ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸಬೇಡಿ, ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತಾರೆ ಚಾಣಿಕ್ಯ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮಕ್ಕಳು ಚಿಕ್ಕವರಿದ್ದಾರೆ ಎಂದು ಅನೇಕ ಪೋಷಕರು ಮಕ್ಕಳು ತಪ್ಪು ಮಾಡುತ್ತಿದ್ದರೂ ಸಹ ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇದೊಂದು ತಪ್ಪು ಮಕ್ಕಳನ್ನು ಮಾತ್ರವಲ್ಲದೇ ಪೋಷಕರಿಗೂ ಸಮಸ್ಯೆ ತಂದೊಡ್ಡುತ್ತದೆ. ಹಾಗಿರುವಾಗ ಮಕ್ಕಳು ಮಾತನ್ನು ಕೇಳುವಂತೆ ಮಾಡಲು ಆಚಾರ್ಯ ಚಾಣಕ್ಯ ನೀತಿಯಲ್ಲಿ ಕೆಲವು ಉಲ್ಲೇಖಗಳಿವೆ. ಈ ಕುರಿತಾಗಿ ನೀವು ತಿಳಿಯಲೇಬೇಕು. ಮನೆಯೇ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು ಎನ್ನುವ ಮಾತಿದೆ. ಮಕ್ಕಳ ಮೊದಲ ಕಲಿಕೆ ಆರಂಭವಾಗುವುದು ಮನೆಯಿಂದಲೇ. ಮಕ್ಕಳ ಭವಿಷ್ಯ ಆ ಮಗುವಿನ ಪೋಷಕರ ಮೇಲೆ, ಹುಟ್ಟಿ ಬೆಳೆದ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಮನೆಯಲ್ಲಿ ಉತ್ತಮ ಹವ್ಯಾಸಗಳನ್ನು, ಗುಣಗಳನ್ನು ಬೆಳೆಸಬೇಕು. ಚಾಣಕ್ಯ ನೀತಿಯ ಪ್ರಕಾರ, ಪೋಷಕರು ಮಕ್ಕಳಲ್ಲಿ ಯಾವೆಲ್ಲಾ ಗುಣಗಳನ್ನು ಬೆಳೆಸಬೇಕು ಗೊತ್ತಾ? ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು..
 
ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಹೇಳುವ ಪ್ರಕಾರ, ನಾವು ನಮ್ಮ ಮಗುವಿನ ಕಡೆಗೆ ಗಮನ ಕೊಡದಿದ್ದರೆ, ಶೀಘ್ರದಲ್ಲೇ ಮಗು ಕೆಟ್ಟ ಅಭ್ಯಾಸಗಳನ್ನು ಕಲಿಯಲು ಪ್ರಾರಂಭಿಸುತ್ತದೆ. ಮಗುವನ್ನು ಯೋಗ್ಯವಾಗಿಸಲು, ಪೋಷಕರು ಈ ವಿಷಯಗಳನ್ನು ಎಂದಿಗೂ ಮರೆಯಬಾರದು. ಚಾಣಕ್ಯ ನೀತಿಯ ಪ್ರಕಾರ ಪೋಷಕರು ಮಕ್ಕಳನ್ನು ಬೆಳೆಸುವಲ್ಲಿ ಯಾವೆಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು? ಮಕ್ಕಳ ವಿಚಾರದಲ್ಲಿ ಈ ವಿಷಯಗಳನ್ನು ಮರೆತರೆ ಏನಾಗುವುದು? ಈ ಎಲ್ಲದರ ಬಗ್ಗೆ ನೋಡೋಣ.

ಮೊದಲಿಗೆ ಸುಳ್ಳು ಹೇಳುವುದು. ಮಗು ಸುಳ್ಳು ಹೇಳಲು ಪ್ರಾರಂಭಿಸಿದರೆ ಪೋಷಕರು ಗಂಭೀರವಾಗಿರಬೇಕು ಮತ್ತು ಮೊದಲಿನಿಂದಲೂ ಈ ಅಭ್ಯಾಸವನ್ನು ತೆಗೆದುಹಾಕಲು ಪ್ರಯತ್ನಿಸಬೇಕು ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ. ಇದನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದಿದ್ದರೆ, ಈ ಅಭ್ಯಾಸವು ಪೋಷಕರಿಗೆ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಚಾಣಕ್ಯನ ಪ್ರಕಾರ, ಮಕ್ಕಳಲ್ಲಿ ಸುಳ್ಳು ಹೇಳುವ ಪ್ರವೃತ್ತಿ ಬಹಳ ಬೇಗ ಬೆಳೆಯುತ್ತದೆ. ಸುಳ್ಳು ಹೇಳುವ ಚಟ ಬೆಳೆಯದಂತೆ ಮಕ್ಕಳಿಗೆ ಸ್ವಚ್ಛಂದದ ವಾತಾವರಣ, ಶಿಕ್ಷಣ, ಸಂಸ್ಕೃತಿಯನ್ನು ಪೋಷಕರು ಕಲ್ಪಿಸಿಕೊಡಬೇಕು.

ಎರಡನೆಯದಾಗಿ ಮೊಂಡುತನದ ಅಭ್ಯಾಸ. ಚಾಣಕ್ಯನ ಪ್ರಕಾರ, ಕೆಲವು ಮಕ್ಕಳು ತುಂಬಾ ಹಠವಂತರಾಗಿರುತ್ತಾರೆ. ಹೆತ್ತವರ ಮಾತನ್ನು ಕೇಳುವ ತಾಳ್ಮೆಯೂ ಅವರಿಗಿರುವುದಿಲ್ಲ. ಅಂತಹ ಮಕ್ಕಳಿಗೆ ಸರಿ-ತಪ್ಪುಗಳ ಅರಿವೇ ಆಗುವುದಿಲ್ಲ. ಮಕ್ಕಳು ಹೆಚ್ಚು ಪ್ರೀತಿಯಿಂದ ಕೂಡ ಹಠಮಾರಿಗಳಾಗುತ್ತಾರೆ. ಮಕ್ಕಳೆಡೆಗೆ ಸರಿಯಾಗಿ ಗಮನ ಕೊಡದಿದ್ದರೆ ಮಕ್ಕಳಲ್ಲಿಯೂ ಈ ಅಭ್ಯಾಸ ಬಹುಬೇಗ ನೆಬೆಳೆಯುತ್ತದೆ. ಪೋಷಕರು ಮಕ್ಕಳ ಮಾತನ್ನು ಗಂಭೀರವಾಗಿ ಆಲಿಸಬೇಕು ಎನ್ನುತ್ತದೆ ಚಾಣಕ್ಯ ನೀತಿ.

ಪ್ರತಿಯೊಂದು ಮಗುವೂ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು ಅದು ಅವನನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಈ ಗುಣವನ್ನು ಗುರುತಿಸಿ ಮತ್ತು ಪ್ರೋತ್ಸಾಹಿಸಿ. ಮಕ್ಕಳನ್ನು ಗೌರವಿಸಿ ಮತ್ತು ಅವರೊಂದಿಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಈ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿದ್ದಾಗೆಯೇ ಸರಿ ದಾರಿಗೆ ತರಬೇಕು. ಪ್ರೀತಿಯಿಂದ ಮಕ್ಕಳ ತಪ್ಪು-ಸರಿಗಳ ಬಗ್ಗೆ ವಿವರಿಸಿ.

ಮೂರನೆಯದಾಗಿ ಮನೆಯ ಪರಿಸರವನ್ನು ಚೆನ್ನಾಗಿ ಇಡುವುದು. ಮಕ್ಕಳ ಮೇಲೆ ಮನೆಯ ವಾತಾವರಣವೇ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳಿದ್ದಾನೆ. ಆದ್ದರಿಂದ, ಪೋಷಕರು ಯಾವಾಗಲೂ ಮನೆಯ ಪರಿಸರವನ್ನು ಉತ್ತಮವಾಗಿಡಲು ಪ್ರಯತ್ನಿಸಬೇಕು. ಪಾಲಕರು ಮಕ್ಕಳೊಂದಿಗೆ ಪರಸ್ಪರ ಉತ್ತಮವಾಗಿ ವರ್ತಿಸಬೇಕು. ಅವರೊಂದಿಗೆ ಉತ್ತಮ ಭಾಷಾ ಶೈಲಿಯನ್ನು ಬಳಸಬೇಕು. ಈ ವಿಷಯಗಳು ಮಕ್ಕಳ ಮನಸ್ಸು ಮತ್ತು ಮೆದುಳಿನ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ ಮನೆಯ ಪರಿಸರವು ಮಕ್ಕಳ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕೋಪ ಅಥವಾ ಸಿಟ್ಟಿನಿಂದ ಮಕ್ಕಳನ್ನು ನಿಭಾಯಿಸಲು ಎಂದೂ ಸಾಧ್ಯವಿಲ್ಲ. ಮಕ್ಕಳಿಗೆ ತಿಳಿಹೇಳಬೇಕಾದರೆ ಪ್ರೀತಿಯಿಂದ ಅವರೊಡನೆ ನಡೆದುಕೊಳ್ಳಿ. ಆಗ ನಿಮ್ಮ ಪ್ರತಿ ಮಾತನ್ನೂ ಸಹ ಮಕ್ಕಳು ಕೇಳುತ್ತಾರೆ. ಐದು ವರ್ಷದ ನಂತರ ಮಕ್ಕಳೊಂದಿಗೆ ಸ್ವಲ್ಪ ಕಟ್ಟುನಿಟ್ಟಾಗಿರಲು ಪ್ರಾರಂಭಿಸಿ. ಆದರೆ ಪ್ರಿತಿಯಿಂದ ತಿಳಿಹೇಳುವದರಿಂದ ಮಕ್ಕಳು ಬಹುಬೇಗ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಮಕ್ಕಳ ಮೇಲೆ ಕೈ ಎತ್ತುವುದು, ಹೊಡೆಯುವುದನ್ನು ತಪ್ಪಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ನಾಲ್ಕನೆಯದಾಗಿ ಕಥೆಯನ್ನು ಕೇಳುವ ಅಭ್ಯಾಸ ಬೆಳೆಸಬೇಕು.

ಚಾಣಕ್ಯ ನೀತಿ ಪ್ರಕಾರ, ಮಕ್ಕಳು ಚಿಕ್ಕವಯಸ್ಸಿನಲ್ಲಿದ್ದಾಗಲೇ ಅವರಿಗೆ ಮಹಾನ್ ಪುರುಷರ, ಸಮಾಜಕ್ಕೆ ಮಾದರಿಯಾಗಿರು ಉತ್ತಮ ಕಥೆಗಳ ಸಾರವನ್ನು ವಿವರಿಸಬೇಕು. ಇದು ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತದೆ. ಅವರಂತೆಯೇ ನಾನೂ ಆಗಬೇಕೆಂಬ ಹಂಬಲ ಮಕ್ಕಳಲ್ಲಿ ಬೆಳೆಯುತ್ತದೆ. ಈ ಕಥೆಗಳು ಮಕ್ಕಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಆದಷ್ಟು ಮಕ್ಕಳಿಗೆ ಸ್ಪೂರ್ತಿದಾಯಕ ಕಥೆಯನ್ನೇ ಹೇಳಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *