ಮನುಷ್ಯ ಅಂದ ಮೇಲೆ ಕಷ್ಟ ದುಃಖ, ನೋವು ನಲಿವು, ಎಲ್ಲವು ಕೂಡ ಸಹಜವಾಗಿ ಬರುತ್ತದೆ ಆದ್ರೆ ಕೆಲವರಲ್ಲಿ ಅವುಗಳನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ಇದ್ರೆ, ಇನ್ನು ಕೆಲವರಿಗೆ ಅವುಗಳನ್ನು ಎದುರಿಸುವ ಸಾಮರ್ಥ್ಯ ಕಡಿಮೆ ಅನ್ನಬಹುದು. ಅದೇನೇ ಇರಲಿ ಎಲ್ಲರು ಕೂಡ ಒಂದೇ ರೀತಿಯಲ್ಲಿ ಇರೋದಿಲ್ಲ, ಕೆಲವರಿಗೆ ಚಿಕ್ಕದಾಗಿ ಏನಾದ್ರು ಅಂದುಬಿಟ್ರೆ ಅವ್ರು ಅತ್ತೇಬಿಡುತ್ತಾರೆ. ಹೀಗೆ ಚಿಕ್ಕ ಪುಟ್ಟ ವಿಷ್ಯಕ್ಕೆ ಅಳೋರನ್ನ ಕಂಡ್ರೆ ಜನ ಅಳುಮುಂಜಿ ಎಂಬುದಾಗಿ ಕರೆಯುತ್ತಾರೆ, ಆದ್ರೆ ಅವರಿಗೇನು ಗೊತ್ತು ಸ್ವಲ್ಪ ಮನಸ್ಸಿಗೆ ನೋವಾದ್ರೂ ತಡ್ಕೊಳೋ ಶಕ್ತಿ ಈ ಸೂಕ್ಷ್ಮವಾಗಿರುವಂತ ವ್ಯಕ್ತಿಗಳಿಗೆ ಇರೋದಿಲ್ಲ ಎಂಬುದಾಗಿ.
ಆದ್ರೆ ಇಲ್ಲೊಂದು ಸಂಶೋಧನೆ ಏನ್ ಹೇಳ್ತಿದೆ ಗೊತ್ತೇ, ಸಂಶೋಧನೆ ಹೇಳುವ ಪ್ರಕಾರ ಚಿಕ್ಕ ಪುಟ್ಟ ವಿಷ್ಯಕ್ಕೆ ಅಳೋರು ದುರ್ಬಲರು ಅಲ್ಲ ಗುಣ ಸ್ವಭಾವದಲ್ಲಿ ತುಂಬಾನೇ ಒಳ್ಳೆಯವರಾಗಿರುತ್ತಾರೆ, ಅಷ್ಟೇ ಅಲ್ಲದೆ ಇವರಲ್ಲಿ ಯಾವುದೇ ರೀತಿಯ ಸ್ವಾರ್ಥ ಭಾವನೆ ಕಡಿಮೆ ಅನ್ನೋದನ್ನ ಹೇಳಲಾಗುತ್ತದೆ.
ನೂರು ಜನ ನೂರು ಮಾತಾಡ್ತಾರೆ ಅಂತ ನೀವು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಮನಸ್ಸಿನಲ್ಲಿ ಇರುವಂತ ನೋವನ್ನು ಅಳುವಿನ ಮೂಲಕ ಹೊರಹಾಕುವುದು ಕೂಡ ಉತ್ತಮ ಅನ್ನೋದನ್ನ ಹೇಳಲಾಗುತ್ತದೆ. ನಿಮಗೆ ಗೊತ್ತಿರಬಹುದು ಮನಸ್ಸಿಗೆ ತುಂಬಾನೇ ದುಃಖವಾದಾಗ ಅತ್ತು ಬಿಡೋದು ಒಳ್ಳೇದು ಇಲ್ಲದಿದ್ದರೆ ನೋವು ಮನಸ್ಸಿನಲ್ಲೇ ಇದ್ದು ಕೊರಗುವಂತೆ ಮಾಡುತ್ತದೆ.
ಹೌದು ಬೇಸರ ಹಾಗೂ ಒತ್ತಡ ಹೋಗಲಾಡಿಸಲು ಅಳುವುದು ಒಂದು ರೀತಿಯ ಉತ್ತಮ ಔಷಧಿ ಎಂದರೆ ನೀವು ನಂಬಲೇ ಬೇಕು. ಯಾವುದೇ ವಿಷಯವನ್ನಾಗಲಿ ಮನಸಿನಲ್ಲಿ ಹಾಗೆ ಇಟ್ಟುಕೊಂಡು ಕೊರಗುತ್ತ ಇದ್ರೆ ಅದು ನಮ್ಮ ಮೇಲೆಯೇ ಪರಿಣಾಮ ಬೀರುತ್ತದೆ ಆದ್ದರಿಂದ ನೋವಾದಾಗ ಅಳುವುದು ಕೂಡ ಒಳ್ಳೆಯದು ಅನ್ನೋದು ಸಂಶೋದರ ಮಾತಾಗಿದೆ.