ಪ್ರತಿಯೊಬ್ಬ ವ್ಯಕ್ತಿಯ ದೇಹ ಹಾಗೂ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಕೆಲವರು ಆರೋಗ್ಯಕರ ಆಹಾರ ಇಷ್ಟ ಪಡುತ್ತಾರೆ ಮತ್ತು ಕೆಲವರು ಜಂಕ್ ಫುಡ್ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಕೆಲವರು ಸಣ್ಣ ಭಾಗಗಳಲ್ಲಿ ದಿನಕ್ಕೆ ನಾಲ್ಕು ಬಾರಿ ತಿನ್ನುತ್ತಾರೆ. ಇನ್ನು ಕೆಲವರು ಒಂದೇ ಬಾರಿ ಸಾಕಷ್ಟು ಆಹಾರ ಸೇವನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ದಿನಕ್ಕೆ ಎರಡು ಬಾರಿ ಮಾತ್ರ ತಿನ್ನುತ್ತಾರೆ. ಅಧಿಕ ತಿನ್ನುವ ಅಭ್ಯಾಸ ಸಾಮಾನ್ಯವಾಗಿ ತೂಕ ಹೆಚ್ಚಿಸುತ್ತದೆ. ಕಡಿಮೆ ಹಾಗೂ ಆರೋಗ್ಯಕರ ಆಹಾರ ಸೇವನೆ ತೂಕ ಕಳೆದುಕೊಳ್ಳಲು ಸಹಕಾರಿ. ನಿಜಕ್ಕೂ ಅನ್ನ ತಿಂದ್ರೆ ಬೊಜ್ಜು ಬರುತ್ತಾ? ತೂಕ ಇಳಿಸಲು ಯಾವ ಅಕ್ಕಿಯಿಂದ ತಯಾರಿಸಿದ ಅನ್ನ ಉತ್ತಮ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅನ್ನ ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ಅನ್ನವಿಲ್ಲದೇ ಊಟ ಸಂಪೂರ್ಣವಾಗಲಾರದು. ಮೂರು ಹೊತ್ತು ಅನ್ನವನ್ನೇ ಸೇವಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಅತಿಯಾದ ಅನ್ನ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರುವುದೆಂದು ತಿಳಿದಿದೆಯೇ? ರೊಟ್ಟಿಗಿಂತ ಅನ್ನವನ್ನು ತಯಾರಿಸುವುದು ಸುಲಭ ಹಾಗೂ ಸಮಯ ಉಳಿತಾಯವೂ ಆಗುವುದು. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಹೆಚ್ಚಿನ ತೂಕವನ್ನು ಹೊಂದಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ತೂಕ ಇಳಿಸಲು ಏನ್ ತಿನ್ಬೇಕು ಅನ್ನೋದು ಅನೇಕ ಪ್ರಶ್ನೆ. ಅದರಲ್ಲೂ ಅನ್ನ ತಿನ್ನಬೇಕಾ? ಬೇಡ್ವಾ ಅನ್ನೋ ಗೊಂದಲ ಇದ್ದೆ ಇರುತ್ತದೆ
ತೂಕ ಇಳಿಸಲು ಅನೇಕರು ಅನ್ನ ತಿನ್ನೋದನ್ನೇ ಬಿಡ್ತಾರೆ. ಆದ್ರೆ ಅಕ್ಕಿಯಲ್ಲಿ ಕೊಬ್ಬಿನ ಅಂಶವೂ ಕಡಿಮೆ ಇರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ತೂಕ ಹೆಚ್ಚಳ ಅನೇಕ ರೋಗಗಳಿಗೆ ಮೂಲವಾಗಿದೆ ಏಕೆಂದರೆ ಇದು ದೇಹದಲ್ಲಿ ಹಲವಾರು ರೋಗಗಳನ್ನು ಉಲ್ಬಣಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆರೋಗ್ಯ ಪ್ರಜ್ಞೆಯುಳ್ಳವರು ಬೊಜ್ಜು ಕಡಿಮೆ ಮಾಡಲು ಆಹಾರದ ನಿಯಮಗಳನ್ನು ಅನುಸರಿಸುತ್ತಾರೆ. ಈ ಕಾರಣಕ್ಕಾಗಿ ಕೆಲವರು ಬೊಜ್ಜು ಕಡಿಮೆ ಮಾಡಬೇಕೆಂದರೆ ಮೊದಲು ತಮ್ಮ ತಟ್ಟೆಯಿಂದ ಅನ್ನ ತೆಗೆಯುತ್ತಾರೆ. ಅನ್ನ ತಿನ್ನೋದನ್ನೇ ನಿಲ್ಲಿಸುತ್ತಾರೆ.
ಪ್ರತಿನಿತ್ಯ ಅನ್ನವನ್ನು ತಿನ್ನುವುದರಿಂದ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ಅನಾನುಕೂಲತೆಗಳಿವೆ. ಅವುಗಳಲ್ಲಿ ಒಂದು ಮಧುಮೇಹಕ್ಕೆ ಸಂಬಂಧಿಸಿದೆ. ಬೇಯಿಸಿದ ಒಂದು ಬಟ್ಟಲು ಅನ್ನದಲ್ಲಿ ಕನಿಷ್ಠ 10 ಟೀಚಮಚ ಕ್ಯಾಲೋರಿ ಇರುತ್ತದೆ. ಪ್ರತಿದಿನ ಈ ಪ್ರಮಾಣದ ಅನ್ನವನ್ನು ಸೇವಿಸಿದರೆ, ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಧುಮೇಹಿಗಳು ಅನ್ನವನ್ನು ಸೇವಿಸದಂತೆ ಸೂಚಿಸಲಾಗುತ್ತದೆ. ಆದರೆ ಅನ್ನ ತಿನ್ನುವುದರಿಂದ ಬೊಜ್ಜು ಹೆಚ್ಚಾಗುವುದಿಲ್ಲ ಎಂದು ಹಿರಿಯ ಆಹಾರ ತಜ್ಞೆ ಅನಿಕಾ ಹೇಳಿದ್ದಾರೆ. ಬೊಜ್ಜು ಹೆಚ್ಚಾಗಲು ಬೇರೆ ಕಾರಣಗಳೂ ಇರಬಹುದು.
ಇದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿಯೂ ಕಂಡುಬರುತ್ತದೆ. ಅಕ್ಕಿ ಸ್ಥೂಲಕಾಯತೆಯನ್ನು ಹೆಚ್ಚಿಸುವುದಿಲ್ಲ ಇದರಲ್ಲಿರೋ ಕ್ಯಾಲೋರಿ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಒಂದು ಕಪ್ ಅಕ್ಕಿಯು ಮಧ್ಯಮ ಗಾತ್ರದ ಬ್ರೆಡ್ನಷ್ಟೇ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಅಂಕಿ ಅಂಶಗಳಿಂದ ಗಮನಿಸಿದರೆ, ಒಂದು ಕಪ್ ಅಕ್ಕಿಯ ಸೇವನೆಯು ಹೆಚ್ಚಾದರೂ, ಬೊಜ್ಜು ಕೇವಲ ಶೇಕಡಾ 1 ರ ಷ್ಟು ಮಾತ್ರ ಹೆಚ್ಚಾಗುತ್ತದೆ. ಅನ್ನದಲ್ಲಿರುವ ಫೈಬರ್, ಪೋಷಕಾಂಶಗಳು ಮತ್ತು ಸಸ್ಯ ಸಂಯುಕ್ತಗಳಂತಹ ಪೋಷಕಾಂಶಗಳು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯಬಹುದು.
ಇದು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಕ್ಕಿಯಲ್ಲಿ ಕೊಬ್ಬಿನಂಶವೂ ಕಡಿಮೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಕೂಡ ತೂಕ ಹೆಚ್ಚಾಗದಿರಲು ಪ್ರಮುಖ ಕಾರಣ.ಅಕ್ಕಿ ಮುಖ್ಯವಾಗಿ ಬಿಳಿ ಮತ್ತು ಕಂದು ಎರಡು ವಿಧವಾಗಿದೆ. 242 kcal, 4.43 ಗ್ರಾಂ ಪ್ರೋಟೀನ್, 39 ಗ್ರಾಂ ಕೊಬ್ಬು, 53.2 ಗ್ರಾಂ ಕಾರ್ಬೋಹೈಡ್ರೇಟ್ಗಳು ಮತ್ತು 56 ಗ್ರಾಂ ಫೈಬರ್ ನೊಂದಿಗೆ ಬೇಯಿಸಿದ 186 ಗ್ರಾಂ ಬಿಳಿ ಅನ್ನ ಇದಲ್ಲದೆ, ಈ ಅಕ್ಕಿಯು ಕೆಲವು ಪ್ರಮಾಣದ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ.
ಬೇಯಿಸಿದ ಬ್ರೌನ್ ರೈಸ್ 248 kcal, 5.54 ಗ್ರಾಂ ಪ್ರೋಟೀನ್, 2 ಗ್ರಾಂ ಕೊಬ್ಬು, 51 ಗ್ರಾಂ ಅನ್ನ, ಕಾರ್ಬೋಹೈಡ್ರೇಟ್ಗಳು ಮತ್ತು ಅನ್ನದಂತಹ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಯೂ ಕಡಿಮೆ. ಬ್ರೌನ್ ರೈಸ್ ತಿನ್ನುವುದು ತುಂಬಾ ಆರೋಗ್ಯಕರ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಸಂಸ್ಕರಿಸಿದ ಅಕ್ಕಿಯನ್ನು ಸೇವಿಸುವುದು ಉತ್ತಮ. ಕಾರ್ಬೋಹೈಡ್ರೇಟ್ಗಳು ಮತ್ತು ಅನ್ನದಂತಹ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಯೂ ಕಡಿಮೆ. ಬ್ರೌನ್ ರೈಸ್ ತಿನ್ನುವುದು ತುಂಬಾ ಆರೋಗ್ಯಕರ. ಅಕ್ಕಿಯ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಅನ್ನ ತಿನ್ನೋದು ಆರೋಗ್ಯಕ್ಕೆ ಉತ್ತಮವಾಗಿದೆ. ಆದ್ರೆ ಕಡಿಮೆ ಸಂಸ್ಕರಿಸಿದ ಅಕ್ಕಿಯನ್ನು ಸೇವಿಸುವುದರಿಂದ ಕೆಲ ಆರೋಗ್ಯ ಪ್ರಯೋಜನ ಪಡೆಯಬಹುದು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.