ಇವತ್ತಿನ ಈ ಲೇಖನದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಈ ಯೋಜನೆಯ ಬಗ್ಗೆ ಎಲ್ಲರಿಗೂ ತಿಳಿದಿರತ್ತೆ. ಈ ಯೋಜನೆಯಲ್ಲಿ ಯಾರೂ ಅಕ್ಕೌಂಟ್ ಮಾಡಬಹುದು ಅದರ ಲಾಭಗಳು ಏನೂ ಅನ್ನೋದನ್ನ ನೋಡೋಣ.

ಸುಕನ್ಯಾ ಸಮೃದ್ಧಿ ಯೋಜನೆಯನ್ನ ಭಾರತ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು ಹೆಣ್ಣುಮಕ್ಕಳಿಗಾಗಿ ಜಾರಿಗೆ ತರಲಾಗಿದೆ. ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಅವರ ವಿದ್ಯಾಭ್ಯಾಸ, ಮದುವೆ ಹೀಗೆ ಅವರ ಭವಿಷ್ಯವನ್ನು ರೂಪಿಸುವ ಸಲುವಾಗಿ ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಹೆಚ್ಚಿನ ಆದಾಯ ಬರತ್ತೆ. ಫಿಕ್ಸೆಡ್ ಡಿಪಾಸಿಟ್ ಗೆ ಹೋಲಿಸಿದರೆ, ಈ ಯೋಜನೆಯಲ್ಲಿ ಇಂಟರೆಸ್ಟ್ ರೇಟ್ ಜಾಸ್ತಿ ಇರತ್ತೆ. ಹಾಗೇ ಇದು ಒಂದು ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಇದರಿಂದ ಯಾವುದೇ ಮೋಸ ಆಗುವುದಿಲ್ಲ. ಇದು ಸದಾಕಾಲ ಟ್ಯಾಕ್ಸ್ ಫ್ರೀ ಆಗಿರುತ್ತೆ ಯಾವುದೇ ಟ್ಯಾಕ್ಸ್ ತುಂಬಬೇಕಾದ ಅಗತ್ಯ ಇರಲ್ಲ.

ಈ ಯೋಜನೆಯ ಉಪಯೋಗವನ್ನು ಹೆಣ್ಣು ಮಕ್ಕಳು ಮಾತ್ರ ಪಡೆಯಬಹುದು ಹಾಗಾಗಿ ಹೆಣ್ಣುಮಕ್ಕಳು ಮಾತ್ರ ಈ ಯೋಜನೆಯಲ್ಲಿ ಅಕ್ಕೌಂಟ್ ಮಾಡಬಹುದು. ಈ ಯೋಜನೆಯಲ್ಲಿ ಅಕ್ಕೌಂಟ್ ಮಾಡಲು ಬಯಸುವ ಹೆಣ್ಣು ಮಕ್ಕಳ ವಯಸ್ಸು ೧೦ ವರ್ಷಕ್ಕೂ ಕಡಿಮೆ ಇರಬೇಕು. ಹಾಗೇ ೨ ಅಥವಾ ೩ ಅಕ್ಕೌಂಟ್ ಗಳನ್ನು ಮಾಡಬಹುದು. ಇದರಲ್ಲಿ ಮೊದಲು ಸಾವಿರ ರೂಪಾಯಿ ಡೆಪಾಸಿಟ್ ಮಾಡಲು ಅವಕಾಶ ಇತ್ತು ಈಗ ಕೇವಲ ೨೫೦ ರೂಪಾಯಿ ಮಾತ್ರ ಡೆಪಾಸಿಟ್ ಮಾಡಬಹುದು. ಅತೀ ಹೆಚ್ಚು ಅಂದರೆ ೧ ಲಕ್ಷದ ೫೦ ಸಾವಿರದವರೆಗೆ ಡೆಪಾಸಿಟ್ ಮಾಡಬಹುದು. ಇದರ ಬಡ್ಡಿ ದರ ೮.೪% ಇದೆ.

ಒಂದು ವೇಳೆ ಸುಕನ್ಯಾ ಸಮೃದ್ಧಿ ಯೋಜನೆಯ ಬಳಕೆ ಅರ್ಧಕ್ಕೆ ನಿಂತಿದ್ದಾರೆ ಮತ್ತೆ ಅದನ್ನು ಮುಂದುರೆಸಿಕೊಂಡು ಹೋಗಬೇಕು ಅನಿಸಿದರೆ ೫೦ ರೂಪಾಯಿ ದಂಡವನ್ನು ಪಾವತಿಸಿ ಮುಂದುವರೆಸಿಕೊಂಡು ಹೋಗಬಹುದು. ಈ ಯೋಜನೆಯ ಕಾಲಾವಧಿ ೨೧ ವರ್ಷ. ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಣ್ಣು ಮಗಳು ೧೮ ವರ್ಷ ದಾಟಿದ ಮೇಲೆ ಅವಳ ಉನ್ನತ ವ್ಯಾಸಂಗಕ್ಕೆ ಅಥವಾ ಮದುವೆಯ ಕಾರ್ಯಗಳಿಗೆ ಬೇಕಾದಾಗ ೫೦% ಹಣವನ್ನು ಪಡೆದುಕೊಳ್ಳಬಹುದು. ಮತ್ತೆ ಮಧ್ಯದಲ್ಲಿ ಯಾವಾಗ ಬೇಕೋ ಆವಾಗ ಹಣ ತೆಗೆಯಲು ಅವಕಾಶ ಇರಲ್ಲ.

ಈ ಯೋಜನೆಯ ಅಕೌಂಟ್ ಅನ್ನು ಪೋಸ್ಟ್ ಆಫೀಸ್ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಬಹುದು. ಇದಕ್ಕೆ ಬೇಕಾಗಿರುವ ದಾಖಲಾತಿಗಳು ಅಂದರೆ, ಮಗುವಿನ ಜನನ ಪ್ರಮಾಣ ಪತ್ರ, ಪಾಲಕರ ಅಥವಾ ಪೋಷಕರ ವೋಟರ್ ಐಡಿ, ಆಧಾರ ಕಾರ್ಡ್, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಹಾಗೂ ಇತ್ತೀಚಿನ ಫೋಟೋ ಇವಿಷ್ಟು ದಾಖಲೆಗಳು ಬೇಕಾಗುತ್ತವೆ. ಮಿನಿಮಮ್ ೨೫೦ ರೂಪಾಯಿಯನ್ನು ಕಟ್ಟಿ ಅಕೌಂಟ್ ಓಪನ್ ಮಾಡಬಹುದು.

ಉದಾಹರಣೆಗೆ ಒಂದು ವರ್ಷದ ಮಗುವಿಗೆ ಈ ಯೋಜನೆಯನ್ನು ಮಾಡಿ ಪ್ರತೀ ತಿಂಗಳು ೧೦೦೦ ರೂಪಾಯಿ ಕಟ್ಟಿದರೆ ವರ್ಷಕ್ಕೆ ೧೨೦೦೦ ರೂಪಾಯಿ ಆಗತ್ತೆ. ಇದರ ಇಂಟರೆಸ್ಟ್ ೫೫೯ ರೂಪಾಯಿ ಒಟ್ಟು ೧೨೫೫೦ ರೂಪಾಯಿ ಸಿಗತ್ತೆ. ಈ ದುಡ್ಡನ್ನ ಮತ್ತೆ ಮಗುವಿನ ಎರಡನೇ ವರ್ಷಕ್ಕೂ ಸೇರಿಸುತ್ತಾರೆ. ಎರಡನೇ ವರ್ಷಕ್ಕೂ ಕೂಡಾ ೧೦೦೦ ರೂಪಾಯಿ ಅಂತೆ ಕಟ್ಟಿದಾಗ ವರ್ಷಕ್ಕೆ ೧೨೦೦೦ ಆಗತ್ತೆ ಅದರ ಇಂಟರೆಸ್ಟ್ ೧೬೩೯ ರೂಪಾಯಿ ಆಗತ್ತೆ ನಂತರ ಒಟ್ಟೂ ಹಣದ ಮೊತ್ತ ೨೬೧೯೮ ರೂಪಾಯಿ ಆಗತ್ತೆ. ಈ ಮೊತ್ತ ಮತ್ತೆ ೩ ವರ್ಷಕ್ಕೂ ಸೇರಿ ಹೀಗೆ ೧೪ ವರ್ಷದವರೆಗೂ ಕಟ್ಟಬೇಕು . ನಂತರ ಪಾಲಿಸಿ ಮೇಚುರಿಟಿ ಅವಧಿ ಇನ್ನೂ ೭ ವರ್ಷ ಇರತ್ತೆ ಹಾಗಾಗಿ ೧೫ ಬೇ ವರ್ಷದಿಂದ ದುಡ್ಡು ತುಂಬುವುದೂ ಇರಲ್ಲ ಅದರ ಬದಲು ಇಂಟರೆಸ್ಟ್ ಬರತ್ತ ಹೋಗತ್ತೆ. ೩೧ ವರ್ಷ ಆದನಂತರ ಒಟ್ಟು ಹಣದ ಮೊತ್ತ ನಿಮಗೆ ಸಿಗತ್ತೆ . ಒಟ್ಟೂ ನೀವು ಕಟ್ಟಿರುವ ಹಣ ೧ ಲಕ್ಷದ ೬೮ ಸಾವಿರ ರೂಪಾಯಿ ಆಗಿರುತ್ತೆ, ಒಟ್ಟೂ ಇಂಟರೆಸ್ಟ್ ೩,೯೭,೬೪೦ ರೂಪಾಯಿ ಬಂದಿರತ್ತೆ. ಅದರ ಮೊತ್ತ ಕೊನೆಯಲ್ಲಿ ೫,೬೫,೬೪೦ ಬರತ್ತೆ. ಇವಿಷ್ಟು ಹಣ ನೀವು ಪ್ರತೀ ತಿಂಗಳು ೧೦೦೦ ರೂಪಾಯಿ ಕಟ್ಟುವಾಗ ಬರುವ ಹಣ. ೧೦,೦೦೦ ಪ್ರತೀ ತಿಂಗಳು ಕಟ್ಟುತ್ತಾ ಇದ್ದರೆ ಟೋಟಲ್ ನೀವು ಕಟ್ಟಿರುವ ಹಣದ ಮೊತ್ತ ೧೬,೮೦,೦೦೦ ಆಗಿರುತ್ತೆ. ಇಂಟರೆಸ್ಟ್ ೩೯,೭೬,೪೦೪ ಹಾಗೇ ಮೇಚುರಿತು ಹಣ ಒಟ್ಟೂ ೫೬,೫೬,೪೦೪ ರೂಪಾಯಿ ಬಂದಿರತ್ತೆ. ಸಧ್ಯ ಆದಷ್ಟು ಈ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

Leave a Reply

Your email address will not be published. Required fields are marked *