ರಾಗಿ ಮುದ್ದೆಯು ರಾಗಿಯ ಹಿಟ್ಟಿನಿಂದ ಮಾಡಿರುವಂತಹ ಸಣ್ಣ ಅಥವಾ ಸ್ವಲ್ಪ ದೊಡ್ಡ ಗಾತ್ರದ ಉಂಡೆ. ಇದು ನೋಡಲು ಒಂದು ಕಲ್ಲಿನಂತೆ ಕಂಡುಬಂದರೂ ಇದನ್ನು ತಯಾರಿಸುವುದು ತುಂಬಾ ಸುಲಭ. ಆದರೆ ಇದು ಬೇರೆ ಯಾವುದೇ ಆಹಾರಕ್ಕಿಂತಲೂ ತುಂಬಾ ಭಿನ್ನವಾಗಿದೆ.

ಭಾರತದಲ್ಲಿನ ವೈವಿಧ್ಯತೆ, ಸಂಸ್ಕೃತಿ, ಸಂಪ್ರದಾಯ ಮತ್ತು ಅದೇ ರೀತಿಯಾಗಿ ಬಗೆಬಗೆಯ ಆಹಾರ ಕ್ರಮವನ್ನು ನೋಡಬೇಕಾದರೆ ಆಗ ಕರ್ನಾಟಕಕ್ಕೆ ಒಂದು ಸುತ್ತು ಹಾಕಿದರೆ ಸಾಕು. ಇಲ್ಲಿ ಆಡುವಂತಹ ಭಾಷೆಯಿಂದ ಹಿಡಿದು ತಿನ್ನುವಂತಹ ಆಹಾರದ ತನಕ ಪ್ರತಿಯೊಂದರಲ್ಲೂ ವಿಭಿನ್ನತೆಯಿದೆ. ಉತ್ತರ ಕರ್ನಾಟಕದ ಆಹಾರ ಕ್ರಮವೇ ಬೇರೆಯಾಗಿದ್ದರೆ, ದಕ್ಷಿಣ ಕರ್ನಾಟಕದವರದ್ದು ಒಂದು ರೀತಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿನ ಆಹಾರ ಕ್ರಮವನ್ನು ಅಳವಡಿಸಿಕೊಂಡು ಹೋದರೆ ಖಂಡಿತವಾಗಿಯೂ ದೇಹಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವುದು. ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ರಾಗಿ ಮುದ್ದೆ, ಅನ್ನ ಸಾರು ಹೀಗೆ ವಿವಿಧ ರೀತಿಯ ಆಹಾರ ಕ್ರಮವಿದೆ. ಇಲ್ಲಿ ಮುಖ್ಯವಾಗಿ ರಾಗಿ ಮುದ್ದೆಯು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ರಾಗಿ ಮುದ್ದೆ ತಿಂದರೆ ಅದು ದೇಹವನ್ನು ಸದೃಢವಾಗಿಸುವುದು ಮತ್ತು ಕಾಯಿಲೆಗಳು ಬರದಂತೆ ತಡೆಯುವುದು ಎಂದು ಹೇಳಲಾಗುತ್ತದೆ.
ರಾಗಿ ಮಹತ್ವದ ಬಗ್ಗೆ ತಿಳಿದಿದ್ದ ಪುರಂದರ ದಾಸರು ತನ್ನ ಹಾಡಿನಲ್ಲಿ ರಾಗಿಯನ್ನು ಈ ರೀತಿಯಾಗಿ ವರ್ಣನೆ ಮಾಡಿರುವರು. `ರಾಗಿ ತಂದಿರಾ, ಭಿಕ್ಷೆಗೆ ರಾಗಿ ತಂದಿರಾ…ಯೋಗ ರಾಗಿ, ಬೋಗ ರಾಗಿ ಎಂದು ಹಾಡಿರುವರು. ಆದರೆ ರಾಗಿ ಮುದ್ದೆ ಎಂದರೆ ಇಂದಿನ ದಿನಗಳಲ್ಲಿ ಅದನ್ನು ಕಡೆಗಣಿಸುವಂತಹ ಜನರು ಹೆಚ್ಚು. ಆದರೆ ರಾಗಿ ಮುದ್ದೆ ತುಂಬಾ ಒಳ್ಳೆಯದು. ಇದರ ಗುಣಗಳನ್ನು ತಿಳೀದುಕೊಂಡಿರುವ ಜನರು ಈಗ ರಾಗಿ ಮುದ್ದೆ ಬಳಸಲು ಆರಂಭಿಸಿದ್ದಾರೆ.

ಒಂದು ಪ್ರದೇಶದ ಸಂಸ್ಕೃತಿಯನ್ನು ಕೆಲವೊಂದು ಆಹಾರಗಳು ಕೂಡ ಪ್ರತಿನಿಧಿಸುತ್ತದೆ. ಆದರೆ ರಾಗಿ ಮುದ್ದೆಯು ಹೆಚ್ಚು ಆಕರ್ಷವಾಗಿಯೂ ಇಲ್ಲ ಮತ್ತು ಇದರ ಬಗ್ಗೆ ಇಂಟರ್ನೆಟ್ ನಲ್ಲಿ ಮಾಹಿತಿಯೂ ಸಿಗದು. ಆದರೆ ನೀವು ಕರ್ನಾಟಕದ ಜನರಲ್ಲಿ ಈ ಬಗ್ಗೆ ಕೇಳಿದರೆ ಆಗ ನಿಮಗೆ ಇದರ ಬಗ್ಗೆ ಮಾಹಿತಿ ಲಭ್ಯವಾಗುವುದು. ಇದು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು ಮಾತ್ರವಲ್ಲದೆ, ಸಂಸ್ಕೃತಿಯ ಪ್ರತೀಕ ಕೂಡ.

ಹೊಟ್ಟೆಯ ತುಂಬಾ ಕೊಬ್ಬು ಆವರಿಸಿಕೊಂಡಿದೆಯಾ? ಇದರಲ್ಲಿ ಅಮಿನೋ ಆಮ್ಲವಾಗಿರುವಂತಹ ಟ್ರಿಪ್ಟೊಫಾನ್ ಇದ್ದು, ಹಸಿವನ್ನು ಕಡಿಮೆ ಮಾಡುವುದು. ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಆರೋಗ್ಯಕಾರಿ ಕಾರ್ಬ್ಸ್ ಇದೆ. ಅಧಿಕ ಮಟ್ಟದ ನಾರಿನಾಂಶ ವು ಇದರಲ್ಲಿ ಇರುವ ಕಾರಣದಿಂದಾಗಿ ಪದೇ ಪದೇ ಹಸಿವಾಗುವುದನ್ನು ತಡೆಯುವುದು. ಇದರಲ್ಲಿ ಅಪರ್ಯಾಪ್ತ ಕೊಬ್ಬು ಇರುವ ಕಾರಣದಿಂದಾಗಿ ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಆಗಿರಲಿದೆ. ಮೂಳೆಗಳಿಗೆ ಒಳ್ಳೆಯದು
ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ಮೂಳೆಗಳನ್ನು ಬಲಿಷ್ಠ ಗೊಳಿಸುವುದು. ನಿಯಮಿತವಾಗಿ ರಾಗಿ ಮುದ್ದೆ ತಿಂದರೆ ಅದರಿಂದ ಅಸ್ಥಿರಂಧ್ರತೆ ತಡೆಯಬಹುದು. ವಿಟಮಿನ್ ಗಳು ಮತ್ತು ಅಮಿನೊ ಆಮ್ಲವು ಚಯಾಪಚಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುವುದು. ಸರಿಯಾದ ಆರೋಗ್ಯಕ್ಕಾಗಿ ಅದು ಹಾರ್ಮೋನ್ ಗಳು ಬೆಳೆಯಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿ ಆಗುವುದು. ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಲು ನೆರವಾಗುವುದು. ಇದರೊಂದಿಗೆ ಕರುಳಿನ ಕ್ರಿಯೆಗಳನ್ನು ಸರಾಗವಾಗಿಸುವುದು ಮತ್ತು ಚಯಾಪಚಯ ಉತ್ತಮ ಪಡಿಸುವುದು.

ನೀವು ಆಹಾರ ಕ್ರಮದಲ್ಲಿ ರಾಗಿ ಮುದ್ದೆ ಸೇರಿಸಿಕೊಂಡರೆ ಆಗ ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗಿರುವುದತ್ತದೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸರಿಯಾಗಿಸಿ, ಮಲಬದ್ಧತೆ ನಿವಾರಣೆ ಮಾಡುವುದು. ರಾಗಿ ಮುದ್ದೆಯಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವುದು. ಗ್ಲುಟೇನ್ ಮುಕ್ತವಾಗಿರುವ ಕಾರಣದಿಂದಾಗಿ ಇದು ಮತ್ತಷ್ಟು ಲಾಭ ನೀಡುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!