ಹಿಂದೂ ಧರ್ಮವು ವಿಶ್ವದ ಪುರಾತನ ಧರ್ಮವಾಗಿದ್ದು, ಭಾರತೀಯ ಉಪಖಂಡದ ಪ್ರಧಾನ ಧರ್ಮವಾಗಿದೆ ಹಿಂದೂ ಧರ್ಮವು ಹದಿನೆಂಟು ಪುರಾಣಗಳನ್ನು ಒಳಗೊಂಡಿದ್ದು ಅದರಲ್ಲಿ ಗರುಡ ಪುರಾಣವು ಒಂದಾಗಿದ್ದು ಅದಕ್ಕೆ ವಿಶೇಷವಾದ ಮಹತ್ವವಿದೆ. ಉನ್ನತ ಜೀವನಕ್ಕಾಗಿ ಗರುಡ ಪುರಾಣವನ್ನು ತಿಳಿದಿರಬೇಕು ಎಂದು ಹಿರಿಯರು ಕಿರಿಯರಿಗೆ ಕಿವಿ ಮಾತನ್ನು ಹೇಳುತ್ತಾರೆ. ಹಾಗೆಯೇ ಗರುಡ ಪುರಾಣದಲ್ಲಿ ಉನ್ನತ ಹಾಗೂ ಉತ್ತಮ ಜೀವನಕ್ಕಾಗಿ ಕೆಲವು ನಿಯಮಗಳನ್ನು ರೂಪಿಸಲಾಗಿದೆ.
ಜೀವನದಲ್ಲಿ ಧರ್ಮ ಹಾಗೂ ಕರ್ಮದ ದಾರಿಯಲ್ಲಿ ಹೇಗೆ ನಾವು ನಡೆಯಬೇಕು ಎಂದು ತಿಳಿಸಿಕೊಡುವ ಜಗದ್ದೋದಾರಕನಾದ ವಿಷ್ಣುನು ತನ್ನ ವಾಹನವಾದ ಗರುಡನಿಗೆ ಧರ್ಮ ಕರ್ಮ ಪಾದ ಕುರಿತಾಗಿ ಜ್ಞಾನವನ್ನು ತಿಳಿಸಿದನು.

ಗರುಡ ಹಾಗೂ ವಿಷ್ಣುವಿನ ಜ್ಞಾನ ಮತ್ತು ಸುಂದರವಾದ ಸಂಭಾಷಣೆಯೇ ಈ ಗರುಡ ಪುರಾಣದ ಮುನ್ನುಡಿ ನಮ್ಮ ಜೀವನಕ್ಕೆ ಬೇಕಾದ ಕೆಲವು ನಿಯಮಗಳನ್ನು ತಿಳಿಸಲಾಗಿದೆ ಅದರಲ್ಲಿ ಈ ಆರು ದುರಭ್ಯಾಸಗಳನ್ನು ಬಿಟ್ಟರೆ ಜೀವನದಲ್ಲಿ ಏಳಿಗೆ ಕಾಣಬಹುದು. ಹಾಗಾದ್ರೆ ಯಾವುವು ಆ ದುರಭ್ಯಾಸಗಳು ಅನ್ನೋದನ್ನ ನೋಡೋಣ ಬನ್ನಿ.

ಮೊದಲನೆಯದು ಅಸೂಹೆ ತನ್ನೊಡಲಿನ ಕಿಡಿ ಮೊದಲು ತನ್ನನ್ನು ಸುಟ್ಟು ತದ ನಂತರ ಮತ್ತೊಬ್ಬರನ್ನು ಸುಡುತ್ತದೆ ಎಂಬ ಮಾತಿನಂತೆ. ಮತ್ತೊಬ್ಬರ ಏಳಿಗೆ ಕಂಡು ಅಸೂಯೆ ಪಡುತ್ತ ಕೂತರೆ ನಾವು ಇದ್ದಲ್ಲೇ ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಏಳಿಗೆ ಕಂಡು ಅಸೂಯೆ ಪಡುವ ವ್ಯಕ್ತಿ ಎಂದಿಗೂ ಸುಖದಿಂದ ಇರಲು ಸಾಧ್ಯವಿಲ್ಲ.ಮತ್ತೊಬ್ಬರ ಏಳಿಗೆಯ ಬಗ್ಗೆ ಚಿಂತಿಸುತ್ತ, ತಮ್ಮ ಏಳಿಗೆಯ ಗುರಿಯನ್ನು ತಲುಪಲು ಸಾಧ್ಯವಾಗದೆ ಕೊರಗಿನಲ್ಲೇ ಜೀವನ ಸಾಗಿಸಬೇಕಾಗುತ್ತದೆ.

ಎರಡನೆಯದು ಚಿಂತೆ ಚಿತೆ ಮನುಷ್ಯನ ದೇಹವನ್ನು ಸುಟ್ಟರೆ ಚಿಂತೆ ಮನುಷ್ಯನ ಮನಸ್ಸನ್ನು ಸುಡುತ್ತದೆ. ಒಬ್ಬ ವ್ಯಕ್ತಿ ನಿರಂತರವಾಗಿ ತನ್ನ ಜೀವನವನ್ನು ಚಿಂತೆಯಲ್ಲೇ ಕಳೆದರೆ ಅವನ ಮೆದುಳು ನಿಷ್ಕ್ರಿಯೆಗೊಂಡು ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೊಸ ಹೊಸ ಆಲೋಚನೆಗಳ ದಾರಿಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ತಪ್ಪಾದ ಆಲೋಚನೆಗಳು ಹೆಚ್ಚಾಗಿ ಜೀವಕ್ಕೆ ಹಾನಿಯಾಗಬಹುದು ಎಚ್ಚರ. ಹಾಗಾಗಿ ಯಾವುದಕ್ಕೂ ಹೆಚ್ಚು ಕೊರಗದೆ ,ಚಿಂತಿಸದೆ ಬಂದದ್ದು ಬರಲಿ ಎಲ್ಲವನ್ನೂ ಎದುರಿಸುವ ಧೈರ್ಯ ಕೊಡು ತಂದೆ ಎಂದು ಆ ದೇವನಲ್ಲಿ ಬೇಡಿಕೊಂಡು ಮುನ್ನುಗ್ಗಿ.

ಮೂರನೆಯದಾಗಿ ಹೆದರಿಕೆ ಅಥವಾ ಭಯ. ನಮ್ಮ ಮೊದಲ ಶತ್ರುವೆ ಈ ಭಯ ಭಯದಿಂದ ನೋಡಿದರೆ ಇರುವೆಯು ಸಿಂಹದಂತೆ ಕಾಣುತ್ತದೆ ಅದೇ ಧೈರ್ಯದಿಂದ ಮುನ್ನುಗ್ಗಿದರೆ ಸಿಂಹ ಕೂಡ ಇರುವೆಯ ಹಾಗೆ ಕಾಣುತ್ತೆ. ಜೀವನದಲ್ಲಿ ಅದೇನೇ ತೊಡಕುಗಳು ,ಕಷ್ಟಗಳು ಎದುರಾದರೂ ಹೆದರದೆ ಧೈರ್ಯದಿಂದ ಮುನ್ನುಗಿದ್ದರೆ ಜಯ ಎಂದಿಗೂ ನಮ್ಮದೇ ಆಗಿರುತ್ತದೆ.

ನಾಲ್ಕನೆಯದು ಕೋಪ ಕೋಪದಲ್ಲಿ ಕುಯ್ದ ಮೂಗು ಎಂದೂ ವಾಪಸ್ಸು ಬರಲಾರದು ಎನ್ನುವ ಗಾದೆ ಮಾತಿನಂತೆ. ಕೋಪದಿಂದ ತೆಗೆದುಕೊಂಡ ನಿರ್ಧಾರ ಎಂದಿಗೂ ಸರಿಯಾಗಲಾರದು.ಹಾಗಾಗಿ ಜೀವನದಲ್ಲಿ ಎಂದಿಗೂ ಕೋಪಕ್ಕಿಂತ ಶಾಂತತೆ ಗೆ ಹೆಚ್ಚಿನ ಆದ್ಯತೆ ನೀಡಿ. ಐದನೆಯದಾಗಿ ಸೋಮಾರಿತನ, ಸೋಮಾರಿತನ ನಮ್ಮ ಜೀವನದ ಮತ್ತೊಂದು ವೈರಿ. ಈ ವೈರಿಯಿಂದ ನಾವೆಷ್ಟೇ ಚಾಣಾಕ್ಯರಾಗಿದ್ದರು ನಮಗೆ ಬರುವಂತಹ ಅವಕಾಶಗಳನ್ನು ಕೈ ಚೆಲ್ಲಿ ಕೂತು ಬಿಡುತ್ತೇವೆ. ಕೂತು ತಿಂದ್ರೆ ಕುಡಿಕೆ ಹೊನ್ನಿದ್ದರು ಸಾಲದು ಎಂಬಂತೆ ಸೋಮಾರಿಯಾಗದೆ ದುಡಿದು ತಿಂದರೆ ಆ ವ್ಯಕ್ತಿಗೊಂದು ಸಮಾಜದಲ್ಲಿ ಉನ್ನತವಾದ ಗೌರವ ದೊರಕುತ್ತದೆ.

ಇನ್ನ ಕೊನೆಯದಾಗಿ ನಕಾರಾತ್ಮಕ ಯೋಚನೆಗಳು, ತಾನು ಮಾಡುವ ಕೆಲಸದಲ್ಲಿ ಪರಾಜಿತನಾಗಿ ಬಿಟ್ಟರೆ ಎಂಬ ನಕಾರಾತ್ಮಕ ಯೋಚನೆಗಳು ನಮ್ಮ ಸಾಧನೆಗೆ ಅಡ್ಡಗಾವಲಾಗಿ ಇರುತ್ತವೆ. ನಕಾರಾತ್ಮಕ ಯೋಚನೆಗಳು ಹೆಚ್ಚಾದಷ್ಟೂ ಮನಸ್ಸಿನ ಆತ್ಮ ಸ್ಥೈರ್ಯ ಕುಂಠಿತಗೊಳ್ಳುತ್ತದೆ.. ಹಾಗಾಗಿ ನಕಾರಾತ್ಮಕ ಯೋಚನೆಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ ಸಕರಾತ್ಮಕ ಯೋಚನೆಗಳನ್ನು ನಿಮ್ಮ ತಲೆಯಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಿ. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ. ನಕಾರಾತ್ಮಕ ಯೋಚನೆಗಳು ಹೆಚ್ಚಾದಾಗ ಆದಷ್ಟು ನಿಮ್ಮ ಮನಸ್ಸನ್ನು ಧ್ಯಾನದ ಕಡೆ ವಾಲುವಂತೆ ಮಾಡಿ..

Leave a Reply

Your email address will not be published. Required fields are marked *