Leo Astrology Monthly prediction: ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಎಲ್ಲ ರಾಶಿಯ ಫಲಗಳು ಒಂದೇ ತರನಾಗಿ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಕೂಡಿ ಇರುತ್ತದೆ ತಿಂಗಳುಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ

2023 ಜೂನ್ ತಿಂಗಳಲ್ಲಿ ಸಿಂಹ (Leo Astrology) ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ವ್ಯಾಪಾರ ವ್ಯವಹಾರ (Business) ಮಾಡುವರಿಗೆ ಅನಿರೀಕ್ಷಿತ ಲಾಭ ಕಂಡು ಬರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುವ ಸಾಧ್ಯತೆ ಇರುತ್ತದೆ ಹಾಗೆಯೇ ಈ ತಿಂಗಳಲ್ಲಿ ಹಣಕಾಸಿನ ಬಗ್ಗೆ ಜಾಗರೂಕತೆಯನ್ನು ವಹಿಸಬೇಕು ಹೆಚ್ಚಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಆರೋಗ್ಯದ ಕಡೆಗೆ ಸಹ ಗಮನ ಹರಿಸಬೇಕು ಸಿಂಹ ರಾಶಿಯವರಿಗೆ ಅನಿರೀಕ್ಷಿತ ಶುಭಕರವಾದ ತಿರುವುಗಳು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಸಿಂಹ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜೂನ್ 7ರಂದು ಬುಧ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 2023 ಜೂನ್ 15ರಂದು ರವಿ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ ಜೂನ್ 24ರಂದು ಬುಧ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಜೂನ್ 30 ರಂದು ಕುಜ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ರವಿವು 10 ಹಾಗೂ ಹನ್ನೊಂದನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಕುಜ ಹನ್ನೆರಡು ಹಾಗೂ ಒಂದನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧನು 9 ಮತ್ತು 10ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಗುರು 9ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶುಕ್ರನು 12 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ

ಶನಿಯು 7ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ರಾಹು 9 ಮತ್ತು ಕೇತು 3ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಸಿಂಹ ರಾಶಿಯವರಿಗೆ ಜೂನ್ ತಿಂಗಳಲ್ಲಿ ವಿಪರೀತವಾದ ಧನ ಲಾಭ ಕಂಡು ಬರುತ್ತದೆ ಬುಧನ ಸಂಚಾರದಿಂದ ಧನ ಲಾಭ ಕಂಡು ಬರುತ್ತದೆ ಹನ್ನೆರಡನೇ ಮನೆಯಲ್ಲಿ ಶುಕ್ರ ಇರುವ ಕಾರಣದಿಂದ ಹೆಚ್ಚಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯ ಖರ್ಚುಗಳು ಹೆಚ್ಚಾಗಿ ಕಂಡುಬರುತ್ತದೆ ಸುಖ ವೈಭೋಗದ ವಸ್ತುಗಳನ್ನು ಖರೀದಿ ಮಾಡಲು ಹಣಕಾಸಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಹಣಕಾಸಿನ ಮೂಲಗಳು ಅಧಿಕ ಆಗುವ ಸಾಧ್ಯತೆ ಇರುತ್ತದೆ .

ಶನಿಯ ನೇರವಾದ ದೃಷ್ಟಿ ಸಿಂಹ ರಾಶಿಯ ಮೇಲೆ ಬೀಳುತ್ತದೆ ಇದರಿಂದ ಅಹಂಕಾರ ಕಂಡು ಬರುವ ಸಾಧ್ಯತೆ ಇಡುತ್ತದೆ ಸೋಮಾರಿತನ ಕಂಡು ಬರುವ ಸಾಧ್ಯತೆ ಇರುತ್ತದೆ ಸಿಂಹ ರಾಶಿಯವರಿಗೆ ಅನಿರೀಕ್ಷಿತ ಶುಭಕರವಾದ ತಿರುವುಗಳು ಕಂಡು ಬರುತ್ತದೆ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಹಾಗೂ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ದುಂದು ವೆಚ್ಚದ ಬಗ್ಗೆ ಗಮನಹರಿಸಬೇಕು ಸಿಂಹ ರಾಶಿಯ ರಾಜಕಾರಣಿಗಳಿಗೆ ತುಂಬಾ ಶುಭಕರವಾಗಿ ಇರುತ್ತದೆ ಕರಕುಶಲ ವಸ್ತುಗಳ ಮಾರಾಟಗಾರರಿಗೆ ಗುಡಿ ಕೈಗಾರಿಕೆ ವಸ್ತುಗಳ ಮಾರಾಟಗಾರರಿಗೆ ಸುಗಂಧ ದ್ರವ್ಯಗಳ ಮಾರಾಟಗಾರರಿಗೆ ರಾಜಕಾರಣಿಗಳಿಗೆ ಲಾಭದಾಯಕವಾಗಿರುತ್ತದೆ.

ಮದುವೆಯ ನಿರೀಕ್ಷೆಯಲ್ಲಿ ಇರುವ ಅವಿವಾಹಿತರಿಗೆ ಮದುವೆ ನಿಶ್ಚಯ ಆಗುವ ಸಾಧ್ಯತೆ ಇರುತ್ತದೆ ಮಿನಿರಲ್ ವಾಟರ್ ಮಾರಾಟಗಾರರಿಗೆ ಅನಿರೀಕ್ಷಿತ ಲಾಭಗಳು ಕಂಡು ಬರುತ್ತದೆ ಹಾಗೆಯೇ ಸಿಂಹ ರಾಶಿಯವರು ಪ್ರಾಣಿ ಪಕ್ಷಿಗಳಿಗೆ ಆಹಾರ ನೀರನ್ನು ಕೊಡಬೇಕು ಮಘ ನಕ್ಷತ್ರದಲ್ಲಿ ಜನಿಸಿದವರು ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಆದಿತ್ಯ ಹೃದಯ ಸ್ತೋತ್ರವನ್ನು ಹೇಳಬೇಕು

ಸೂರ್ಯನಿಗೆ ಅಭಿಮುಖವಾಗಿ ಹೇಳಬೇಕು ಪುಬ್ಬ ನಕ್ಷತ್ರದಲ್ಲಿ ಜನಿಸಿದವರು ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು ಉತ್ತರ ನಕ್ಷತ್ರ ಒಂದನೆಯ ಪಾದದಲ್ಲಿ ಜನಿಸಿದವರು ಶಿವ ಸ್ತೋತ್ರವನ್ನು ಹೇಳಬೇಕು ಹೀಗೆ ಸಿಂಹ ರಾಶಿಯವರಿಗೆ ಜೂನ್ ತಿಂಗಳು ಶುಭದಾಯಕವಾಗಿ ಅನಿರೀಕ್ಷಿತ ಹಣದ ಹರಿವು ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ.

Leave a Reply

Your email address will not be published. Required fields are marked *