ದೇಹದ ಬೊಜ್ಜು ಬೇಗನೆ ಇಳಿಸಿಕೊಳ್ಳಬೇಕಾ? ಚಿಂತೆ ಬಿಟ್ಟು ಮನೆಯಲ್ಲೇ ಮಾಡಿ ಈ ಮನೆಮದ್ದು

0 2

ಈಗಿನ ಆಧುನಿಕತೆಯ ಆಹಾರ ಪದ್ಧತಿ, ಕೆಲಸ, ಇತ್ಯಾದಿಗಳ ಪರಿಣಾಮವಾಗಿ ಬಹಳಷ್ಟು ಜನರು ದಪ್ಪಾಗಿ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಾರೆ. ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ ಆದರೆ ಮನೆಯಲ್ಲಿ ಸುಲಭವಾಗಿ 5 ನಿಮಿಷದಲ್ಲಿ ಮಾಡಿಕೊಂಡ ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸಿ ವೇಟ್ ಕಡಿಮೆಯಾಗಲು ಸಾಧ್ಯವಾಗುತ್ತದೆ. ಹಾಗಾದರೆ ಈ ನೀರನ್ನು ತಯಾರಿಸುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು ನೀರು, ಪಲಾವ್ ಎಲೆ, ದಾಲ್ಚಿನಿ, ಏಲಕ್ಕಿ, ಜೀರಿಗೆ. ಮಾಡುವ ವಿಧಾನವೆಂದರೆ ಮೊದಲು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಕುದಿಸಬೇಕು. ನೀರು ಸ್ವಲ್ಪ ಬಿಸಿಯಾದ ನಂತರ ಎರಡು ಪಲಾವ್ ಎಲೆಯನ್ನು ಹಾಕಬೇಕು ಅದಕ್ಕೆ ಒಂದು ಇಂಚು ದಾಲ್ಚಿನಿ ಚಕ್ಕೆ, ಎರಡು ಏಲಕ್ಕಿ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆಗ ಹಾಕಿದ ಸಾಮಗ್ರಿಗಳ ಅಂಶ ಬಿಡುತ್ತದೆ. ನಂತರ ಈ ನೀರನ್ನು ಸೋಸಿಕೊಳ್ಳಬೇಕು. ಈ ನೀರನ್ನು ಡಯಾಬಿಟಿಸ್, ಥೈರಾಯಿಡ್ ಸಮಸ್ಯೆ ಇರುವವರು ಕೂಡ ಕುಡಿಯಬಹುದು. ಈ ನೀರನ್ನು ಬೆಳಗ್ಗೆ ಒಂದು ಲೋಟ ಹಾಗೂ ಸಂಜೆ ಒಂದು ಲೋಟ ಕುಡಿಯಬೇಕು ಕುಡಿಯುವಾಗ ನೀರು ಸ್ವಲ್ಪ ಬಿಸಿಯಾಗಿರಬೇಕು ಈ ನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬಹುದು.

ಈ ನೀರನ್ನು ಒಂದು ತಿಂಗಳು ಕುಡಿಯುವುದರಿಂದ 5-6 ಕೆ.ಜಿ ಕಡಿಮೆಮಾಡಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಇದರ ಜೊತೆಗೆ ತೊಡೆ, ಕೈ, ಸೊಂಟದಲ್ಲಿ ಇರುವ ಬೊಜ್ಜು ಕಡಿಮೆಯಾಗುತ್ತದೆ. ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಮೇಟೊಪಾಲಿಕ್ ಕಡಿಮೆಯಾಗಿ ಹೆಚ್ಚು ಶಕ್ತಿಯುತವಾಗಿ ಇರಬಹುದಾಗಿದೆ. ಬಹಳ ಮಹಿಳೆಯರಿಗೆ ಡೆಲಿವರಿ ಆದ ನಂತರ ಬರುವ ಬೊಜ್ಜು ಕೂಡ ಕಡಿಮೆಯಾಗುತ್ತದೆ ಆದರೆ ಡೆಲವರಿ ಆದ ಒಂದು ವರ್ಷದ ನಂತರ ಈ ನೀರನ್ನು ಕುಡಿಯಬೇಕು. ಸಣ್ಣ ಮಕ್ಕಳಿಂದ ವೃದ್ದರವರೆಗೆ ಬೇಕಾದರೂ ಈ ನೀರನ್ನು ಕುಡಿಯಬಹುದು. ಈ ನೀರನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಿ ಕುಡಿಯಬಹುದು ಇದರಿಂದ ಸುಲಭವಾಗಿ ವೇಟ್ ಲಾಸ್ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.