ರಾತ್ರಿ ಮಲಗುವ ಮುಂಚೆ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಸಿಗುವ ಲಾಭಗಳಿವು

0 26

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ನಾವು ನೋಡಿರಲೆಬಹುದಾದ ಒಂದು ಪದಾರ್ಥವೆಂದರೆ ಬೆಳ್ಳುಳ್ಳಿ ಅಡುಗೆಯಲ್ಲಿ ಬೆಳ್ಳುಳ್ಳಿಯ ಪಾತ್ರ ಅಪಾರವಾದದ್ದು ಅದರಲ್ಲಿಯೂ ಮಾಂಸಾಹಾರ ಅಡುಗೆಯನ್ನು ತಯಾರಿಸುವಲ್ಲಿ ಬೆಳ್ಳುಳ್ಳಿಯಯ ಪಾತ್ರ ಬಹಳ ಮಹತ್ತರವಾದದ್ದು ಅಲ್ಲದೇ ಈ ಬೆಳ್ಳುಳ್ಳಿಯ ವಾಸನೆಯೂ ಕೂಡಾ ಬಹಳ ಬೇಗ ನಮ್ಮ ಮೂಗಿಗೆ ತಗುಲುವಂತಹದ್ದು ಅಲ್ಲದೇ ಈ ಬೆಳ್ಳುಳ್ಳಿಯು ಸಾಕಷ್ಟು ಔಷದೀಯ ಗುಣಗಳನ್ನು ಒಳಗೊಂಡಿದೆ, ಇನ್ನು ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೊಟೀನ್ ವಿಟಮಿನ್ ಸಿ ವಿಟಮಿನ್ ಬಿ ಮೆಗ್ನಿಶಿಯಂ ಕ್ಯಾಲ್ಸಿಯಮ್ ಜಿಂಕ್ ಸೇರಿದಂತೆ ಹಲವಾರು ಅವಶ್ಯಕ ಪೋಷಕಾಂಶಗಳ ಮಹಾಪೂರವೇ ಅಡಗಿರುತ್ತದೆ.

ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಡೆದೋಡಿಸುವಂತಹ ಗುಣವು ಈ ಬೆಳ್ಳುಳ್ಳಿಯಲ್ಲಿದೆ ಅಲ್ಲದೇ ಬೆಳ್ಳುಳ್ಳಿಯು ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ, ಆದ್ದರಿಂದ ರಾತ್ರಿ ಮಲಗುವ ವೇಳೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೆಚ್ಚುತಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಅಂದರೆ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗುತ್ತದೆ ಇದರಿಂದ ನಮ್ಮ ಹೃದಯ ಯಾವಾಗಲೂ ಆರೋಗ್ಯಕರ ಸ್ಥಿತಿಯನ್ನು ಕಾಯ್ದುಕೊಂಡಿರುತ್ತದೆ. ಅಲ್ಲದೇ ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿಯ ಸೇವನೆಯಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಕಾರಿ ವಸ್ತುಗಳು ಮೂತ್ರದ ಮೂಲಕ ಹೊರಹೋಗುತ್ತವೆ ಮತ್ತು ಬೆಳ್ಳುಳ್ಳಿಯು ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಕಾರಣ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಚೆ ಇರುವವರು ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿಯನ್ನು ಸೇವಿಸುವುದು ಒಳಿತು. ಅಲ್ಲದೇ ಹೀಗೆ ನಿಯಮಿತವಾಗಿ ಹುರಿದ ಬೆಳ್ಳುಳ್ಳಿಗಳನ್ನು ಸೇವಿಸುವುದರಿಂದ ಮಾನವನ ದೇಹದ ಎಲುಬುಗಳು ಮತ್ತು ಸ್ನಾಯುಗಳ ಬಲ ವೃದ್ಧಿಯಾಗುತ್ತದೆ/

ದೇಹ ತುಂಬಾ ಬಳಲಿದಂತೆ ಭಾಸವಾಗುತ್ತಿದ್ದರೆ ದುರ್ಬಲವಾದಂತೆ ಭಾಸವಾಗುತ್ತಿದ್ದಾರೆ ಹುರಿದ ಬೆಳ್ಳುಳ್ಳಿಯ ಸೇವನೆಯಿಂದ ನಿಮ್ಮ ದೇಹದ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ, ಇನ್ನು ರಾತ್ರಿ ಮಲಗುವ ವೇಳೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಉಸಿರಾಟದ ಸಮಸ್ಯೆ ಶೀಘ್ರದಲ್ಲಿಯೇ ಗುಣಮುಖವಾಗುತ್ತದೆ. ಈ ಉಪಯುಕ್ತ ವಿಚಾರ ಇಸತವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳಲಿ.

Leave A Reply

Your email address will not be published.