ರೈತನೊಬ್ಬ ತಾನು ಬೆಳೆದ ಬೆಳೆಯನ್ನು ಸಾಗಿಸಲು ಮಾಡಿದ ಪ್ಲಾನ್ ಇದೀಗ ಸಕತ್ ವೈರಲ್

0 3

ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ರೈತರು ಕಷ್ಟಪಟ್ಟು ದುಡಿಯುವುದರಿಂದಲೆ ಹಸಿದವರಿಗೆ ಅನ್ನ ಸಿಗುವುದು. ರೈತರು ಜಮೀನಿನಲ್ಲಿ ದುಡಿದು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುವುದು ಸುಲಭವಲ್ಲ. ತೆಲಂಗಾಣ ರಾಜ್ಯದಲ್ಲಿ ರೈತನೊಬ್ಬ ತಾನು ಬೆಳೆದ ಬೆಳೆಯನ್ನು ಸಾಗಿಸಲು ಸಮಸ್ಯೆಯನ್ನು ಎದುರಿಸಬೇಕಾಯಿತು. ಸಮಸ್ಯೆಗೆ ರೈತನು ಮಾಡಿದ ಉಪಾಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ರೈತನಿಗೆ ತನ್ನ ಜಮೀನಿನಲ್ಲಿ ಬೆಳೆ ತೆಗೆಯುವುದು ಒಂದು ದೊಡ್ಡ ಚಾಲೆಂಜ್ ಆದರೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸೂಕ್ತ ಬೆಲೆಗೆ ಮಾರಾಟ ಮಾಡುವುದು ಇನ್ನೊಂದು ದೊಡ್ಡ ಚಾಲೆಂಜ್ ಆಗಿದೆ. ತೆಲಂಗಾಣ ರಾಜ್ಯದ ಕರ್ನೂರು ಜಿಲ್ಲೆಯ ಮರಿಡುದಿಣ್ಣೆ ಎಂಬ ಹಳ್ಳಿ, ಈ ಹಳ್ಳಿಯು ದಟ್ಟ ಅರಣ್ಯದಲ್ಲಿ ಇರುವ ಒಂದು ಕುಗ್ರಾಮವಾಗಿದೆ. ಈ ಗ್ರಾಮದಲ್ಲಿ ವಾಸವಾಗಿರುವ ಗೋಪಯ್ಯ ಎಂಬ ರೈತನಿಗೆ ತಾನು ಬೆಳೆದ ಪರಂಗಿ ಹಣ್ಣುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಒಂದು ಸಮಸ್ಯೆ ಎದುರಾಯಿತು. ಅವರು ಬಹಳ ಕಷ್ಟಪಟ್ಟು ಪರಂಗಿ ಹಣ್ಣುಗಳನ್ನು ಬೆಳೆದಿದ್ದರು.

ಪ್ರತಿದಿನ ತಾವು ಬೆಳೆದ ಪರಂಗಿ ಹಣ್ಣುಗಳನ್ನು ಬಸ್ ನಲ್ಲಿ ತೆಗೆದುಕೊಂಡು ಹೋಗಿ ಕೊಲ್ಲಾಪುರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬರುತ್ತಿದ್ದರು. ಈ ಹಳ್ಳಿಗೆ ಒಂದು ಸರ್ಕಾರಿ ಬಸ್ ಮಾತ್ರ ಇತ್ತು. ಎಂದಿನಂತೆ ಗೋಪಯ್ಯ ತಾವು ಬೆಳೆದ ಪರಂಗಿ ಹಣ್ಣುಗಳನ್ನು ಬಾಕ್ಸ್ ಗೆ ತುಂಬಿಕೊಂಡು ಬಸ್ ಗಾಗಿ ಕಾಯುತ್ತಾ ಕುಳಿತಿದ್ದರು.

ಬಸ್ ಬಂತು ಬಸ್ ನ ಡ್ರೈವರ್ ಗೋಪಯ್ಯನ ಬಳಿ ನೀನು ಪರಂಗಿ ಹಣ್ಣುಗಳನ್ನು ಉಚಿತವಾಗಿ ನನಗೆ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಗೋಪಯ್ಯ ಇವತ್ತು ಲೆಕ್ಕ ಮಾಡಿ ಇಟ್ಟಿದ್ದೇನೆ ಇನ್ನೊಂದಿನ ಕೊಡುತ್ತೇನೆ ಎಂದು ಹೇಳಿದನು. ಗೋಪಯ್ಯನ ಮಾತಿನಿಂದ ಕೋಪಗೊಂಡ ಬಸ್ ಡ್ರೈವರ್ ಗೋಪಯ್ಯನನ್ನು ಅಲ್ಲಿಯೆ ಬಿಟ್ಟು ಬಸ್ ಚಲಾಯಿಸಿದ. ಬಸ್ ಕೊಲ್ಲಾಪುರಕ್ಕೆ ಹೋಗಿ ವಾಪಸ್ ಹಳ್ಳಿಗೆ ಬರುವವರೆಗೆ ಗೊಪ್ಪಯ್ಯ ಕಾಯುತ್ತಾ ಕುಳಿತಿದ್ದನು.

ಬಸ್ ಬರುತ್ತಿದ್ದಂತೆ ಗೋಪಯ್ಯ ಪರಂಗಿ ಹಣ್ಣುಗಳನ್ನು ಬಾಕ್ಸ್ ಗಳನ್ನು ರೋಡಿನಲ್ಲಿ ಇಟ್ಟನು ಡ್ರೈವರ್ ನ ಬಳಿ ಈಗ ಹೇಗೆ ಹೋಗುತ್ತೀಯಾ ಹೋಗು ಎಂದು ಸವಾಲು ಹಾಕುತ್ತಾನೆ. ಯಾರು ಎಷ್ಟೆ ಹೇಳಿದರೂ ರೋಡಿನಿಂದ ಕದಲಲಿಲ್ಲ, ಜನರು ಬಸ್ ನ ಡ್ರೈವರ್ ಇನ್ನುಮುಂದೆ ಹಾಗೆ ಮಾಡುವುದಿಲ್ಲ ಎಂದು ಹೇಳಿದರು. ಅಂತೂ ಗೋಪಯ್ಯನ ಮನವೊಲಿಸಿ ಬಸ್ ಹೊರಡುವಂತೆ ಮಾಡಲಾಯಿತು. ರೈತನು ಕಷ್ಟಪಟ್ಟು ದುಡಿದ ಬೆಳೆಯನ್ನು ಉಚಿತವಾಗಿ ಕೇಳುವುದು ಸರಿಯಲ್ಲ ಅಲ್ಲದೆ ಬಸ್ ಹೊರಡಿಸಿಕೊಂಡು ಹೋಗಿರುವುದು ಸರಿಯಲ್ಲ. ಬಸ್ ಡ್ರೈವರ್ ನಿಗೆ ರೈತ ಮಾಡಿರುವುದು ಸರಿನ, ತಪ್ಪ ಎಂದು ನಿಮ್ಮ ಅನಿಸಿಕೆಯನ್ನು ತಿಳಿಸಿ.

Leave A Reply

Your email address will not be published.