ಫೆಬ್ರವರಿ ತಿಂಗಳು ಯಾವ ರಾಶಿಯವರಿಗೆ ಲಾಭದಾಯಕವಾಗಿದೆ ತಿಳಿದುಕೊಳ್ಳಿ

0 5

ಗ್ರಹಗತಿಗಳು ಬದಲಾದಂತೆ ಪ್ರತಿ ತಿಂಗಳು ದ್ವಾದಶ ರಾಶಿಗಳ ಫಲದಲ್ಲಿ ಬದಲಾವಣೆ ಉಂಟಾಗುತ್ತದೆ ಫೆಬ್ರುವರಿ ತಿಂಗಳಿನಲ್ಲಿ ದ್ವಾದಶ ರಾಶಿಯಲ್ಲಿನ ಯಾವ ರಾಶಿಗಳು ಯಾವ ಯಾವ ರೀತಿಯ ಫಲವನ್ನು ಹೊಂದಿದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೊದಲಿಗೆ ಮೇಷ ರಾಶಿ, ಮೇಷ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದ್ದು ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಒಳ್ಳೆಯ ಸಮಯ ಇದಾಗಿದೆ. ಏಪ್ರಿಲ್ ವರೆಗೂ ಕೂಡ ಮೇಷ ರಾಶಿಯವರಿಗೆ ಒಳ್ಳೆಯ ಸಮಯವಿದ್ದು ಈ ಸಮಯ ಮತ್ತೆ ಮತ್ತೆ ಬರುವುದಿಲ್ಲ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡಬಹುದು ಒಳ್ಳೆಯ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು ಮನೆ ಗೃಹಪ್ರವೇಶಗಳನ್ನು ಮಾಡಬಹುದು. ಮೇಷ ರಾಶಿಯವರು ಫೆಬ್ರವರಿ ತಿಂಗಳಿನ ನಾಲ್ಕು ಸೋಮವಾರ ಅಥವಾ ನಾಲ್ಕು ಗುರುವಾರ ಏಳು ನೂರು ಗ್ರಾಂ ಹುರುಳಿ ಕಾಳು ಹಾಗೂ ನಲವತ್ತು ಗ್ರಾಂ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ಶಿವನ ದೇವಸ್ಥಾನಕ್ಕೆ ಕೊಡುವುದರಿಂದ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತವೆ.

ಮುಂದಿನದಾಗಿ ವೃಷಭ ರಾಶಿ ಈ ರಾಶಿಯವರಿಗೆ ಮನೆಯ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಖರ್ಚುಗಳು ಹೆಚ್ಚಾಗುತ್ತದೆ ನೀವು ಯಾವುದೋ ಉದ್ದೇಶಕ್ಕೆ ಇಟ್ಟಿರುವಂತಹ ದುಡ್ಡು ಸುಮ್ಮನೆ ಖರ್ಚಾಗುತ್ತದೆ ವೃಷಭ ರಾಶಿಯವರಿಗೆ ಏಪ್ರಿಲ್ ನಂತರ ಒಳ್ಳೆಯ ಸಮಯ ಬರುತ್ತದೆ ವೃಷಭ ರಾಶಿಯವರು ಆರು ನೂರು ಗ್ರಾಂ ಒಣಗಿರುವ ಅವರೇಕಾಳನ್ನು ಈ ತಿಂಗಳ ನಾಲ್ಕು ಶುಕ್ರವಾರ ಲಕ್ಷ್ಮಿ ದೇವಸ್ಥಾನಕ್ಕೆ ಕೊಡಬೇಕು. ನಿಮ್ಮ ಸುತ್ತಮುತ್ತ ಲಕ್ಷ್ಮಿ ದೇವಸ್ಥಾನ ಇಲ್ಲದಿದ್ದಲ್ಲಿ ಅಮ್ಮನವರ ನೆನೆಸಿಕೊಂಡು ಯಾರಾದರೂ ಬಡವರಿಗೆ ದಾನ ಮಾಡಬಹುದು ಇದರಿಂದ ಒಳ್ಳೆಯ ಫಲಗಳು ನಿಮಗೆ ದೊರೆಯುತ್ತದೆ. ಮುಂದಿನದಾಗಿ ಮಿಥುನ ರಾಶಿ ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಉದ್ಯೋಗದ ಸಮಸ್ಯೆ ಇರುತ್ತದೆ ಇರುವ ಕೆಲಸವನ್ನು ಬಿಟ್ಟು ಇನ್ನೂ ಉತ್ತಮವಾದ ಕೆಲಸಕ್ಕೆ ಹೋಗಬೇಕು ಎಂದು ಆಲೋಚನೆ ಮಾಡುತ್ತೀರಿ ಆದರೆ ಉದ್ಯೋಗವನ್ನು ಬದಲಾಯಿಸುವವರು ಎಪ್ರಿಲ್ ತಿಂಗಳವರೆಗೆ ಕಾಯುವುದು ಒಳ್ಳೆಯದು. ಮಿಥುನ ರಾಶಿಯವರು ಶನಿವಾರದ ದಿನ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವ ವೃದ್ಧರಿಗೆ ಪಾದರಕ್ಷೆಯನ್ನು ನೀಡಿ ಅವರೊಂದಿಗೆ ಸಮಯವನ್ನು ಕಳೆಯುವುದರಿಂದ ಒಳ್ಳೆಯ ಫಲಗಳು ನಿಮಗೆ ಲಭಿಸುತ್ತದೆ.

ಮುಂದಿನ ರಾಶಿ ಕರ್ಕಾಟಕ ರಾಶಿ ಈ ಸಮಯದಲ್ಲಿ ನಿಮಗೆ ಆರೋಗ್ಯದಲ್ಲಿ ತುಂಬಾ ಏರುಪೇರು ಉಂಟಾಗುತ್ತದೆ ಚಿಕ್ಕ ಚಿಕ್ಕ ವಿಷಯಗಳಿಗೆ ತುಂಬಾ ಆಲೋಚನೆ ಮಾಡಿ ಖಿನ್ನತೆಗೆ ಒಳಗಾಗುತ್ತಿರಿ. ಕರ್ಕಾಟಕ ರಾಶಿಯವರು ಅರ್ಧ ಕೆಜಿ ಆಗುವಷ್ಟು ದಾಳಿಂಬೆ ಹಣ್ಣನ್ನು ನಾಲ್ಕು ಭಾನುವಾರ ವೆಂಕಟೇಶ್ವರನ ದೇವಸ್ಥಾನಕ್ಕೆ ನೀಡುವುದರಿಂದ ಮತ್ತು ಪ್ರತಿದಿನ ಬೀಳುವ ಎಳೆಬಿಸಿಲಿನಲ್ಲಿ ನಿಂತುಕೊಂಡು ಸೂರ್ಯನಮಸ್ಕಾರವನ್ನು ಮಾಡುವುದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಮುಂದಿನ ರಾಶಿ ಸಿಂಹ ರಾಶಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಸಮಯವಾಗಿದೆ.

ಈ ರಾಶಿಯವರು ಕೂಡ ಸೂರ್ಯನಮಸ್ಕಾರವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಜೊತೆಗೆ ನಾಲ್ಕು ಭಾನುವಾರ ಒಂದು ಕೆಜಿ ರವೆಯನ್ನು ವೆಂಕಟೇಶ್ವರನ ದೇವಸ್ಥಾನಕ್ಕೆ ಅಥವಾ ಬಡವರಿಗೆ ನೀಡುವ ಮೂಲಕ ಪರಿಹಾರವನ್ನು ಮಾಡಿಕೊಳ್ಳಬಹುದು. ಮುಂದಿನ ರಾಶಿ ಕನ್ಯಾ ರಾಶಿ ಇದು ನಿಮ್ಮ ಶತ್ರುಗಳ ನಾಶದ ಸಮಯವಾಗಿದೆ ಇದರಿಂದ ನಿಮಗೆ ತುಂಬಾ ಒಳ್ಳೆಯ ಫಲಗಳು ಉಂಟಾಗುತ್ತವೆ ನೀವು ಕೂಡ ಸೂರ್ಯನಮಸ್ಕಾರವನ್ನು ಮಾಡುವುದು ಒಳ್ಳೆಯದು. ನೀವು ಶನಿವಾರ ಒಂದು ಅಥವಾ ನಿಮ್ಮ ಕೈಯಲ್ಲಾದಷ್ಟು ಸಿಪ್ಪೆ ತೆಂಗಿನಕಾಯಿಯನ್ನು ವೆಂಕಟೇಶ್ವರನ ದೇವಸ್ಥಾನಕ್ಕೆ ದಾನ ನೀಡುವುದರಿಂದ ತುಂಬಾ ಒಳ್ಳೆಯ ಫಲಗಳು ನಿಮಗೆ ದೊರೆಯುತ್ತದೆ.

ಮುಂದಿನ ರಾಶಿ ತುಲಾ ರಾಶಿ ಈ ರಾಶಿಯವರು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. ಈ ಸಮಯವನ್ನು ಉಪಯೋಗಿಸಿ ಕೊಳ್ಳುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮಗೆ ಖಾಸಗಿ ವಲಯದಲ್ಲಿ ಅಥವಾ ಸ್ವಂತ ಉದ್ಯೋಗವನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಅಲ್ಲ ನೀವು ನಾಲ್ಕು ಸೋಮವಾರ ಶಿವನ ದೇವಸ್ಥಾನಕ್ಕೆ ಒಂದು ಲೋಟ ಕಬ್ಬಿನ ಹಾಲನ್ನು ಅಭಿಷೇಕಕ್ಕೆ ನೀಡಬೇಕು. ಇದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ರೀತಿಯ ಬದಲಾವಣೆಗಳು ಕಂಡು ಬರುತ್ತದೆ. ಮುಂದಿನ ರಾಶಿ ವೃಶ್ಚಿಕ ರಾಶಿ ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ಆದರೂ ಕೂಡ ನೀರಸ ಭಾವನೆ ಇವರಲ್ಲಿ ಕಂಡುಬರುತ್ತದೆ.

ನೀವು ಮಂಗಳವಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಂದು ಕೆಜಿ ತೊಗರಿಬೇಳೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದಾನ ನೀಡುವುದರಿಂದ ತುಂಬಾ ಒಳ್ಳೆಯ ಫಲವನ್ನು ಅನುಭವಿಸುತ್ತೀರಿ. ಮುಂದಿನ ರಾಶಿ ಧನು ರಾಶಿ ನೀವು ಸ್ವಲ್ಪ ಸ್ವಲ್ಪವಾಗಿ ಅಭಿವೃದ್ಧಿಯನ್ನು ಕಾಣುತ್ತೀರಿ ಒಳ್ಳೆಯ ರೀತಿಯ ಲಾಭ ಉಪಯೋಗಗಳು ನಿಮಗೆ ದೊರೆಯುತ್ತದೆ. ನೀವು ಸಾಧ್ಯವಾದಷ್ಟು ಶುಕ್ರವಾರದ ದಿನ ದೇವಸ್ಥಾನಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಅನ್ನದಾನಕ್ಕೆ ಮಹತ್ವವನ್ನು ನೀಡಬೇಕು ಇದರಿಂದ ನಿಮಗೆ ತುಂಬಾ ಒಳ್ಳೆಯ ಅಭಿವೃದ್ಧಿ ಕಂಡುಬರುತ್ತದೆ.

ಮುಂದಿನ ರಾಶಿ ಮಕರ ರಾಶಿ ಈ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಸಮಯವಾಗಿದೆ. ನಿವು ಈ ತಿಂಗಳು ಸಾಧ್ಯವಾದಷ್ಟು ಕಪ್ಪುಬಣ್ಣವನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಜೊತೆಗೆ ಮಂಗಳವಾರದ ದಿನ ದುರ್ಗಾದೇವಿಯ ದೇವಸ್ಥಾನಕ್ಕೆ ಮಧ್ಯಾಹ್ನದ ಮೇಲೆ ಹಸಿರು ಬಳೆಗಳನ್ನು ನೀಡುವುದರಿಂದ ನಿಮಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಮುಂದಿನದಾಗಿ ಕುಂಭ ರಾಶಿಯವರು ಈ ರಾಶಿಯವರಿಗೆ ಸಮಯ ಅಷ್ಟು ಚೆನ್ನಾಗಿಲ್ಲ ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೋದರು ಧೈರ್ಯ ಸಾಲುವುದಿಲ್ಲ ನೀವು ಸಾಧ್ಯವಾದಷ್ಟು ಸೂರ್ಯನಮಸ್ಕಾರವನ್ನು ಮಾಡಬೇಕು. ಬೆಡ್ ಶೀಟ್ ಗಳನ್ನು ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ದಾನ ನೀಡಬೇಕು.

ಕೊನೆಯದಾಗಿ ಮೀನರಾಶಿ ಇವರಿಗೆ ಎಲ್ಲ ಇದ್ದರೂ ಏನೂ ಇಲ್ಲ ಎನ್ನುವ ರೀತಿಯಲ್ಲಿ ಅನುಭವ ಆಗುತ್ತದೆ. ಜೊತೆಗೆ ಸಮಯ ಕೂಡ ಅವರಿಗೆ ಅಷ್ಟು ಸರಿಯಾಗಿ ಇಲ್ಲ ಹಾಗಾಗಿ ನೀವು ಪ್ರತಿಫಲದ ಅಪೇಕ್ಷೆಯಿಲ್ಲದೆ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಅನ್ನದಾನ ಮಾಡಬೇಕು ಅಥವಾ ವೃದ್ಧಾಶ್ರಮಗಳಿಗೆ ಅನಾಥಾಶ್ರಮಗಳಿಗೆ ಸಾಧ್ಯವಾದಷ್ಟು ಅನ್ನದಾನವನ್ನು ಮಾಡಬೇಕು ಇದರಿಂದ ನಿಮಗೆ ಮುಂದೊಂದು ದಿನ ಒಳ್ಳೆಯ ಫಲಗಳು ಲಭಿಸುತ್ತವೆ. ಫೆಬ್ರವರಿ ತಿಂಗಳಿನಲ್ಲಿ ದ್ವಾದಶ ರಾಶಿಗಳ ಫಲಗಳು ಈ ರೀತಿಯಾಗಿದ್ದು ನಾವು ಮೇಲೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave A Reply

Your email address will not be published.