ಟೊಮೊಟೊ ಸೇವಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ ನಿಮ್ಮ ಅರೋಗ್ಯ ಉತ್ತಮವಾಗಿರತ್ತೆ

0 0

ಟೊಮೆಟೊ ಇದು ತರಕಾರಿಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಫಾಸ್ಟ್ ಫುಡ್ ಗಳಿಗಂತು ಇದು ತುಂಬಾ ಅವಶ್ಯಕ ಆಗಿದೆ. ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ. ಹಾಗೆಯೇ ಇದನ್ನು ಎಲ್ಲರೂ ತಿನ್ನಬಾರದು. ಯಾರು ಟೊಮೆಟೊವನ್ನು ತಿನ್ನಬೇಕು ಯಾರು ಟೊಮೆಟೊವನ್ನು ತಿನ್ನಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಟೊಮೆಟೊ ಇದು ವಿಟಮಿನ್ ಸಿ ಯನ್ನು ಹೊಂದಿದೆ. ಹಾಗೆಯೇ ಪ್ರೊಟೀನ್, ಮೆಗ್ನೀಷಿಯಂ, ಕಬ್ಬಿಣ, ಪೊಟ್ಯಾಶಿಯಂ ಇವೆಲ್ಲಾ ಅಂಶಗಳನ್ನು ಹೊಂದಿದೆ. ಇದನ್ನು ನಾವು ದಿನನಿತ್ಯದ ಅಡುಗೆಯಲ್ಲಿ ಬಳಸುತ್ತೇವೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಔಷಧಿ ಗುಣ ಚರ್ಮ, ಹೃದಯ, ಕೂದಲುಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದ ಒತ್ತಡದ ಸಮಸ್ಯೆ ಇರುವವರು ಟೊಮೆಟೊವನ್ನು ದಿನವೂ ಒಂದು ಅಥವಾ ಆಹಾರದಲ್ಲಿ ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು.

ಇದರಲ್ಲಿ ಇರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತವನ್ನು ತೆಳ್ಳಗಾಗಿ ಇಡುವುದರ ಮೂಲಕ ರಕ್ತದ ಸಂಚಲನ ಸುಲಭವಾಗಿ ಆಗುವಂತೆ ಮಾಡುತ್ತದೆ. ಹಾಗೆಯೇ ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ. ಇದರ ವಿಟಮಿನ್ ಸಿಯು ಕಣ್ಣಿನ ಕುರುಡುತನವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಇದರ ತಾಮ್ರದ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ದೇಹದಲ್ಲಿ ಉಂಟಾಗುವ ರೋಗಗಳ ವಿರುದ್ಧ ಹೋರಾಡಿ ಪಚನಕ್ರಿಯೆಯನ್ನು ಸುಲಭವಾಗಿ ಮಾಡುತ್ತದೆ.

ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಇದು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ಟೊಮೆಟೊವನ್ನು ಅಡುಗೆಗಳಲ್ಲಿ ಬಳಸಿ ಸೇವಿಸಬಹುದು. ಇಲ್ಲವಾದಲ್ಲಿ ತಾಜಾ ಟೊಮೆಟೊವನ್ನು ಹಸಿಯಾಗಿ ಸೇವಿಸಬೇಕು. ಹಾಗೆಯೇ ಇದನ್ನು ಅತಿಯಾಗಿ ತಿನ್ನಬಾರದು. ಅತಿಯಾಗಿ ತಿಂದರೆ ಗ್ಯಾಸ್ಟ್ರಿಕ್ ಉಂಟಾಗುತ್ತದೆ. ಕೀಲುನೋವು ಸಹ ಉಂಟಾಗುತ್ತದೆ. ಹಾಗೆಯೇ ಮಧುಮೇಹಿಗಳು ಮತ್ತು ಮೈಗ್ರೇನ್ ಸಮಸ್ಯೆ ಇರುವವರು ಮತ್ತು ಕಿಡ್ನಿಸ್ಟೋನ್ಇರುವವರು ಅತಿಯಾಗಿ ಟೊಮೆಟೊವನ್ನು ಸೇವಿಸಬಾರದು.

Leave A Reply

Your email address will not be published.