ಸಾಮಾನ್ಯವಾಗಿ ಪ್ರತಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ತನ್ನ ಸುತ್ತಲಿನ ಪರಿಸರ ಹಾಗೂ ತನ್ನ ಜೀವನ ಶೈಲಿ ಹಾಗೂ ಆಹಾರ ಶೈಲಿಯಲ್ಲಿ ಏನಾದರು ಬದಲಾವಣೆ ಆದ್ರೆ ದೈಹಿಕ ಸಮಸ್ಯೆಗಳು ಕಾಡುತ್ತವೆ, ಅಷ್ಟೇ ಅಲ್ದೆ ಸ್ನಾನದ ನೀರಿನಿಂದಲೂ ಕೂಡ ರೋಗಗಳು ಬರುವಂತ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಈ ಕೆಲಸ ಮಾಡಿದರೆ ದೇಹಕ್ಕೆ ಇಂತಹ ಸಮಸ್ಯೆಗಳು ಬರೋದಿಲ್ಲ, ಅನ್ನೋದನ್ನ ಆಯುರ್ವೇದಿಕ್ ಪಂಡಿತರು ಹೇಳುತ್ತಾರೆ. ಅಷ್ಟಕ್ಕೂ ಮಾಡಬೇಕಾದದ್ದು ಏನು ಅನ್ನೋದನ್ನ ಮುಂದೆ ನೋಡಿ.
ಚಿಕ್ಕೋರಿಂದ ದೊಡ್ಡರವರೆಗೆ ಸ್ನಾನ ಮಾಡುವಾಗ ಇದನ್ನು ಬಳಸಬಹುದು ಇದರಿಂದ ಯಾವುದೇ ತೊಂದರೆಯಿಲ್ಲ. ಸ್ನಾನದ ನೀರಿಗೆ ಈ ಮಿಶ್ರಣವನ್ನು ಹಾಕಿ ಸ್ನಾನ ಮಾಡುವುದರಿಂದ ದೇಹಕ್ಕೆ ಯಾವುದೇ ಇನ್ ಫೆಕ್ಷನ್ ಆಗೋದಿಲ್ಲ ಹಾಗೂ ಸಾಮಾನ್ಯವಾಗಿ ಸ್ನಾನದಿಂದ ಉಂಟಾಗುವಂತ ಶೀತ ಕೆಮ್ಮು ನೆಗಡಿ ಇತ್ಯಾದಿ ಸಮಸ್ಯೆಗಳು ಕಾಡೋದಿಲ್ಲ. ಹಾಗಾದರೆ ಆ ಮಿಶ್ರಣ ಯಾವುದು ಅದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿಯಿರಿ.
ಪ್ರತಿದಿನ ಸ್ನಾನ ಮಾಡುವಂತ ನೀರಿಗೆ ಅಂದರೆ ಒಂದು ಬಕೆಟ್ ನಲ್ಲಿ 4 ರಿಂದ 5 ಚಮಚ ಕಲ್ಲುಪ್ಪಿನ ಪುಡಿ ಹಾಗೂ ಒಂದು ನಿಂಬೆ ಹಣ್ಣಿನ ರಸವನ್ನು ಸ್ನಾನದ ನೀರಿಗೆ ಮಿಕ್ಸ್ ಮಾಡಿ ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ದೇಹಕ್ಕೆ ಯಾವುದೇ ರೋಗಗಳು ತಗಲುವುದಿಲ್ಲ, ಅಷ್ಟೇ ಅಲ್ದೆ ಯಾವುದೇ ಇನ್ ಫೆಕ್ಷನ್ ಕೂಡ ಆಗೋದಿಲ್ಲ ಇದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ ಒಮ್ಮೆ ಪ್ರಯತ್ನಿಸಿ ಇದರಿಂದ ಫಲಿತಾಂಶ ದೊರೆಯುವುದು ಒಂದು ವೇಳೆ ಇದರಿಂದ ಏನಾದರು ಬೇರೆಯ ರೀತಿಯಲ್ಲಿ ಸಮಸ್ಯೆ ಆದ್ರೆ ನಿಮ್ಮ ದೇಹಕ್ಕೆ ಈ ಮನೆಮದ್ದು ಅಂಟೋದಿಲ್ಲ ಅನಿಸುತ್ತದೆ ಹಾಗಾಗಿ ಇದನ್ನು ಮುಂದುವರೆಸುವುದು ಬಿಡಬಹುದು. ಕೆಲವೊಮ್ಮೆ ಕೆಲವರಿಗೆ ಆಗುವಂತ ಮನೆಮದ್ದು ಇನ್ನು ಕೆಲವರಿಗೆ ಆಗದೆ ಇರಬಹುದು ಹಾಗಾಗಿ. ಕಲ್ಲುಪ್ಪಿನ ಪುಡಿ ಹಾಗೂ ನಿಂಬೆ ರಸ ದೇಹಕ್ಕೆ ರಕ್ಷ ಕವಚವಾಗಿ ಕೆಲಸ ಮಾಡುವುದು.