filpkart packing jobs 2023: ಪ್ಯಾಕಿಂಗ್ ಹುದ್ದೆಗಳು ಖಾಲಿ ಇದೆ, ತುಂಬಾ ಒಳ್ಳೆ ಒಳ್ಳೆಯ ಕಂಪನಿಯಿಂದ ನೇಮಕಾತಿ ಕರೆದಿದ್ದಾರೆ. ಈಗ ಫ್ಲಿಪ್ಕಾರ್ಟ್ ನಿಂದ ಪ್ಯಾಕಿಂಗ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ವಿದ್ಯಾರ್ಹತೆ : ಅಧಿಸೂಚನೆಯ ಪ್ರಕಾರ 8ನೇ ತರಗತಿ, PUC, ITI, diploma ಹಾಗೂ degree ಆಗಿರಬೇಕು.ಯಾವುದೇ ರೀತಿ ಲಿಖಿತ ಪರೀಕ್ಷೆ ಹಾಗೂ ಅರ್ಜಿ ಶುಲ್ಕವಿರುವುದಿಲ್ಲ.ಇದು ಸಂಪೂರ್ಣವಾಗಿ ಖಾಸಗಿ ಉದ್ಯೋಗ ವಾಗಿರುತ್ತದೆ ಮತ್ತು ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ 18,000 ದಿಂದ 20,000 ವರೆಗೆ ವೇತನ ಇರುತ್ತದೆ.

ವೇರ್ ಹೌಸ್ ಪ್ಯಾಕಿಂಗ್ ಜಾಬ್ ಗೆ ನೇಮಕಾತಿ ನಡೆಯುತ್ತಿದೆ. ಉದ್ಯೋಗಿಗಳು ಬಂದಿರುವಂತಹ ಪ್ರೊಡಕ್ಟ್ ಅನ್ನು ಪ್ಯಾಕ್ ಮಾಡಿ ಸೀಲ್ ಮಾಡಿ ಡಿಸ್ಪ್ಯಾಚ್ ಮಾಡಬೇಕಾಗುತ್ತದೆ. ಇದು ನಿಮ್ಮ ಕೆಲಸವಾಗಿರುತ್ತದೆ. ಕಂಪನಿಯಿಂದ ಸಂಪೂರ್ಣವಾಗಿ ಟ್ರೈನಿಂಗ್ ಅನ್ನು ನೀಡಿರುತ್ತಾರೆ ಹಾಗೂ ಸೆಲೆಕ್ಟ್ ಆದ ನಂತರ ನಿಮಗೆ ಒಂದು ಸರ್ಟಿಫಿಕೇಟ್ ಅನ್ನು ಕೂಡ ನೀಡುತ್ತಾರೆ.

filpkart packing jobs 2023

ಮುಂದೆ ನೀವು ಬೇರೆ ಉದ್ಯೋಗಕ್ಕೆ ಹೋಗುವಾಗ ಈ ಸರ್ಟಿಫಿಕೇಟ್ ನಿಮಗೆ ಉಪಯೋಗವಾಗುತ್ತದೆ. ಇದು ಕೇವಲ ಪ್ಯಾಕಿಂಗ್ ಉದ್ಯೋಗ ವಾಗಿರುತ್ತದೆ ಹಾಗೂ ಉದ್ಯೋಗದ ಸ್ಥಳ ಬೆಂಗಳೂರು. ಫ್ಲಿಪ್ಕಾರ್ಟ್ ಕಂಪನಿಯಿಂದ ಪ್ಯಾಕಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ :ಮೊದಲಿಗೆ ಫ್ಲಿಪ್ಕಾರ್ಟ್ ವೆಬ್ಸೈಟ್ ಗೆ ಹೋಗಬೇಕು ನಂತರ ರಿಜಿಸ್ಟ್ರೇಷನ್ ಮಾಡಿ, ರಿಜಿಸ್ಟ್ರೇಷನ್ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ರಿಜಿಸ್ಟ್ರೇಷನ್ ಪೇಜಿನಲ್ಲಿ ನಿಮ್ಮ ಹೆಸರು, ಇಮೇಲ್ ಐಡಿ, ಲಿಂಗ, ಹುಟ್ಟಿದ ದಿನಾಂಕ, ತಂದೆ ತಾಯಿಯ ಹೆಸರು, ಮೊಬೈಲ್ ನಂಬರ್ ಮತ್ತು ವಿಳಾಸ ಕೇಳುತ್ತಾರೆ ಅದನ್ನು ಸಂಪೂರ್ಣವಾಗಿ ತುಂಬಿ. ನಂತರ ನಿಮ್ಮ ಕ್ವಾಲಿಫಿಕೇಶನ್ ವಿವರವನ್ನು ಸರಿಯಾಗಿ ಭರ್ತಿ ಮಾಡಿ.

ನಂತರ ನೀವು ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಈ ಮುಂಚೆ ಕೆಲಸ ಮಾಡಿದ್ದೀರಾ ಅಥವಾ ಯಾವುದಾದರೂ ಪ್ಲಿಪ್ಕಾರ್ಟ್ ಇಂಟ್ರನ್ ಶಿಪ್ ನಲ್ಲಿ ಭಾಗಿಯಾಗಿದ್ದೀರಾ ಎಂದು ಕೇಳುತ್ತದೆ, ಅಲ್ಲಿ ನೀವು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ (captcha) ಅನ್ನು ಹಾಕಿ ನಂತರ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಹಾಕಿ ಸಬ್ಮಿಟ್ ಪ್ರೆಸ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಸಂಪೂರ್ಣವಾಗುತ್ತದೆ. ಇದನ್ನೂ ಓದಿ Nadakacheri Jobs: ನಾಡಕಚೇರಿಯಲ್ಲಿ ಕ್ಲರ್ಕ್ ಹಾಗೂ ಡ್ರೈವರ್ ಹುದ್ದೆಗಳು ಖಾಲಿ ಇವೆ, ಆಸಕ್ತರು ಕೂಡಲೇ ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *