Ganga kalyana yojane 2023: ನಮ್ಮ ಸರ್ಕಾರವು ರೈತರಿಗೆ ಸಹಾಯ ಆಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಸರ್ಕಾರವು ಅಂಥದ್ದೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜೆನೆಯ ಮೂಲಕ ಸಣ್ಣ ರೈತರು ಮತ್ತು ಅತಿಸಣ್ಣ ರೈತರು ಇಬ್ಬರು ಕೂಡ ತಮ್ಮ ಕೃಷಿ ನೆಲದಲ್ಲಿ ಉಚಿತವಾಗಿ ಬೋರ್ ವೆಲ್ ಹಾಕಿಸಿಕೊಳ್ಳಬಹುದು. ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ. ಸಣ್ಣ ರೈತರು ಮತ್ತು ವಿವಿಧ ಸಮುದಾಯಕ್ಕೆ ಸೇರಿದ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಈ ಯೋಜನೆಗೆ ವರ್ಷಕ್ಕೆ ಒಂದು ಸಾರಿ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗುತ್ತದೆ. ಈ ವರ್ಷ ಕೂಡ ಅವಕಾಶ ನೀಡಲಾಗಿತ್ತು, ಆದರೆ ಈ ವರ್ಷ ಇನ್ನು ಯಾರಿಗೆ ಅರ್ಜಿ ಸಲ್ಲಿಸಲು ಸಾಧ್ಯ ಆಗಿಲ್ಲವೋ, ಅವರಿಗೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ. ಆಕ್ಟೊಬರ್ 30 ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿತ್ತು, ಆದರೆ ಈಗ ನವೆಂಬರ್ 10ರವರೆಗೂ ದಿನಾಂಕವನ್ನು ವಿಸ್ತರಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಲು ಬೇಕಿರುವ ಮಾನದಂಡಗಳು, ಅರ್ಹತೆ, ಬೇಕಾಗುವ ದಾಖಲೆಗಳು ಎಲ್ಲದರ ಬಗ್ಗೆ ಇಂದು ಮಾಹಿತಿ ತಿಳಿಸುತ್ತೇವೆ ನೋಡಿ.. ಡಿ. ದೇವರಾಜ್ ಅರಸು ಹಿಂದುಳಿತ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ.

Ganga kalyana yojane 2023

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಈ ಎಲ್ಲಾ ನಿಗಮಕ್ಕೆ ಸೇರಿದ ರೈತರು ಗಂಗಾ ಕಲ್ಯಾಣ ಯೋಜನೆಗೆ ಅಪ್ಲೈ ಮಾಡಬಹುದು. ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳು ಇದ್ದು, ಅವುಗಳು ಏನು ಎಂದರೆ..ರೈತರು ನಮ್ಮ ರಾಜ್ಯದವರೆ ಆಗಿರಬೇಕು, ಮೇಲೆ ತಿಳಿಸಿರುವ ನಿಗಮಗಳಲ್ಲಿ ಒಂದು ನಿಗಮಕ್ಕೆ ಸೇರಿದವರಾಗಿರಬೇಕು, ಈ ನಿಗಮಗಳ ಬೇರೆ ಯೋಜನೆಯ ಸೌಲಭ್ಯ ಪಡೆದಿರಬಾರದು.

ಕೃಷಿ ಕೆಲಸ ಮಾಡುತ್ತಿರುವುದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಬೇಕು. ಕೃಷಿ ಮಾಡುತ್ತಿರುವ ರೈತರ ಬಳಿ 5 ಎಕರೆಗಿಂತ ಹೆಚ್ಚು ಭೂಮಿ ಇರಬಾರದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗೆ ಸೇರಿದ ರೈತರ ಬಳಿ ಮಿನಿಮಮ್ 1 ಎಕರೆ ಜಮೀನು ಇರಬೇಕು. ಬೇರೆ ಜಿಲ್ಲೆಯ ರೈತರ ಬಳಿ ಮಿನಿಮಮ್ 2 ಎಕರೆ ಜಮೀನು ಇರಬೇಕು. ಇನ್ನು ಕುಟುಂಬದ ವಾರ್ಷಿಕ ಆದಾಯ, ಹಳ್ಳಿಯಲ್ಲಿ ವಾಸ ಮಾಡುವವರಿಗೆ 98,000ದ ಒಳಗಿರಬೇಕು. ನಗರ ಪ್ರದೇಶದಲ್ಲಿ ವಾಸ ಮಾಡುವವರಿಗೆ 1,20,000 ಒಳಗಿರಬೇಕು.

ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವ ದಾಖಲೆಗಳು, ರೈತರ ಆಧಾರ್ ಕಾರ್ಡ್, ಕೃಷಿ ಭೂಮಿಗೆ ಬೇಕಿರುವ ದಾಖಲೆಗಳು, FRUITS ID, ಬ್ಯಾಂಕ್ ಪಾಸ್ ಬುಕ್, ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಇನ್ಕಮ್ ಸರ್ಟಿಫಿಕೇಟ್, ಫೋನ್ ನಂಬರ್ ಮತ್ತು ಇನ್ನಿತರ ದಾಖಲೆಗಳು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗೆ ಸೇರಿದ ರೈತರಿಗೆ ಘಟಕವೆಚ್ಚವಾಗಿ 4.75 ಲಕ್ಷ ರೂಪಾಯಿಯಲ್ಲಿ, 4.25 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇಷ್ಟರಲ್ಲಿ ಬೋರ್ ವೆಲ್ ನಿರ್ಮಾಣ ಮಾಡಲು ಸಾಧ್ಯವಾಗದೇ ಹೋದರೆ 4% ಬಡ್ಡಿ ದರದಲ್ಲಿ 50,000 ರೂಪಾಯಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಎರಡರ ಮೂಲಕ ಕೂಡ ಅಪ್ಲೈ ಮಾಡಬಹುದು. ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಕೇಂದ್ರಕ್ಕೆ ಹೋಗಿ ಅಪ್ಲೈ ಮಾಡಬಹುದು. ಅಥವಾ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

By

Leave a Reply

Your email address will not be published. Required fields are marked *