ಕಣ್ಣಿನ ದೃಷ್ಟಿ ಹೆಚ್ಚಿಸುವ ಆಹಾರಗಳಿವು

0 2

ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಪ್ರಾಧಾನವಾಗಿವೆ ಬಾಹ್ಯ ಪ್ರಪಂಚದ ಆಗು ಹೋಗುಗಳನ್ನು ನೋಡಲು ಮತ್ತು ಅವುಗಳನ್ನು ಆನಂದಿಸಲು ಕಣ್ಣುಗಳು ಬಹಳ ಅವಶ್ಯಕ. ನಮ್ಮ ದೇಹದ ಆರೋಗ್ಯದ ವಿಷಯವಾಗಿ ನಾವು ಕಾಳಜಿ ವಹಿಸುವಂತೆ ಕಣ್ಣುಗಳ ಆರೋಗ್ಯದ ವಿಷಗಳಲ್ಲಿಯೂ ಸಹ ಅತಿ ಹೆಚ್ಚು ಗಮನ ನೀಡುವುದು ಅತ್ಯವಶ್ಯಕ ಹಾಗಾಗಿ, ಈ ನಮ್ಮ ಅತ್ಯಮೂಲ್ಯವಾದ ಮತ್ತು ಅತೀ ಸೂಕ್ಷ್ಮವಾದ ಕಣ್ಣುಗಳ ಆರೈಕೆಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ .

ವಿಟಮಿನ್ ಸಿ ಇರುವಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣುಗಳ ಯಾವುದೇ ಸಮಸ್ಯೆ ನಮ್ಮನ್ನು ಬಾದಿಸದಂತೆ ನಾವು ತಡೆಯಬಹುದಾಗಿದೆ ಮತ್ತು ಕಣ್ಣಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳು ಹತ್ತಿರ ಸುಳಿಯಲಾರವು ಕಣ್ಣಿಗೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ನಾವು ಧಾನ್ಯಗಳ ಬಳಕೆಯಿಂದಲೂ ಪಡೆಯಬಹುದಾಗಿದೆ, ಧಾನ್ಯಗಳಲ್ಲಿ ಒಮೆಗಾ 3 ಮತ್ತು ವಿಟಮಿನ್ ಇ ಇರುವ ಕಾರಣ ಕಣ್ಣುಗಳ ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಇದರಿಂದ ದೊರೆಯುತ್ತವೆ.

ಹಸಿರು ತರಕಾರಿಗಳು ಮತ್ತು ಸೊಪ್ಪುಗಳ ನಿಯಮಿತ ಬಳಕೆಯು ಯಾವುದೇ ರೀತಿಯ ದೃಷ್ಟಿ ದೋಷ ತಗುಲದಂತೆ ಕಾಯುತ್ತದೆ ಮತ್ತು ಕಣ್ಣಿಗೆ ಅಗತ್ಯವಾದ ವಿಟಮಿನ್ ಸಿ ಹೆರಳವಾಗಿದ್ದು ಕಣ್ಣಿನ ದೃಷ್ಟಿ ಸುದಾರಿಸುವಲ್ಲಿ ಇವುಗಳು ಪ್ರಮುಖ ಪಾತ್ರವಹಿಸುತ್ತವೆ, ತಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ಹಸಿ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ನಿಯಮಿತವಾಗಿ ಸೇವಿಸುವುದು ಕಣ್ಣುಗಳ ಆರೋಗ್ಯದ ದೃಷ್ಟಿಯಿಂದ ಬಹಳ ಒಳಿತು.

ಕ್ಯಾರೆಟ್ ನಂತೆಯೇ ಸಿಹಿ ಗೆಣಸಿನಲ್ಲಿಯೂ ಸಹ ಬೀಟಾಕೆರೋಟಿನ್ ಅಂಶಗಳಿದ್ದು ಮತ್ತು ವಿಟಮಿನ್ ಇ ಕೂಡ ಹೆರಳವಾಗಿರುತ್ತದೆ ಆದ್ದರಿಂದ ಇದೂ ಕೂಡ ಕಣ್ಣಿನ ದೃಷ್ಟಿಯ ಆರೋಗ್ಯವನ್ನು ಕಾಪಾಡುವಲ್ಲಿ ಗಣನೀಯ ಪಾತ್ರವಹಿಸುತ್ತದೆ, ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ವಿಟಮಿನ್ ಇ ಮತ್ತು ವಿಟಮಿನ್ ಸಿ ಹಾಗೂ ಜಿಂಕ್ ಹೆರಳವಾಗಿರುವುದರಿಂದ ಕಣ್ಣುಗಳ ಆರೋಗ್ಯದ ದೃಷ್ಟಿಯಿಂದ ಮೊಟ್ಟೆ ಬಳಕೆಯು ಕೂಡ ಉತ್ತಮವಾದದ್ದು ಅಲ್ಲದೇ ಪ್ರತಿದಿನ ಒಂದು ಮೊಟ್ಟೆ ಸೇವಿಸುವುದರಿಂದ ಮುಪ್ಪಿನ ಕಾಲದಲ್ಲಿ ಉಂಟಾಗುವಂತಹ ದೃಷ್ಟಿ ದೋಷಗಳು ಬಾದಿಸುವುದಿಲ್ಲ.

ಅತೀ ಹೆಚ್ಚು ನೀರು ಕುಡಿಯುವುದರಿಂದಲೂ ಸಹ ಕಣ್ಣುಗಳ ಹೆಚ್ಚಿನ ಸುದಾರಣೆಯನ್ನು ಮಾಡಬಹುದಾಗಿದೆ ಅತೀ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ನಿರ್ಜಲೀಕರಣ ನಿವಾರಿಸುತ್ತದೆ ಆದ್ದರಿಂದ ಕಣ್ಣುಗಳ ಒಣಗುವಿಕೆಯನ್ನು ಇದು ತಡೆಯುತ್ತದೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕಣ್ಣಿನ ಆರೋಗ್ಯ ಸುಧಾರಣೆಯಲ್ಲಿ ಉತ್ತಮ ಪಾತ್ರವಹಿಸುತ್ತವೆ ಮತ್ತು ಮೀನು ಸೇವನೆಯು ಕೂಡ ಕಣ್ಣಿನ ದೃಷ್ಟಿ ಸುದಾರಿಸುವಲ್ಲಿ ಬಹಳ ಸಹಾಯಕಾರಿಯಾಗಿರುತ್ತದೆ ಮತ್ತು ದೇಹಕ್ಕೆ ಮತ್ತು ಕಣ್ಣುಗಳಿಗೆ ಬೇಕಾದ ಉತ್ತಮ ಪೋಷಕಾಂಶಗಳನ್ನೂ ಸಹ ಇದೂ ಒದಗಿಸುತ್ತದೆ.

Leave A Reply

Your email address will not be published.