ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಜೀವಿಯು ಸಹ ಮೃತ ಪಡಲೆಬೇಕು. ಯಾವ ಜೀವಿಯು ಚಿರಂಜೀವಿಯಾಗಿ ಚಿರಕಾಲ ಭೂಮಿಯ ಮೇಲೆ ಜೀವಿಸಲು ಸಾದ್ಯವಿಲ್ಲಾ. ಜನನ ಮರಣ ಇವೆರಡು ಕಾಲ ಚಕ್ರದಂತೆ ಸುತ್ತುತ್ತಲೆ ಇರುತ್ತವೆ ಹಿಂದೂ ಧರ್ಮದ ಪ್ರಕಾರ ಜೀವಿಗೆ ಪುನರ್ಜನ್ಮ ಇರುತ್ತದೆ. ಅವರವರ ಕರ್ಮ ಫಲಿತಾಂಶದ ಮೇಲೆ ಪುನರ್ಜನ್ಮ ಪಡೆಯಬೇಕಾಗುತ್ತದೆ ಎಂದು ಪುರಾಣಗಳು ವಿವರಿಸುತ್ತವೆ. ಯಾವ ಯಾವ ಕರ್ಮಕ್ಕೆ ಯಾವ ಯಾವ ಜನ್ಮ ಪಡೆಯ ಬೇಕೇಂಬುದು ಅಷ್ಠಾದಶ ಪುರಾಣದಲ್ಲೊಂದಾದ ಗರುಡ ಪುರಾಣದಲ್ಲಿ ಬಹಳ ಅದ್ಭುತವಾಗಿ ವಿವರಿಸಿದ್ದಾರೆ.
ವಿಧ ವಿಧವಾದ ಮರಣಗಳೇಕೆ ಸಂಭವಿಸುತ್ತವೆ, ಮೃತ ಪಟ್ಟ ನಂತರ ಜೀವಿಗೆ ಏನು ನೆಡೆಯುತ್ತದೆ. ಆತ್ಮ ಎಲ್ಲಿಗೆ ಪ್ರಯಾಣಿಸುತ್ತದೆ? ಆತ್ಮ ಪಡುವ ಸುಖ ದುಃಖ ಏನೆಂದು ಗರುಡ ಪುರಾಣ ಇಂಚು ಇಂಚಾಗಿ ವಿವರಿಸಿದೆ. ಮನುಷ್ಯನ ಮರಣದ ನಂತರ ಅವನ ವಾರಸರು ಅವರ ಆತ್ಮಕ್ಕೆ ಶಾಂತಿ ದೊರೆಯಲು ಎಂತಹ ಪೂಜೆಗಳನ್ನು ಮಾಡಬೇಕು, ಮರಣದ ನಂತರ ದೇಹವನ್ನು ಯಾವ ಸಮಯದಲ್ಲಿ ಅಗ್ನಿಗೆ ಆಹುತಿ ಮಾಡಬೇಕೆಂಬ ವಿಷಯವು ಸಹ ಗರುಡ ಪುರಾಣದಲ್ಲಿ ಕಾಣಬಹುದು. ಶ್ರೀ ಮಹಾವಿಷ್ಣುವಿನ ವಾಹನ ಗರುಡ,ಗರುಡನಿಗೆ ಬಹಳ ಸಂದೇಶಗಳಿರುತ್ತವೆ, ಅವುಗಳನ್ನು ಬಗೆಹರಿಸಿಕೊಳ್ಳಲು ಗರುಡ ಯಾವಾಗಲೂ ಶ್ರೀ ವಿಷ್ಣುವಿನ ಬಳಿ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆ ರೀತಿ ಅವರಿಬ್ಬರ ನಡುವೆ ನೆಡೆದ ಪ್ರಶ್ನೋತ್ತರ ವಿವರಗಳೆ ಗರುಡ ಪುರಾಣ.
ಹಿಂದೂ ಧರ್ಮದ ದಲ್ಲಿ ಮನುಷ್ಯನ ಮರಣ ಬಹಳ ಪ್ರತ್ಯೇಕವಾದದು. ಮರಣಕ್ಕೂ ಮುಂಚೆ ಮರಣಾ ನಂತರ, ಮರಣದ ಸಮಯದಲ್ಲಿ ಆಚರಿಸಬೇಕಾದ ಎಷ್ಟೋ ಪದ್ಧತಿಗಳನ್ನು ಗರುಡ ಪುರಾಣ ವಿವರಿಸುತ್ತದೆ. ಮನುಷ್ಯ ಹೆಣವಾಗಿದ್ದ ಕೂಡಲೇ ಅವರನ್ನು ಬೇಗನೇ ದಹನವಾಗಿಸುವಂತೆ ಬಂಧುಗಳು ಅಕ್ಕಪಕ್ಕದ ಮನೆಯವರು ಹಿರಿಯರು ಹೇಳುತ್ತಾರೆ, ಹೀಗೆಕೆ ಮಾಡಬೇಕೆಂದು ಹೇಳುತ್ತಾರೆ ಎನ್ನುವುದಕ್ಕೆ ಗರುಡ ಪುರಾಣದಲ್ಲಿ ಹಲವಾರು ಉದಾಹರಣೆಗಳಿವೆ. ಅದೇನೇಂದರೆ ಮೃತ ದೇಹವನ್ನು ಸೂರ್ಯ ಹಸ್ತಮಿಸುವ ಮೊದಲೇ ದಹನವಾಗಿಸಬೇಕು. ಒಂದು ವೇಳೆ ಸೂರ್ಯ ಮುಳುಗುವುದರೊಳಗೆ ದಹನ ವಾಗಿಸದಿದ್ದರೆ ಜೀವಿಗೆ ಮೋಕ್ಷ ಲಭಿಸುವುದಿಲ್ಲಾ ಆ ವ್ಯಕ್ತಿ ಪ್ರೇತಾತ್ಮವಾಗಿ ಅಲ್ಲಲ್ಲೇ ಅಲೆದಾಡುತ್ತಾರೆ. ಆದ್ದರಿಂದ ಸೂರ್ಯ ಮುಳುಗುವ ಮುಂಚೆ ದಹನ ಕಾರ್ಯ ಮಾಡಬೇಕೆಂದು ಮಹಾವಿಷ್ಣು ಗರುಡನಲ್ಲಿ ಹೇಳುತ್ತಾರೆ.
ಆದರೆ ಗರುಡನಿಗೆ ಮತ್ತೊಂದು ಸಂದೇಹ ಬರುತ್ತದೆ, ಅದೇನೇಂದರೆ ಸೂರ್ಯ ಅಸ್ತಮಿಸದ ನಂತರ ಮೃತ ಪಟ್ಟರೇ ಏನು ಮಾಡುವುದು ಆಗ ಅವರು ಪ್ರೇತಾತ್ಮವಾಗುತ್ತಾರಾ ಎಂದು ಕೇಳುತ್ತಾರೆ ಗರುಡ. ಈ ಪ್ರಶ್ನೆಗೆ ಉತ್ತರ ನೀಡಿದ ಮಹಾ ವಿಷ್ಣು, ಗರುಡ ಒಂದು ವೇಳೆ ಸೂರ್ಯಾಸ್ತದ ನಂತರ ಮೃತ ಪಟ್ಟರೆ ಆ ರಾತ್ರಿಯಲ್ಲಾ ದೇಹವನ್ನು ಹಾಗೆಯೇ ಇರಿಸಿಕೊಂಡು ಮುಂಜಾನೆ ಸೂರ್ಯ ಉದಯಿಸಿದ ಬಳಿಕ ಮತ್ತೆ ಮುಳುಗುವುದರೊಳಗೆ ದಹನ ಕಾರ್ಯ ಪೂರ್ಣಗೊಳಿಸಬೇಕು. ಮನುಷ್ಯ ಮುಂಜಾನೆ ಮೃತ ಪಟ್ಟರೆ ಸಂಜೆ ತನಕ ದಹನ ಕಾರ್ಯಕ್ಕೆ ಸಮಯವಿರುತ್ತದೆ, ದಹನ ಕಾರ್ಯಕ್ಕಾಗಿ ಚಟ್ಟಾ ಕಟ್ಟಲು ಕಟ್ಟಿಗೆ ಸಿದ್ಧ ಪಡಿಸಲು ಅಥಾವ ಮಣ್ಣು ಮಾಡಲು ಸ್ಮಶಾನದಲ್ಲಿ ಜಾಗ ಸಿದ್ಧಪಡಿಸಲು ಹಾಗೆಯೆ ಎಲ್ಲಾ ಪದ್ಧತಿಗಳನ್ನು ನೆಡೆಸಲು ಸಾಕಷ್ಟು ಸಮಯವಿರುತ್ತದೆ.
ಸೂರ್ಯಾಸ್ತ ಬಳಿಕ ಮೃತ ಪಟ್ಟಾಗ ದಹನ ಕಾರ್ಯ ನೆಡೆಸಲು ಅವಸರ ಮಾಡುತ್ತಾರೆ ಹಾಗಾಗಿ ಯಾವ ಕಾರ್ಯವು ಸರಿಯಾಗಿ ಆಗುವುದಿಲ್ಲ. ಸರಿಯಾದ ಕಾರ್ಯ ಮಾಡದೇ ದಹನ ಮಾಡಿದರೆ ಆತ್ಮಕ್ಕೆ ಮೋಕ್ಷ ಲಭಿಸುವುದಿಲ್ಲಾ. ಆದ್ದರಿಂದ ಸೂರ್ಯಾಸ್ತ ಸಮಯದಲ್ಲಿ ಮೃತ ಪಟ್ಟರೇ ಆ ಶರೀರವನ್ನು ಮರುದಿನವೇ ದಹನ ಮಾಡಬೇಕು. ಆದರೆ ಶರೀರವನ್ನು ಮಾತ್ರ ಅಪ್ಪಿ ತಪ್ಪಿ ಒಂಟಿಯಾಗಿ ಬಿಡಬಾರದು ಯಾಕೆಂದರೆ ಯಾವುದೋ ದುಷ್ಟ ಆತ್ಮ ಆ ಶರೀರವನ್ನು ಆಕ್ರಮಿಸಬಹುದು ಅಥಾವ ಕೆಟ್ಟ ಆತ್ಮ ಅವರ ಕುಟುಂಬಸ್ಥರ ಅಥವಾ ಸಂಬಂಧಿಕರ ದೇಹದಳೊಗೆ ಸೇರಿ ಹಿಂಸೆ ಮಾಡಬಹುದು ಅಥವಾ ಕೆಟ್ಟ ಆತ್ಮ ಶರೀರವಿರುವ ಮನೆಗೆ ಪ್ರವೇಶಿಸಿ ಅಲ್ಲೇ ನಿವಾಸ ಸಿದ್ಧ ಪಡಿಸಿಕೊಳ್ಳುತ್ತದೆ.
ಆದ್ದರಿಂದಲೇ ಶರೀರವನ್ನು ಒಂಟಿಯಾಗಿ ಬಿಡಬಾರದು. ಅದು ಮಾತ್ರವಲ್ಲದೆ ಒಂದು ವೇಳೆ ಶರೀರವನ್ನು ಮನೆಯಲ್ಲಿ ಇರಿಸಿಕೊಳ್ಳದೆ ಒಂಟಿಯಾಗಿ ಹೊರಗಿರಿಸಿದರೆ ಅಕಸ್ಮಾತ್ ಆಗಿ ನಾಯಿ, ಬೆಕ್ಕು ಹದ್ದು ಅಥವಾ ಯಾವುದೇ ಮಾಂಸಹಾರ ಜೀವಿ ಶರೀರವನ್ನು ಕಿತ್ತು ತಿನ್ನುವ ಅವಕಾಶ ಇರುತ್ತದೆ. ಹಾಗಾಗಿ ದೇಹವನ್ನು ಅನುಕ್ಷಣ ರಕ್ಷಿಸುವಂತಿರಬೇಕು.