Forest guard job march month 2022-23ನೇ ಸಾಲಿನಲ್ಲಿ ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಅರಣ್ಯ ವೃತ್ತಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ

ನೇಮಕಾತಿ ಪ್ರಾಧಿಕಾರ ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು ಆನೆ ಕಾವಾಡಿ
ವೃತ್ತವಾರು ಆನೆ ಕಾವಾಡಿ ಹುದ್ದೆಗಳ ವಿವರ ಕೊಡಗು 4
ಚಾಮರಾಜನಗರ ಮೈಸೂರು 5, ಶಿವಮೊಗ್ಗ 4 ವೇತನ ಶ್ರೇಣಿ Rs.18,600-32,600 ಅರ್ಹತೆಗಳು ಕನ್ನಡ ಭಾಷೆ ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಶಕ್ತನಾಗಿರಬೇಕು. ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವಯಸ್ಸಿನ ಅರ್ಹತೆಗಳು ಕನಿಷ್ಠ 18 ವರ್ಷ ಆಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಇತರೆ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು. ಕೆಳಗೆ ನೀಡಲಾದ ಅರ್ಜಿ ನಮೂನೆಯನ್ನು ಪಡೆದು ಬೆರಳಚ್ಚು /ಕಂಪ್ಯೂಟರ್ ಪ್ರಿಂಟ್ ಮಾಡಿಸಿ ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು. ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕೊಡಗು/ ಚಾಮರಾಜನಗರ/ ಮೈಸೂರು/ ಶಿವಮೊಗ್ಗ ಅರಣ್ಯ ವೃತ್ತ (ಆಯಾ ಅರಣ್ಯ ವೃತ್ತಕ್ಕೆ ಅರ್ಜಿ) ಕ್ಕೆ ಅರ್ಜಿ ಸಲ್ಲಿಸುವುದು.

ನೇಮಕಾತಿ ವಿಧಾನ ಸಂದರ್ಶನದ ಮೂಲಕ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 30-03-2023 ಅರ್ಜಿ ಸಲ್ಲಿಸಲು ಕೊನೆ ದಿನಾಂಕ 29-04-2023
ಅಭ್ಯರ್ಥಿಗಳ ಸಂದರ್ಶನ ದಿನಾಂಕ ಮೇ 16, 17, 2023
ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ದಿನಾಂಕ 29-05-2023 ಅಂತಿಮ ಆಯ್ಕೆಪಟ್ಟಿ ಪ್ರಕಟಣೆ ದಿನಾಂಕ 01-06-2023 ನೇಮಕಾತಿ ಆದೇಶ ನೀಡುವುದು 01-07-2023 ಅರಣ್ಯ ವೃತ್ತಾವಾರು ಆನೆ ಕಾವಾಡಿ ಹುದ್ದೆಗಳ ಅಧಿಸೂಚನೆಗೆ ವೆಬ್‌ಸೈಟ್‌ ವಿಳಾಸ https://kfdrecruitment.in/ ಕ್ಕೆ ಭೇಟಿ ನೀಡಿ.

Leave a Reply

Your email address will not be published. Required fields are marked *