ಗ್ಯಾಸ್ಟ್ರಿಕ್ ಅಜೀರ್ಣತೆ ಸಮಸ್ಯೆಯನ್ನು ಕ್ಷಣದಲ್ಲೇ ನಿವಾರಿಸುವ ಸುಲಭ ಮನೆಮದ್ದು

0 1

ಇತ್ತೀಚಿನ ದಿನಗಳ್ಲಲಿ ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕನವರೆಗೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಇದಕ್ಕೆ ಕಾರಣ ಇಂದಿನ ಆಧುನಿಕ ಶೈಲಿ ಅಂದರೆ ತಪ್ಪಾಗಲಾರದು. ಹೌದು ಸಮಯಕ್ಕೆ ಸರಿಯಾಗಿ ಊಟ ಸೇವನೆ ಮಾಡದೇ ಇರುವುದು ಹಾಗೂ ಜಂಕ್ ಫುಡ್ ಸೇವನೆ ಮಾಡುವುದು ಆಹಾರ ಶೈಲಿಯಲ್ಲಿ ಬದಲಾವಣೆ ಹೀಗೆ ನಾನಾ ಕಾರಣಗಳಿಂದ ಈ ಅಜೀರ್ಣತೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗೆ ಬಹಳಷ್ಟು ಜನ ಪ್ರತಿದಿನ ಔಷಧಿ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ ಆದ್ರೆ ಪ್ರತಿದಿನ ಇಂಗ್ಲಿಷ್ ಮಾತ್ರೆ ಔಷಧಿಗಳನ್ನು ಬಳಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ, ಹಾಗೂ ಆರೋಗ್ಯದಲ್ಲಿ ಏರುಪೇರಾಗಬಹುದು ಆದ್ದರಿಂದ ನೈಸರ್ಗಿಕ ಮನೆಮದ್ದುಗಳನ್ನು ಬಳಸಿ ಇಂತಹ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಅಷ್ಟಕ್ಕೂ ಮನೆಯಲ್ಲಿಯೇ ಈ ಅಜೀರ್ಣತೆ ಗ್ಯಾಸ್ಟ್ರಿಕ್ ನಿವಾರಸಲು ಯಾವ ರೀತಿಯ ಮನೆಮದ್ದನ್ನು ತಯಾರಿಸಿಕೊಳ್ಳಬೇಕು ಅದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿಯುವುದಾದರೆ ಅಡುಗೆಗೆ ಬಳಸುವಂತ ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಇವುಗಳನ್ನು ಬಳಸಿಕೊಂಡು ಗ್ಯಾಸ್ಟ್ರಿಕ್ ನಿವಾರಿಸಿಕೊಳ್ಳಬಹದು. ಹೌದು ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಿಕ್ಕ ತುಂಡು ಬೆಳ್ಳುಳ್ಳಿ ಅಥವಾ ಹಸಿ ಶುಂಠಿಯನ್ನು ಜಗಿದು ತಿನ್ನುವುದರಿಂದ ಸೇವನೆ ಮಾಡುವಂತ ಆಹಾರ ಬೇಗನೆ ಜೀರ್ಣವಾಗಲು ಸಹಕಾರಿಯಾಗುತ್ತದೆ. ಹಾಗೂ ಅಜೀರ್ಣತೆ ಕಾಡೋದಿಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿಮ್ಮನ್ನು ಕಾಡೋದಿಲ್ಲ, ಬೆಳ್ಳುಳ್ಳಿ ಹಾಗೂ ಶುಂಠಿ ಉತ್ತಮ ಆರೋಗ್ಯದ ಗುಣಗಳನ್ನು ಹೊಂದಿದೆ.

ಪ್ರತಿದಿನ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರಿಗೆ ಈ ಮಾಹಿತಿ ಉಪಯುಕ್ತವಾಗಿದೆ ಹಾಗಾಗಿ ನಿಮ್ಮ ಆತ್ಮೀಯರಿಗೂ ಕೂಡ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ, ಈ ಸಲಹೆ ಚಿಕ್ಕದೇ ಆಗಿರಬಹುದು ಆದ್ರೆ ಇದರ ಕೆಲಸ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ದೆ ಪ್ರತಿದಿನ ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿ ನೀರು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಅರೋಗ್ಯ ಉತ್ತಮ ರೀತಿಯಲ್ಲಿ ವೃದ್ಧಿಯಾಗುವುದು, ಹಾಗೂ ರೋಗಗಳಿಂದ ದೂರ ಉಳಿಯಬಹುದು ಬಿಸಿ ನೀರು ಸೇವನೆ ಕೂಡ ಗ್ಯಾಸ್ಟ್ರಿಕ್ ನಿಯಂತ್ರಿಸುತ್ತದೆ.

Leave A Reply

Your email address will not be published.