ಹುಲಿಕಲ್ ನಟರಾಜ್ ಅವರಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಡ್ರೋನ್ ಪ್ರತಾಪ್

0 7

ಒಂದು ಸಮಯದಲ್ಲಿ ಟಿವಿ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಹೆಸರು ಡ್ರೋನ್ ಪ್ರತಾಪ್. ಹುಟ್ಟಿದರೆ ಡ್ರೋನ್ ಪ್ರತಾಪ ನಂತಹ ಮಕ್ಕಳು ಹುಟ್ಟಬೇಕು ಎಂದು ಕನಸನ್ನು ಕಂಡಂತಹ ಎಷ್ಟೋ ತಂದೆ-ತಾಯಿಗಳು ಆತ ಮಾಡಿದಂತಹ ಸಾಧನೆ ಶೂನ್ಯ ಆತ ತೋರಿಸಿದಂತಹ ಪ್ರಶಸ್ತಿ ಪುರಸ್ಕಾರಗಳು ಎಲ್ಲವೂ ಸುಳ್ಳು ಎಂಬ ಸತ್ಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಂಕುಬೂದಿ ಎರಚಿ ಬಿಟ್ಟ ಚಳ್ಳೆಹಣ್ಣು ತಿನ್ನಿಸಿದ ಮೋಸ ಮಾಡಿದ ಎಂದು ಜನರು ತಮ್ಮ ಭಾವನೆಗಳನ್ನು ಹೊರಹಾಕುತ್ತಿದ್ದಾರೆ.

ಒಂದಿಬ್ಬರಿಗೆ ಚಳ್ಳೆಹಣ್ಣು ತಿನ್ನಿಸಬಹುದು ಕಷ್ಟಪಟ್ಟು ಒಂದು ನಗರಕ್ಕೆ ಚಳ್ಳೆಹಣ್ಣು ತಿನ್ನಿಸಬಹುದು ಆದರೆ ಒಂದು ದೇಶಕ್ಕೆ ಬೂದಿ ಎರಚಿದ ಎಂದರೆ ಅವನು ಸಾಮಾನ್ಯನಲ್ಲ ಎಂದು ಇನ್ನೂ ಕೆಲವು ಜನರು ಮಾತನಾಡಿಕೊಂಡರು. ಡ್ರೋನ್ ಪ್ರತಾಪ್ ನನ್ನು ಮಾಧ್ಯಮದವರಿಂದ ಹಿಡಿದು ವಿಜ್ಞಾನಿಗಳು ಸಾಹಿತಿಗಳು ಸಂಘ-ಸಂಸ್ಥೆಗಳು ರಾಜಕಾರಣಿಗಳು ಎಲ್ಲರೂ ಕೂಡ ಅವರನ್ನು ವೈಭವಿಕರಣ ಮಾಡಿದರು. ಇಂಥವರಲ್ಲಿ ಹುಲಿಕಲ್ ನಟರಾಜ್ ಅವರು ಕೂಡ ಒಬ್ಬರು ಅವರು ಕೂಡ ಮೋಸ ಹೋಗಿದ್ದಾರೆ. ಕೆಲವೇ ಸಮಯದಲ್ಲಿ ಅಪಾರ ಮಟ್ಟದಲ್ಲಿ ಹೆಸರನ್ನ ಮಾಡಿ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಯನ್ನು ಪಡೆದುಕೊಂಡ ಡ್ರೋನ್ ಪ್ರತಾಪ್ ಅವರು ಮಾಡಿರುವ ನಾಟಕ ಎಲ್ಲರೆದುರು ಪ್ರಶ್ನೆಯಾಗಿ ಉಳಿದುಕೊಂಡಿದೆ. ಅವರನ್ನು ಯಾರೂ ಪ್ರಶ್ನಿಸದೆ ಹೊಗಳಿಕೆಯ ಉನ್ನತ ಮಟ್ಟಕ್ಕೆ ಏರಿಸಿದ ಇದಕ್ಕೆ ಕಾರಣ.

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಈ ವಿಷಯವಾಗಿ ಹುಲಿಕಲ್ ನಟರಾಜ್ ಅವರು ಅನೇಕ ಬಾರಿ ಇದನ್ನು ಪ್ರಮಾಣಿಸಿ ತೋರಿಸಿದ್ದರು ಅನೇಕ ಡೋಂಗಿ ಬಾಬಾಗಳಿಗೆ ಸಿಂಹಸ್ವಪ್ನವಾಗಿರುವಂತಹ ಹುಲಿಕಲ್ ನಟರಾಜ್ ಅವರಿಗೂ ಈ ಡ್ರೋನ್ ಪ್ರತಾಪ್ ಚಳ್ಳೆಹಣ್ಣು ತಿನ್ನಿಸಿದ್ದ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಉಪಾಧ್ಯಕ್ಷರಾಗಿದ್ದ ಇವರು ಈಗ ಹಾಲಿ ಸದಸ್ಯರಾಗಿದ್ದಾರೆ. ಇವರ ಸಂಸ್ಥೆಯಲ್ಲಿಯೇ ಪ್ರತಾಪ್ ಅವರಿಗೆ ಯುವ ವಿಜ್ಞಾನಿ ಎಂಬ ಬಿರುದನ್ನು ನೀಡಿದ್ದರು. ಅಷ್ಟೇ ಅಲ್ಲದೆ ಚುಂಚನಗಿರಿಯಲ್ಲಿ ನಡೆದಂತಹ ರಾಜ್ಯಮಟ್ಟದ ಮಕ್ಕಳ ಮೇಳದಲ್ಲಿ ಅವನಿಗೆ ರಥದ ಮೇಲೆ ಕುಳಿಸಿ ಸ್ವಾಮೀಜಿಗಳು ಸಾಹಿತಿಗಳು ವಿಜ್ಞಾನಿಗಳು ಮಕ್ಕಳಾದಿಯಾಗಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು ಆಗ ಒಂದು ಕ್ಷಣ ನೀನು ಕಂಡುಹಿಡಿದಿರುವ ಡ್ರೋನ್ ಅನ್ನು ಮಕ್ಕಳ ಮುಂದೆ ಹಾರಿಸು ಎನ್ನುವ ಸರಳವಾದ ಪ್ರಶ್ನೆಯನ್ನೂ ಕೇಳಲಿಲ್ಲ.

ಸಾಹಿತಿಗಳು ಪತ್ರಕರ್ತರು ಎಲ್ಲರೂ ಕೂಡ ಅವನನ್ನು ವೈಭವೀಕರಣ ಮಾಡಿದ್ದರು ತುರುವೇಕೆರೆಯಲ್ಲಿ ನಡೆದಂತಹ ಸಾಹಿತ್ಯ ಸಮ್ಮೇಳನದಲ್ಲಿ ಹುಲಿಕಲ್ ನಟರಾಜ್ ಅವರು ಅಧ್ಯಕ್ಷರಾಗಿದ್ದರು ಆ ಸಮಯದಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು ಯಾರು ಜನರು ಬಂದಿರಲಿಲ್ಲ ಆದರೆ ಸಂಜೆ ಡ್ರೋನ್ ಪ್ರತಾಪ್ ಅವರು ಬರುತ್ತಾರೆ

ಅವರನ್ನ ಕರ್ನಾಟಕದ ಕೀರ್ತಿ ಎಂದು ವೈಭವೀಕರಣ ಮಾಡಿದ್ದಕ್ಕಾಗಿ ಅವರು ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಾರೆ. ಅಲ್ಲಿ ಒಂದು ಗಂಟೆಗಳ ಸಮಯ ತಾನು ಏನೆಲ್ಲಾ ಸಾಧನೆ ಮಾಡಿದ್ದೇನೆ ಎಂಬುದನ್ನು ಉಪನ್ಯಾಸದ ರೀತಿಯಲ್ಲಿ ಭಾಷಣ ಮಾಡುತ್ತಾರೆ. ಆ ಸಮಯದಲ್ಲಿಯೂ ಕೂಡ ನೀವು ಡ್ರೋನ್ ಹಾರಿಸಿದ್ದಿರಿ ನೀವು ಕಂಡುಹಿಡಿದ ಡ್ರೋನ್ ಅನ್ನು ಇಲ್ಲಿ ಹಾರಿಸುವುದಕ್ಕೆ ಸಾಧ್ಯವೇ ಎಂದು ಕೂಡಾ ಯಾರೂ ಪ್ರಶ್ನಿಸಲಿಲ್ಲ.

ಸಿನಿಮಾ ಕ್ಷೇತ್ರದಲ್ಲಿ ಅನೇಕ ನಿರ್ದೇಶಕರು ಇವರ ಕುರಿತಾದ ಸಿನಿಮಾವನ್ನ ಮಾಡುವುದಕ್ಕೆ ಹೊರಟಿದ್ದರು. ನಟ ಜಗ್ಗೇಶ್ ಅವರು ತಮ್ಮ ಮನೆಗೆ ಕರೆಸಿ ಇವರಿಗೆ ಆಥಿತ್ಯವನ್ನು ನೀಡಿದ್ದರು. ಅನೇಕ ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಿಗೆ ಇವರನ್ನು ಅತಿಥಿಯನ್ನಾಗಿ ಕರೆಸಲಾಗುತ್ತಿತ್ತು ಆ ಸಮಯದಲ್ಲಿ ಅವರ ಭಾಷಣವನ್ನು ಕೇಳಿದ ಯಾರಾದರೂ ಒಬ್ಬರು ಪ್ರಶ್ನೆ ಮಾಡಿದ್ದರೆ ಅಲ್ಲಿ ಚರ್ಚೆ ನಡೆಯುತ್ತಿತ್ತು ಆಗ ಒಂದಷ್ಟು ವಿಷಯಗಳು ಬಯಲಿಗೆ ಬರುತ್ತಿತ್ತು ಅವರು ಅಷ್ಟು ಪ್ರಚಾರವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಈಗ ಡ್ರೋನ್ ಪ್ರತಾಪ್ ಅವರ ಅಸಲಿ ಮುಖ ಬಯಲಾಗಿದ್ದು ಎಲ್ಲರಿಗೂ ಅವನು ಮಾಡಿದ ನಾಟಕ ಏನೆಂಬುದು ತಿಳಿದಿದೆ ಹಾಗಾಗಿ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತು ಸುಳ್ಳಲ್ಲ. video credit for Hulikal nataraj

Leave A Reply

Your email address will not be published.