Ultimate magazine theme for WordPress.

ಉಗುರು ಸುತ್ತು ಆಗಿದೆಯಾ? ಒಂದೇ ದಿನದಲ್ಲಿ ನಿವಾರಿಸುತ್ತೆ ಈ ಮನೆಮದ್ದು

0 186

ಉಗುರು ತುಂಬಾ ಚೆನ್ನಾಗಿ ಕಾಣಬೇಕು ಎಂದು ಕೆಲವರು ಅದರ ಮೇಲೆ ಬಹಳ ಲಕ್ಷ್ಯ ವಹಿಸುತ್ತಾರೆ. ಆದರೂ ಸಹ ಕೆಲವರಿಗೆ ಉಗುರು ಸುತ್ತು ಆಗುತ್ತದೆ. ಉಗುರು ಸುತ್ತು ಎಂದರೆ ಉಗುರಿನ ಸುತ್ತ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಕಿರಿಕಿರಿ ಆಗುತ್ತದೆ. ಹಾಗೆಯೇ ಉಗುರಿನ ಅಂದ ಕೂಡ ಹಾಳಾಗುತ್ತದೆ. ಇದಕ್ಕೆ ಹಲವಾರು ಮನೆಮದ್ದುಗಳು ಇವೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಉಗುರಿನಲ್ಲಿ ಕೆಲವೊಮ್ಮೆ ಬಾವುಗಳು ಆಗುತ್ತವೆ. ಹಾಗೆಯೇ ಕೆಲವೊಮ್ಮೆ ನಂಜುಗಳು ಆಗುತ್ತವೆ. ನಂಜು ಆಗಿ ನೀರು ತುಂಬುತ್ತದೆ. ಇದರಿಂದ ಬಹಳ ನೋವಾಗುತ್ತದೆ. ಇದರಿಂದ ಉಗುರು ತುಂಬಾ ದಪ್ಪ ಆಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದರಿಂದ ಉಗುರು ಸುತ್ತು ಆಗುತ್ತದೆ. ಹಾಗೆಯೇ ಉಗುರನ್ನು ಬಹಳ ಹತ್ತವಾಗಿ ಕತ್ತರಿಸಬಾರದು. ಇದರಿಂದ ಕೂಡ ಆಗುತ್ತದೆ. ಇದು ಹೆಚ್ಚಾದರೆ ಚಳಿ ಮತ್ತು ಜ್ವರ ಬರುವ ಸಾಧ್ಯತೆ ಇರುತ್ತದೆ.

ಇದಕ್ಕೆ ಪರಿಹಾರಗಳು ಬಹಳ ಇವೆ. ಮೊದಲನೆಯದಾಗಿ ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಂತರದಲ್ಲಿ ಉಗುರು ಸುತ್ತು ಆಗಿರುವ ಜಾಗವನ್ನು ಉಪ್ಪಿನ ನೀರನ್ನು ಬಳಸಿ ತೊಳೆಯಬೇಕು. ಇದರಿಂದ ನಂಜು ಆಗುವುದಿಲ್ಲ. ಉಪ್ಪು ಇದು ಅನೇಕ ಔಷಧಿ ಗುಣಗಳನ್ನು ಹೊಂದಿದೆ. ಹಾಗೆಯೇ ಅರಿಶಿಣ ಬಳಸಿ ತಯಾರಿ ಮಾಡಿದ ಔಷಧಿಗಳನ್ನು ಹಚ್ಚುವುದರಿಂದ ಹಂತ ಹಂತವಾಗಿ ಕಡಿಮೆ ಆಗುತ್ತದೆ. ಹಾಗೆಯೇ ಇದಕ್ಕೆ ಆಯುರ್ವೇದದ ಔಷಧಿಗಳು ಸಿಗುತ್ತವೆ.

ಇದನ್ನು ನೇರವಾಗಿ ಬಳಸಬಾರದು. ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಗಳನ್ನು ಪಡೆದು ಬಳಸಬೇಕು. ಯಾವುದನ್ನಾದರೂ ಅಷ್ಟೇ ಮೊಬೈಲ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಹಾಗೆಯೇ ಮಾಡಬಾರದು. ಏಕೆಂದರೆ ಕೆಲವೊಮ್ಮೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವ ರೋಗಕ್ಕಾದರೂ ವೈದ್ಯರ ಸಲಹೆ ಪಡೆಯುವುದು ಬಹಳ ಅವಶ್ಯಕ ಆಗಿದೆ. ಉಗುರು ಸುತ್ತು ಅಷ್ಟೇನೂ ದೊಡ್ಡತೊಂದರೆ ಅಲ್ಲ. ಇದನ್ನು ಶುರುವಿನಲ್ಲೇ ಔಷಧಿ ಮಾಡಿಕೊಂಡರೆ ಬೇಗ ಶಮನವಾಗುತ್ತದೆ.

Leave A Reply

Your email address will not be published.