ಈ ಲೇಖನದ ಮೂಲಕ ಬೆಟ್ಟದನೆಲ್ಲಿಕಾಯಿ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕೃತದಲ್ಲಿ ಬೆಟ್ಟದ ನೆಲ್ಲಿಕಾಯಿಗೆ ಆಮಲಕಿ ಎಂದು ಕರೆಯುತ್ತಾರೆ. ಈ ಬೆಟ್ಟದನಲ್ಲಿಕಾಯಿ ಗಿಡದಲ್ಲಿ ಗೊಂಚಲು ಗೊಂಚಲಾಗಿ ಹುಟ್ಟುತ್ತದೆ. ಆಯುರ್ವೇದ ಪ್ರಕಾರ ಪ್ರತಿಯೊಂದು ಔಷಧಿಗಳಲ್ಲಿ ಸಹ ನೆಲ್ಲಿಕಾಯಿ ಬಳಕೆ ಮಾಡಲಾಗುತ್ತದೆ. ಹಾಗಾಗಿ ಆಯುರ್ವೇದ ಇಲ್ಲದೆ ನೆಲ್ಲಿಕಾಯಿ ಇಲ್ಲಾ, ನೆಲ್ಲಿಕಾಯಿ ಇಲ್ಲದೆ ಆಯುರ್ವೇದ ಇಲ್ಲ ಎನ್ನಬಹುದು. ತ್ರಿಫಲ ಚೂರ್ಣ ಎನ್ನುವ ಹೆಸರನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ತ್ರಿಫಲ ಅಂದರೆ ಮೂರು ಫಲಗಳು ಅಂದರೆ, ಹರಿತಕಿ (ಅಣಲೇಕಾಯಿ), ವಿವಿತಕಿ (ತಾರೇಕಾಯಿ), ಆಮಾಲಕಿ (ನೆಲ್ಲಿಕಾಯಿ). ತ್ರಿಫಲ ಚೂರ್ಣ ದಲ್ಲಿ ಒಂದಾಗಿರುವ ನೆಲ್ಲಿಕಾಯಿ ಇದು ಭಲ್ಯ ಔಷಧಿ. ನಾವು ಸೇವಿಸುವ ಆಹಾರದಲ್ಲಿ ಸಿದ್ದ ರಸಗಳು ಇವೆ. ಆ ಷಡ್ರಸಗಳು ಯಾವುದು ಅಂತ ನೋಡುವುದಾದರೆ ಮಧುರ (ಸಿಹಿ), ಆಮ್ಲ (ಹುಳಿ), ಲವಣ ( ಉಪ್ಪು), ಕಟು (ಕಹಿ), ತಿಕ್ತ (ಖಾರ), ಕಷಾಯ. ಯಾರು ರೀತಿಯ ರಸಗಳು ನಮ್ಮ ದೇಹಕ್ಕೆ 6 ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ.

ಇವತ್ತಿನ ದಿನದಲ್ಲಿ ನಮ್ಮ ದೇಹದ ಆರೋಗ್ಯ ಸರಿಯಾಗಿ ಇರಬೇಕು ಅಂದರೆ ನಾವು ಸಮತೋಲನವಾದ ಆಹಾರವನ್ನು ತೆಗೆದುಕೊಳ್ಳಬೇಕು. ಆಯುರ್ವೇದದ ಪ್ರಕಾರ ಸಮತೋಲನ ಯುಕ್ತ ಆಹಾರ ಎಂದರೆ ಷಡ್ರಸ ಯುಕ್ತ ಆಹಾರವನ್ನು ನಾವು ಪ್ರತಿನಿತ್ಯ ಸೇವಿಸಬೇಕು. ನಮ್ಮ ಆಹಾರದಲ್ಲಿ ಒಂದೇ ರೀತಿ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೂಡ ಒಂದೇ ರೀತಿಯ ರುಚಿಯಾದ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಒಂದೇ ರೀತಿಯ ಜೀವಕೋಶಗಳ ಬೆಳವಣಿಗೆ ಹಾಗೂ ಉತ್ಪತ್ತಿಯಾಗುತ್ತದೆ. ನಮ್ಮ ದೇಹದಲ್ಲಿ ಎಲ್ಲಾ ರೀತಿಯ ಕೋಶಗಳ ಬೆಳವಣಿಗೆ ಆಗಬೇಕು ಅಂತ ಇದ್ದರೆ ನಾವು ಎಲ್ಲ ರೀತಿ ಆಹಾರಗಳ ಎಲ್ಲಾ ರೀತಿಯ ರುಚಿ ಇರುವುದನ್ನು ಸೇವಿಸಬೇಕಾಗುತ್ತದೆ.

ಈ ದೃಷ್ಟಿಯಲ್ಲಿ ನೋಡುವುದಾದರೆ ನೆಲ್ಲಿಕಾಯಿ ನಮ್ಮ ದೇಹಕ್ಕೆ ಪರಿಪೂರ್ಣವಾದ ಆಹಾರ ಎನ್ನಬಹುದು. ನೆಲ್ಲಿಕಾಯಿಯಲ್ಲಿ ಮೇಲೆ ಹೇಳಿದ ಷಡ್ರಸಗಳಲ್ಲಿ ಉಪ್ಪಿನ ಅಂಶವನ್ನು ಬಿಟ್ಟು ಬೇರೆ ಎಲ್ಲಾ ಐದು ಅಂಶಗಳು ಸಹ ನೆಲ್ಲಿಕಾಯಿ ಒಂದರಲ್ಲಿ ಇವೆ. ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಣೆ ಮಾಡುವ ಶಕ್ತಿ ನೆಲ್ಲಿಕಾಯಿಯಲ್ಲಿ ಇದೆ. ಪ್ರತಿ ನಿತ್ಯ ನಮಗೆ ಷಡ್ರಸ ಯುಕ್ತ ಆಹಾರ ಸೇವಿಸಲು ದೊರೆಯುವುದಿಲ್ಲ ಹಾಗಾಗಿ ನೆಲ್ಲಿಕಾಯಿ ಸೀಸನ್ ಇದ್ದಾಗ ನೆಲ್ಲಿಕಾಯಿಯನ್ನು ತಂದು ಒಣಗಿಸಿ ಅದನ್ನು ಪುಡಿಮಾಡಿಟ್ಟುಕೊಂಡು ಪ್ರತಿನಿತ್ಯ ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ನಾವು ಸಮತೋಲನ ಯುಕ್ತವಾದ ಆಹಾರವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದುಕೊಳ್ಳಬಹುದು. ಇದರಿಂದ ನಮಗೆ ಪೋಷಕಾಂಶ ಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಗಳು ಕೂಡ ಬರುವುದಿಲ್ಲ. ಹೀಗೆ ನೆಲ್ಲಿಕಾಯನ್ನು ಸೇವಿಸುವುದರಿಂದ ನಾವು ನಮಗೆ ಬರುವಂತಹ ಕುಪೋಷಣ ಜನ್ಯ ವ್ಯಾಧಿ ಇದರಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಈ ನೆಲ್ಲಿಕಾಯಿಯನ್ನು ಮಕ್ಕಳು ಪುರುಷರು ಮಹಿಳೆಯರು ವಯಸ್ಸಾದವರು ಯಾರು ಬೇಕಿದ್ದರೂ ತೆಗೆದುಕೊಳ್ಳಬಹುದು. ಇವಿಷ್ಟು ನೆಲ್ಲಿಕಾಯಿಯ ಪ್ರಯೋಜನಗಳು.

Leave a Reply

Your email address will not be published. Required fields are marked *