ಕಣ್ಣಿನ ದೃಷ್ಟಿ ಹೆಚ್ಚಿಸಲು ಹೇಳಿಮಾಡಿಸಿದಂತ ಮನೆಮದ್ದು

0 26

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸತತ ಹಲವು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಅದಕ್ಕಾಗಿ ನೀವು ಖಂಡಿತವಾಗಿಯೂ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಳ್ಳಬೇಕು. ಎನ್‌ಡಿಟಿವಿಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆಯು ನಿಮ್ಮ ಕಣ್ಣಿನ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ತಿಳಿಸಿದೆ. ಸಾಮಾನ್ಯವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಕೂಡ ಎಲ್ಲರಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಣ್ಣಿನಲ್ಲಿ ನೀರು ಬರುವುದು ಅಥವಾ ಕಣ್ಣು ಉರಿಯುವುದು ಅಥವಾ ಕಣ್ಣಿನ ದೃಷ್ಟಿ ಕಡಿಮೆಯಾಗುವುದು ದೂರದೃಷ್ಟಿ ಸಮೀಪ ದೃಷ್ಟಿ ಹೀಗೆ ಹಲವಾರು ಬಗೆಯ ಕಣ್ಣಿನ ಸಮಸ್ಯೆಗಳನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಅನುಭವಿಸುತ್ತಿದ್ದಾರೆ.

ಈ ರೀತಿಯ ಸಮಸ್ಯೆ ನಮಗೆ ಕಂಡು ಬರಲು ಮುಖ್ಯವಾದ ಕಾರಣ ನಾವು ಸೇವಿಸುವಂತಹ ಆಹಾರ ಪದ್ಧತಿ ನಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ವಿಟಮಿನ್ಸ್ ಮತ್ತು ಪೋಷಕಾಂಶಗಳು ಇಲ್ಲದೆ ಇರುವುದು ಕಣ್ಣಿಗೆ ಬೇಕಾದಂತಹ ಪೋಷಕಾಂಶಗಳು ಸರಿಯಾದ ಸಮಯಕ್ಕೆ ದೊರೆಯದೇ ಇರುವುದರಿಂದ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳು ನಮ್ಮಲ್ಲಿ ಕಾಣಿಸಿಕೊಂಡಾಗ ನಾವು ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ಅಥವಾ ಕನ್ನಡಕವನ್ನು ಪಡೆದು ಹಾಕಿಕೊಳ್ಳುತ್ತೇವೆ ಆದರೆ ಇವೆಲ್ಲವೂ ಕೂಡ ತಾತ್ಕಾಲಿಕ ಪರಿಹಾರ ವಾಗಿರುತ್ತದೆ ಶಾಶ್ವತವಾಗಿ ಕಣ್ಣಿನ ಸಮಸ್ಯೆ ನಿವಾರಣೆ ಮಾಡಬೇಕು. ಹಾಗಿದ್ದರೆ ಕಣ್ಣಿನ ಸಮಸ್ಯೆಗೆ ನಾವು ನಮ್ಮ ಆಹಾರದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬಹುದು? ಹಾಗೂ ಇದಕ್ಕೆ ಮನೆಮದ್ದು ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಣ್ಣುಗಳ ದೃಷ್ಟಿ ಹೆಚ್ಚಿಸಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು ಹೆಚ್ಚಾಗಿ ಕ್ಯಾರೆಟ್ ಸೇವಿಸಿ. ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಕಣ್ಣುಗಳಿಗೆ ಬಹಳ ಪ್ರಯೋಜನಕಾರಿ. ಇದು ರಾತ್ರಿ ಕುರುಡುತನದಿಂದ ರಕ್ಷಿಸುತ್ತದೆ. ಹಾಗೆಯೇ ವಯಸ್ಸಿನ ದೃಷ್ಟಿ ಸಮಸ್ಯೆಯನ್ನು ತಡೆಯಲು ಸಹಕಾರಿಯಾಗಿದೆ. ಇದಲ್ಲದೆ, ಹಸಿರು ಎಲೆಗಳ ತರಕಾರಿಗಳು, ಕೋಸುಗಡ್ಡೆ ಮತ್ತು ಕಿತ್ತಳೆ ಮುಂತಾದ ಆಹಾರಗಳನ್ನು ಸೇವಿಸುವುದು ಕೂಡ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಕಣ್ಣುಗಳಿಗೂ ಪ್ರಯೋಜನಕಾರಿ. ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶ, ಸೋಯಾಬೀನ್ ಎಣ್ಣೆ ಇತ್ಯಾದಿಗಳನ್ನು ಸೇರಿಸಿ. ಒಮೆಗಾ3 ಅಂಶವಿರುವ ವಸ್ತುಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿ. ವಿಟಮಿನ್ ಸಿ ಮೂಳೆಗಳಿಗೆ ಮಾತ್ರವಲ್ಲದೆ ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿ. ಕಿತ್ತಳೆ, ನಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಸಹ ವಿಟಮಿನ್ ಸಿ ಯ ಉತ್ತಮ ಮೂಲಗಳಾಗಿವೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಿ.

ವಿಟಮಿನ್ ಇ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಹಾಗೆಯೇ ಇದು ನಿಮ್ಮ ಕಣ್ಣುಗಳಿಗೂ ಒಳ್ಳೆಯದು. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದರ ಉತ್ತಮ ಮೂಲಗಳು ಬಾದಾಮಿ, ಪಾಲಕ, ಆವಕಾಡೊ ಇತ್ಯಾದಿ. ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಕಣ್ಣುಗಳ ದೃಷ್ಟಿ ಹೆಚ್ಚಿಸಲು ಆಹಾರದಲ್ಲಿ ಜಿಂಕ್ ಅಂಶವಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಜಿಂಕ್​ ಕೊರತೆಯು ರಾತ್ರಿ ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಒಯಿಸ್ಟರ್ ಮಾಂಸ ಕುಂಬಳಕಾಯಿ ಬೀಜಗಳು ಕಡಲೆ ಮತ್ತು ಬಾದಾಮಿ ಹೆಚ್ಚಾಗಿ ಸೇರಿಸಿ.

ಇನ್ನೂ ಈ ಒಂದು ಮನೆ ಮದ್ದು ಮಾಡುವ ವಿಧಾನ ಮೊದಲಿಗೆ ಒಂದು ಮಿಕ್ಸಿ ಜಾರಿಗೆ 50 ಗ್ರಾಂ ಸೋಂಪು, 50 ಗ್ರಾಂ ಕಲ್ಲು ಸಕ್ಕರೆ, 25 ಗ್ರಾಂ ಬಾದಮಿ ಹಾಕಿ ಪುಡಿ ಮಾಡಿಕೊಳ್ಳಬೇಕು‌. ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ಬಿಸಿ ಹಾಲಿಗೆ ತಯಾರಿಸಿದ ಒಂದು ಟೇಬಲ್ ಸ್ಪೂನ್ ಮಿಶ್ರಣವನ್ನು ಮಿಕ್ಸ್ ಮಾಡಿ ಕುಡಿಯಿರಿ. ಹಾಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಬಿಸಿ ಹಾಲಿಗೆ ತಯಾರಿಸಿದ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ಹಾಕಿಕೊಂಡು ಸೇವಿಸುತ್ತ ಬಂದರೆ ನಿಮ್ಮ ಕಣ್ಣಿನ ದೋಷಗಳು ನಿವಾರಣೆಯಾಗುತ್ತದೆ. ಸತತ ಒಂದು ತಿಂಗಳಿಂದ ಎರಡು ತಿಂಗಳವರೆಗೂ ನೀವು ಈ ಒಂದು ನಿಯಮವನ್ನು ಪ್ರಮಾಣ ಬದ್ಧವಾಗಿ ಪಾಲಿಸಬೇಕಾಗುತ್ತದೆ.

Leave A Reply

Your email address will not be published.