ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಬೆಳ್ಳುಳ್ಳಿಗೆ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಪ್ರಮುಖವಾದ ಔಷಧೀಯ ಗುಣಗಳುಈ ಮಹತ್ವದ ಸ್ಥಾನವನ್ನು ನೀಡಲು ಒಂದು ಮುಖ್ಯ ಕಾರಣವಾಗಿದೆ ಎನ್ನಬಹುದು. ವೈಜ್ಞಾನಿಕವಾಗಿ ನೋಡಿದಾಗ ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಪೋಷಕಾಂಶ ಹಾಗೂ ಅಲಿಸನ್ ಎಂಬ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ರಕ್ತನಾಳವನ್ನು ಶುದ್ಧೀಕರಣ ಗೊಳಿಸುತ್ತದೆ ಹಾಗೂ ಟ್ರೈಗ್ಲಿಸರೈಡ್ ಎನ್ನುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಎಚ್ಡಿಎಲ್ ಎನ್ನುವ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಈ ಮೂಲಕ ಬೆಳ್ಳುಳ್ಳಿ ಹೃದಯ ಸ್ನೇಹಿಯಾಗಿದ್ದು ಬಿಪಿ ಅಸ್ತಮ ಇವುಗಳನ್ನು ಹತೋಟಿಯಲ್ಲಿ ಇಡುತ್ತದೆ. ಉಸಿರಾಟದ ಸಮಸ್ಯೆ ಹಾಗೂ ಶೀತ ನೆಗಡಿ ಕೆಮ್ಮು ಇವುಗಳನ್ನು ಕೂಡ ಕಡಿಮೆ ಮಾಡುತ್ತದೆ. ಹಸಿ ಬೆಳ್ಳುಳ್ಳಿ ತಿಂದರೆ ವಾಸನೆ ಬರುತ್ತದೆ ಎನ್ನುವವರು ಬೆಳ್ಳುಳ್ಳಿ ತಿಂದಾದ ನಂತರ ಒಂದು ಏಲಕ್ಕಿ ಅಥವಾ ಸೋಂಪಿನ ಕಾಳನ್ನು ತಿನ್ನಬಹುದು.
ಬೆಳ್ಳುಳ್ಳಿಯ ಕುರಿತಾಗಿ ವೈಜ್ಞಾನಿಕ ಸಂಶೋಧನೆಗಳನ್ನು ನೋಡಿದರೆ ಇದರ ಬಗ್ಗೆ ಸಾವಿರಾರು ಸಂಶೋಧನೆಗಳು ನಡೆದಿವೆ. ವೈರಸ್ ವಿರುದ್ಧ ಹೋರಾಡುವ ಶಕ್ತಿ ಕೂಡ ಬೆಳ್ಳುಳ್ಳಿಯಲ್ಲಿದೆ. ನಮ್ಮ ದೇಹದಲ್ಲಿ ವೈರಸ್ ನಾಶವಾಗಬೇಕು ಅಂದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿ, ಅಮೃತಬಳ್ಳಿ ಪುಡಿ, ಕಾಳಮೆಗದ ಪುಡಿಯನ್ನು ಹಾಕಿ ಉಂಡೆಯಾಗಿ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಳ್ಳುಳ್ಳಿಯ ಕುರಿತಾಗಿ ಮುಖ್ಯವಾಗಿ ನಡೆದ ಎರಡು ವೈಜ್ಞಾನಿಕ ಸಂಶೋಧನೆಯ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ಮೊದಲಿಗೆ ಅಮೇರಿಕಾದ ಸಂಶೋಧನೆ ಬೆನಿಫಿಟ್ಸ್ ಆಫ್ ಗಾರ್ಲಿಕ್ ಎಂದು ಸಂಶೋಧನೆಯನ್ನು ಮಾಡಿದ್ದು ಇದರ ಪ್ರಕಾರ ಆಕ್ಸ್ಫರ್ಡ್ ಅಕಾಡೆಮಿಕ್, ದ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಇವರು ಹೇಳುವ ಪ್ರಕಾರ, ಎಫೆಕ್ಟ್ಸ್ ಅಫ್ ಗಾರ್ಲಿಕ್ ಆನ್ ಸೇರಂ ಲಿಪಿಡ್ಸ್ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ತುಂಬಾ ಸಹಾಯಕಾರಿಯಾಗಿದೆ ಎಂದು ಈ ಒಂದು ಸಂಶೋಧನೆ ಮೂಲಕ ತಿಳಿದುಬಂದಿದೆ. ವಿಜ್ಞಾನಿಗಳ ಸಮೂಹವೇ ಇದನ್ನು ಒಪ್ಪಿಕೊಂಡು ರುಜುವಾತು ಮಾಡಿದೆ. ಇನ್ನೂ ಮುಂದುವರೆದು ಇವರು ಒಂದು ತೀರ್ಮಾನಕ್ಕೆ ಬರುತ್ತಾರೆ ಅದೇನೆಂದರೆ ದ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಇವರು ವಾಲ್ಯೂಮ್ 30, ಇಶ್ಯೂ 9 ಇದರಲ್ಲಿ ಅವರು ಅಭಿಪ್ರಾಯವನ್ನು ಈ ರೀತಿಯಾಗಿ ಮಂಡಿಸಿದ್ದಾರೆ. ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಬಹಳ ಕಡಿಮೆ ಮಾಡುತ್ತದೆ ಹಾಗೂ ಹಾರ್ಟ್ ಅಟ್ಯಾಕ್ ಗೆ ಸಂಬಂಧಿಸಿದಂತೆ ರಕ್ತನಾಳದಲ್ಲಿ ಆಗುವ ಬ್ಲಾಕ್ಗಳನ್ನು ಕೂಡ ಕಡಿಮೆ ಮಾಡುವ ಅಂಶವನ್ನು ಬೆಳ್ಳುಳ್ಳಿ ನಮ್ಮ ದೇಹದಲ್ಲಿ ಹೆಚ್ಚಿಸುತ್ತದೆ. ಸತತವಾಗಿ ಎರಡು ಮೂರು ತಿಂಗಳುಗಳ ಕಾಲ ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಾವು ಉತ್ತಮ ಫಲಿತಾಂಶವನ್ನು ಕಾಣಬಹುದು.
ಇನ್ನು ಎರಡನೇ ಸಂಶೋಧನೆ ಬಗ್ಗೆ ನೋಡುವುದಾದರೆ, ಜರ್ನಲ್ ಆಫ್ ಇನ್ಫೆಕ್ಟಿಯಸ್ ದಿಸೀಜ್ಸ್ ಅಂಡ್ ಟ್ರೀಟ್ಮೆಂಟ್ ಈ ಸಂಶೋಧನೆ ಪ್ರಕಾರ ಇವರು ಹಲವಾರು ಬ್ಯಾಕ್ಟೀರಿಯಾಗಳ ವಿರುದ್ಧ ಬೆಳ್ಳುಳ್ಳಿ ಹೋರಾಡುತ್ತದೆ ಎನ್ನುವುದರ ಕುರಿತಾಗಿ ಇವರು ತಮ್ಮ ಸಂಶೋಧನೆಯಲ್ಲಿ ಈ ಅಂಶವನ್ನು ಮಂಡಿಸಿದ್ದಾರೆ. ಈ ಸಂಶೋಧನೆ ಮಾಡಿಸುವಾಗ ಬೇರೆ ಬೇರೆ ರೀತಿಯ ಬ್ಯಾಕ್ಟೀರಿಯಾದ ಇನ್ಫೆಕ್ಷನ್ ಹೊಂದಿರುವ ಜನರನ್ನು ಇವರು ಸಂಶೋಧನೆಗಾಗಿ ತೆಗೆದುಕೊಂಡರು ಹಾಗೂ ಅವರಿಗೆ ಬೆಳ್ಳುಳ್ಳಿಯನ್ನು ಸೇವಿಸಲು ನೀಡಿದ್ದರು ಬೆಳ್ಳುಳ್ಳಿ ಸೇವನೆಯಿಂದ ವಿವಿಧ ಬ್ಯಾಕ್ಟರಿಯ ಇನ್ಫೆಕ್ಷನ್ ಹೊಂದಿರುವವರಿಗೆ ಇನ್ಫೆಕ್ಷನ್ ಕಡಿಮೆಯಾಗಿ ಅವರು ಗುಣಮುಖರಾಗಿದ್ದರು. ಈ ಮೂಲಕ ಅವರಿಗೆ ಬೆಳ್ಳುಳ್ಳಿ ಸೂಕ್ಷ್ಮಾಣುಜೀವಿಗಳನ್ನು ಸಹ ನಾಶ ಮಾಡುತ್ತದೆ ಎನ್ನುವುದು ಸಾಬೀತಾಯಿತು. ಹಾಗಾಗಿ ನಾವು ಪ್ರತಿನಿತ್ಯ ಯಾವುದೇ ಭಯವಿಲ್ಲದೆ ನಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬಹುದು.