ಕೆಲವರು ತುಂಬಾ ದಪ್ಪ ಇರುತ್ತಾರೆ. ಹಾಗೆಯೇ ಕೆಲವರು ತುಂಬಾ ತೆಳ್ಳಗೆ ಇರುತ್ತಾರೆ. ಆರೋಗ್ಯವಾಗಿ ಇದ್ದು ತೆಳ್ಳ ಇದ್ದರೆ ಯಾವುದೇ ತೊಂದರೆಯಿಲ್ಲ. ಆದರೆ ದಪ್ಪ ಇದ್ದರೆ ಬಹಳ ಕಷ್ಟ. ಕೆಲಸಗಳನ್ನು ಮಾಡುವುದು ಸಹ ಬಹಳ ಕಷ್ಟ. ಏಕೆಂದರೆ ದೇಹ ಭಾರವಾಗಿರುತ್ತದೆ. ಹಾಗೆಯೇ ದಪ್ಪ ಇದ್ದರೆ ಆಲಸ್ಯ ಉಂಟಾಗುತ್ತದೆ. ಯಾವುದೇ ರೀತಿಯ ಕೆಲಸ ಮಾಡುವ ಆಸಕ್ತಿ ಇರುವುದಿಲ್ಲ. ಆದ್ದರಿಂದ ನಾವು ಇಲ್ಲಿ ಹೊಟ್ಟೆಯ ಬೊಜ್ಜನ್ನು ಕರಗಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅತಿಯಾದ ಬೊಜ್ಜು ಉಂಟಾಗಲು ಕಾರಣ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ತೂಕ ಹೆಚ್ಚಾಗುತ್ತದೆ. ಆದರೆ ಕೆಲವರಿಗೆ ಒಂದೊಂದು ಭಾಗದಲ್ಲಿ ಬೊಜ್ಜು ಆಗಿರುತ್ತದೆ. ಅಂದರೆ ಕೆಲವರಿಗೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಇರುತ್ತದೆ. ಕೆಲವರಿಗೆ ಕೈ ಭುಜದ ಭಾಗದಲ್ಲಿ ಬೊಜ್ಜು ಇರುತ್ತದೆ. ಹಾಗೆಯೇ ಹೆಚ್ಚಾಗಿ ಹೊಟ್ಟೆಯ ಭಾಗದಲ್ಲಿ ಬೊಜ್ಜು ಆಗುವುದು ಹೆಚ್ಚು. ಇದರಿಂದ ದೇಹವನ್ನು ಯಾವುದಾದರೂ ಕೆಲಸ ಮಾಡಲು ಹೋದರೆ ಬಗ್ಗಿಸಲು ಆಗುವುದೇ ಇಲ್ಲ.
ದೇಹದ ಬೊಜ್ಜನ್ನು ಕರಗಿಸಲು ಮನೆಯಲ್ಲಿ ಹಲವಾರು ಔಷಧಿಗಳು ಇವೆ. ದಿನನಿತ್ಯ ಎದ್ದ ನಂತರ ಲಿಂಬೆಹಣ್ಣಿನ ರಸ ಸೇರಿಸಿ ನೀರನ್ನು ಕುಡಿಯಬೇಕು. ದಿನನಿತ್ಯ ಒಂದು ಲೋಟ ಈ ನೀರನ್ನು ಕುಡಿಯಬೇಕು. ಆದರೆ ಐಸ್ ಸೇರಿಸಿದ ನೀರನ್ನು ಕುಡಿಯಬಾರದು. ನಂತರದಲ್ಲಿ ವ್ಯಾಯಾಮ ಮತ್ತು ಯೋಗಾಸನಗಳನ್ನು ಮಾಡಬೇಕು. ಇದನ್ನು ಮಾಡಿದ ನಂತರ ಮುಕ್ಕಾಲು ಗಂಟೆಯ ಕಾಲ ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು. ದಿನನಿತ್ಯ ಯೋಗಾಭ್ಯಾಸ ಮತ್ತು ವ್ಯಾಯಾಮ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಹಾಗೆಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ದಿನಕ್ಕೆ 3 ರಿಂದ 4 ಲೀಟರ್ ನೀರನ್ನು ದಿನಕ್ಕೆ ಕುಡಿದರೆ ಬಹಳ ಒಳ್ಳೆಯದು. ಇದರಿಂದ ಹಲವಾರು ಪ್ರಯೋಜನಗಳು ಇವೆ. ಹಾಗೆಯೇ ಗ್ರೀನ್ ಟೀ ಕುಡಿಯಬೇಕು. ಅಂದರೆ ಒಳ್ಳೆಯ ಗುಣಮಟ್ಟದ ಹಸಿರು ಚಹಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಈ ಚಹಾವನ್ನು ಸೇವಿಸಬೇಕು. ಹಾಗೆಯೇ ಕರಿದ ಪದಾರ್ಥಗಳನ್ನು ತಿನ್ನಬಾರದು. ಇವುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತವೆ. ಹಾಗೆಯೇ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.