Anganwadi Teacher: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನಾ ಅಡಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ (Anganwadi Assistant) ಮತ್ತು ಕಾರ್ಯಕರ್ತೆ ಹುದ್ದೆಗಳ ಭರ್ತಿಗೆ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು ಮತ್ತುಹುದ್ದೆಯ ಸಂಖ್ಯೆ ಈ ಕೆಳಗಿನಂತಿದೆ.
ಅಂಗನವಾಡಿ ಸಹಾಯಕಿಯರು:38 ಅಂಗನವಾಡಿ ಕಾರ್ಯಕರ್ತೆಯರು:17 ಹುದ್ದೆಯ ಸಂಖ್ಯೆ ಒಟ್ಟು 55 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ ಕರ್ನಾಟಕದ ಕೊಡಗು ಜಿಲ್ಲೆಯ, ಮಡಿಕೇರಿ, ಸೋಮವಾರಪೇಟೆ ಮತ್ತು ಪೊನ್ನಂಪೇಟೆಯಲ್ಲಿ ಹುದ್ದೆಯು ಖಾಲಿ ಇದೆ. ವಯೋಮಿತಿ: ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ. ಕಾರ್ಯಕರ್ತೆಯರ ಹುದ್ದೆಗೆ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಂಗನವಾಡಿ ಸಹಾಯಕಿಯರು ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸ್ ವಿದ್ಯಾರ್ಹತೆ ಪಡೆದಿರಬೇಕು.

ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗೆ ಪಿಯುಸಿ ಪಾಸ್ ವಿದ್ಯಾರ್ಹತೆ ಪಡೆದಿರಬೇಕು ಅಂಗನವಾಡಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಮೊದಲು ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಪೂರ್ತಿಯಾಗಿ ಓದಿ ಖಚಿತ ಪಡಿಸಿಕೊಳ್ಳಿ. ಬಳಿಕ ಕೆಳಗೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.

ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳು ಕೇಳಿದ್ದಲ್ಲಿ ಲಗತ್ತಿಸಿ ಅರ್ಜಿಯನ್ನು ಸಲ್ಲಿಸಿ. ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಕಛೇರಿಯ ದೂರವಾಣಿ ಸಂಖ್ಯೆಯನ್ನ ಸಂಪರ್ಕಿಸಿ.

ಕಛೇರಿಯ ದೂರವಾಣಿ ಸಂಖ್ಯೆಗಳು: ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾ ಕಛೇರಿ: 08272-೨೯೫೦೮೭ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಛೇರಿ: 08276- 282281

ಇದನ್ನೂ ಓದಿ..Driving Licence: ಕೇಂದ್ರ ಸರ್ಕಾರದಿಂದ ವಾಹನ ಚಾಲಕರಿಗೆ ಗುಡ್ ನ್ಯೂಸ್

ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಛೇರಿ: 08274- 249010 ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ 01/03/೨೦೨೩ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 24/03/2023

Leave a Reply

Your email address will not be published. Required fields are marked *