ನು ಪಡೆಯಬಹುದು. ಹಾಗೆಯೇ ಹಾಲು ಹೆಪ್ಪು ಹಾಕಿದಾಗ ಆಗುವ ಮೊಸರಿನ ಬಗ್ಗೆ ತಿಳಿಯೋಣ.

ಮೊಸರನ್ನು ಎಲ್ಲರೂ ಉಪಯೋಗಿಸುತ್ತಾರೆ. ಮೊಸರು ದೇಹಕ್ಕೆ ಕಫವನ್ನು ವೃದ್ಧಿಸುತ್ತದೆ. ಇದು ಶೀತ ಪ್ರಕೃತಿ ಹೊಂದಿದೆ. ಯಾರಿಗೆ ಶೀತ ಮತ್ತು ಕಫದ ಪ್ರಕೃತಿ ಇರುತ್ತದೆಯೋ ಅಂತಹವರು ಮೊಸರನ್ನು ಹೆಚ್ಚಾಗಿ ಬಳಸಬಾರದು. ಯಾರು ಹೆಚ್ಚು ಶ್ರಮ ಪಡುವುದಿಲ್ಲವೋ ಯಾರು ಹೆಚ್ಚು ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತಾರೋ ಅಂತಹವರು ಮೊಸರನ್ನು ಹೆಚ್ಚಾಗಿ ಬಳಸಬಾರದು. ಅಲ್ಪಾಮಿತಿಯಲ್ಲಿ ಬಳಸಿದರೂ ಕೂಡ ಮಧ್ಯಾಹ್ನ ಸಮಯದಲ್ಲಿ ಬಳಸಿದರೆ ಒಳ್ಳೆಯದು. ಸಾಯಂಕಾಲದ ಹೊತ್ತಿನಲ್ಲಿ ಸೂರ್ಯ ಮುಳುಗಿ ಹೋಗಿರುತ್ತಾನೆ. ಆಗ ಶೀತ ಪ್ರಧಾನ ಆಗಿರುತ್ತದೆ. ಆ ಸಮಯದಲ್ಲಿ ಮೊಸರು ಸೇವನೆ ಮಾಡಿದರೆ ದೇಹದಲ್ಲಿ ಕಫ ಹಚ್ಚಾಗುತ್ತದೆ. ಶೀತಕ್ಕೆ ಸಂಬಂಧ ಹೊಂದಿರುವ ಖಾಯಿಲೆಗಳು ಬರುತ್ತದೆ. ಅಸ್ತಮಾ, ಅಲರ್ಜಿ, ಡಯಾಬಿಟಿಸ್ ಅಥವಾ ಇನ್ಯಾವುದೋ ಶೀತಕ್ಕೆ ಸಂಬಂಧ ಪಟ್ಟ ಖಾಯಿಲೆಗಳು ಬರುತ್ತದೆ.

ಕೆಲವರು ಮೊಸರಿಗೆ ಸಕ್ಕರೆಯನ್ನು ಹಾಕಿಕೊಂಡು ತಿನ್ನುತ್ತಾರೆ. ಕೆಲವರು ಉಪ್ಪು ಹಾಕಿಕೊಂಡು ತಿನ್ನುತ್ತಾರೆ. ಮೊಸರಿಗೆ ಏನನ್ನು ಮಿಕ್ಸ್ ಮಾಡಬಾರದು. ಮೊಸರಿನಲ್ಲಿ ಒಳ್ಳೆ ಬ್ಯಾಕ್ಟೀರಿಯಾ ಮತ್ತು
ಕೆಟ್ಟ ಬ್ಯಾಕ್ಟೀರಿಯಾ ಎಂಬ 2 ವಿಧದ ಬ್ಯಾಕ್ಟೀರಿಯಾಗಳು ಇರುತ್ತವೆ. ಮೊಸರಿಗೆ ಉಪ್ಪು ಹಾಕಿ ತಿನ್ನುವುದರಿಂದ ಒಳ್ಳೆ ಬ್ಯಾಕ್ಟೀರಿಯಾ ಸತ್ತು ಹೋಗುತ್ತದೆ. ಸಕ್ಕರೆ ಶೀತ ಕಾರಕ. ಶೀತ ಪ್ರಕೃತಿ ಉಳ್ಳವರು ಸಕ್ಕರೆ ಹಾಕಿ ತಿನ್ನಬಾರದು. ಶೀತದ ಮೊಸರಿಗೆ ಶೀತದ ಸಕ್ಕರೆ ಹಾಕಿ ಶೀತಕಾಲವಾದ ಸಾಯಂಕಾಲ ತಿಂದದ್ದೇ ಆದಲ್ಲಿ ಶೀತಕ್ಕೆ ಸಂಬಂಧ ಹೊಂದಿರುವ ಖಾಯಿಲೆಗಳು ಉಲ್ಬಣವಾಗುತ್ತದೆ. ಆದ್ದರಿಂದ ಮೊಸರು ತಿನ್ನುವಾಗ ಯೋಚಿಸಿ ನಿಮ್ಮ ಆರೋಗ್ಯ ಪ್ರಕೃತಿಯ ಬಗ್ಗೆ ಅರಿತು ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಿ.

By

Leave a Reply

Your email address will not be published. Required fields are marked *