ಬೆಳ್ಳುಳ್ಳಿ, ಸಾಸಿವೆ ಎಣ್ಣೆಯಿಂದ ಕರೋನ ಬರೋದಿಲ್ವ? ಓದಿ.

0 10

ಖ್ಯಾತ ಆಯುರ್ವೇದ ತಜ್ಞರಾದ ಡಾಕ್ಟರ್ ಗಿರಿಧರ್ ಕಜೆ ಅವರು ಕರೋನ ರೋಗದ ಬಗ್ಗೆ ಕೆಲವು ಅಂಶಗಳನ್ನು ತಿಳಿಸಿದ್ದಾರೆ ಹಾಗೂ ಯಾವ ವಯಸ್ಸಿನ ಜನರಿಗೆ ಬೇಗ ಕರೊನ ಬರತ್ತೆ ಅಂತ ತಿಳಿಸಿದ್ದಾರೆ. ಅದು ಏನು ಅನ್ನೋದನ್ನ ನಾವೂ ಕೂಡಾ ನೋಡಿ ತಿಳಿದುಕೊಳ್ಳೋಣ.

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯನ್ನು ಸೇವಿಸುವುದರಿಂದ ಕರೊನ ಬರೋದೆ ಇಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಡಾಕ್ಟರ್ ಗಿರಿಧರ್ ಕಜೆ ಅವರು ಹೀಗೆ ಹೇಳುತ್ತಾರೆ. ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ ಇವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸಾಸಿವೇ ಎಣ್ಣೆ ಇವುಗಳಲ್ಲಿ ಆಂಟಿ ವೈರಲ್ ಆಕ್ಷನ್ ಇರುತ್ತದೆ. ಹಾಗಾಗಿ ಯಾರು ಅತಿಯಾಗಿ ಈಗಾಗಲೇ ರೆಡಿ ಇರುವಂತಹ ಪ್ಯಾಕ್ ಮಾಡಿದ ಆಹಾರಗಳನ್ನು ಹೆಚ್ಚು ಬಳಸುತ್ತಾರೋ ಅವರಿಗೆ ಬೇಗ ಕರೊನ ವೈರಸ್ ಬರತ್ತೆ ಹಾಗೆ ಯಾರು ಹೆಚ್ಚು ಹೆಚ್ಚು ತಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳು, ಅಂದರೆ ಬೆಳ್ಳುಳ್ಳಿ, ಅರಿಶಿಣ, ಸಾಸಿವೆ, ಜೀರಿಗೆ, ಶುಂಠಿ, ಕಾಳುಮೆಣಸು ಮುಂತಾದ ಔಷಧೀಯ ಗುಣಗಳು ಇರುವ ಪದಾರ್ಥಗಳನ್ನು ಯಾರು ಹೆಚ್ಚಾಗಿ ಬಳಸುತ್ತಾರೋ ಅವರ ಬಳಿ ಕರೊನ ಸುಳಿಯುವುದಿಲ್ಲ ಅಂತ ಹೇಳ್ತಾರೆ.

ಆಂಟಿ ಬಯೋಟೆಕ್ ಗಳು ಕರೊನ ವೈರಸ್ ಅನ್ನು ತಡೆಗಟ್ಟಬಲ್ಲವಾ? ಸಾಮಾನ್ಯವಾಗಿ ಸಾಧಾರಣ ಜ್ವರ ಶೀತ ಬಂದರೂ ತಕ್ಷಣ ಹೋಗಿ ಆಂಟಿ ಬಯೋಟೆಕ್ ತೆಗೆದುಕೊಳ್ಳಬೇಕು ಅದರಿಂದ ಬೇಗ ಗುಣವಾಗಬಹುದು ಎನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಇದೆ. ಆದರೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವ ವಿಷಯ ಎಂದರೆ, ಆಂಟಿ ಬಯೋಟೆಕ್ ಇದು ಕೇವಲ ಬ್ಯಾಕ್ಟೀರಿಯಾಗಳ ವಿರುದ್ಧ ಮಾತ್ರ ಹೊರಾಡಬಲ್ಲದು ಹೊರತು ವೈರಸ್ ಗಳ ವಿರುದ್ಧ ಇದು ತನ್ನ ಪರಿಣಾಮವನ್ನು ಬೀರುವುದಿಲ್ಲ. ಹಾಗಾಗಿ ಆಂಟಿ ಬಯೋಟೆಕ್ ಗಳು ವೈರಸ್ ಗಳ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಹಾಗಾಗಿ ಇದರ ಬದಲು ಆಯುರ್ವೇದದಲ್ಲಿ ಹಲವಾರು ರೀತಿಯ ಔಷಧೀಯ ಸಸ್ಯಗಳು, ಬೇರುಗಳು ಇವೆ ಲಾವಂಚ, ತುಳಸಿ, ಶುಂಠಿ ಇವೆಲ್ಲ ವಸ್ತುಗಳು ನಮಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಪದಾರ್ಥಗಳು. ಇವುಗಳನ್ನೆಲ್ಲ ನಾವು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೆ ಆದಲ್ಲಿ ನಾವು ಈ ಕರೊನ ವೈರಸ್ ಅನ್ನು ಸಂಪೂರ್ಣವಾಗಿ ನಾಶ ಮಾಡಬಹುದು.

ಯಾವ ವಯಸ್ಸಿನ ವ್ಯಕ್ತಿಗಳಿಗೆ ಕರೊನ ಬೇಗ ಹರಡುತ್ತದೆ? ಡಾಕ್ಟರ ಗಿರಿಧರ್ ಕಜೆ ಅವರು ಹೇಳುವಂತೆ ಕರೊನ ಮೊದಲಿಗೆ ಯಾವ ವ್ಯಕ್ತಿ ಸಧೃಢವಾಗಿ ಇರುವುದಿಲ್ಲವೋ, ಯಾರ ದೇಹ ಅತಿ ಹೆಚ್ಚು ನಿಶ್ಶಕ್ತಿಯಿಂದ ಕೂಡಿರುತ್ತದೋ, ವಯಸ್ಸಾದವರು, ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ ಕರೊನ ಬೇಗ ಬರುವ ಸಾಧ್ಯತೆ ಹೆಚ್ಚು. ಯಾಕಂದ್ರೆ ಇವರ ಬಳಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗೆ ರಕ್ತದ ಒತ್ತಡ, ಡಯಾಬಿಟಿಸ್ ಫೆಷನ್ಟ್ಸ್, ಹೃದ್ರೋಗಿಗಳು ಇವರಿಗೆ ಹಾಗೂ ಜಾಸ್ತಿ ವಯಸ್ಸು ಆದವರಿಗೆ ಬೇಗ ಕರೊನ ಬರುತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ಹೇಳುತ್ತಾರೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆಯೋ ಅವರಿಗೆ ಬೇಗ ಕರೊನ ಬರುವುದಿಲ್ಲ ಎಂದು ಹೇಳುತ್ತಾರೆ.

Leave A Reply

Your email address will not be published.