ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರ ನಮ್ಮ ದೇಹದಲ್ಲಿ ಸರಿಯಾಗಿ ಜೀರ್ಣವಾಗದೇ ಫುಡ್ ಪಾಯ್ಸನಿಂಗ್ ಸಮಸ್ಯೆ ಉಂಟಾಗುತ್ತದೆ. ಆಗ ವಾಕರಿಕೆ ಮತ್ತು ವಾಂತಿಯ ಸಮಸ್ಯೆ ಸಾಮಾನ್ಯವಾಗಿದೆ ಇಂತಹ ಸಮಯದಲ್ಲಿ ಈರುಳ್ಳಿಗಳು ಸಹಾಯಕ್ಕೆ ಬರುತ್ತದೆ ಈರುಳ್ಳಿ ರಸದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಸೇರಿದ್ದು ಫುಡ್ ಪಾಯ್ಸನಿಂಗ್ ಉಂಟು ಮಾಡುವ ಕೆಲವೊಂದು ಸೂಕ್ಷ್ಮಾಣುಗಳನ್ನು ಕೊಲ್ಲುವಂತಹ ಶಕ್ತಿ ಪಡೆದಿರುತ್ತವೆ. ಈ ಕಾರಣದಿಂದ ಊಟದ ಸಮಯದಲ್ಲಿ ಹಸಿ ಈರುಳ್ಳಿಗಳನ್ನು ಸೇರಿಸಿ ತಿನ್ನುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಾಣಬಹುದು.ನಾವು ಈ ಲೇಖನದ ಮೂಲಕ ಹಸಿ ಈರುಳ್ಳಿ ಸೇವನೆಯ ಉಪಯೋಗವನ್ನು ತಿಳಿದುಕೊಳ್ಳೋಣ.

ಪ್ರತಿದಿನ ಬೆಳಿಗ್ಗೆ ಹಸಿ ಈರುಳ್ಳಿಯನ್ನು ತಿನ್ನುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈರುಳ್ಳಿಯನ್ನು ಹಲವು ಪದಾರ್ಥ ಮಾಡುವುದಕ್ಕೆ ಬಳಸುತ್ತೇವೆ ಹಾಗೆಯೇ ಈರುಳ್ಳಿ ಹಾಕದ ಪದಾರ್ಥ ಹೆಚ್ಚಾಗಿ ರುಚಿಸುವುದು ಇಲ್ಲ ಹಸಿ ಈರುಳ್ಳಿ ಜೊತೆಗೆ ಸ್ವಲ್ಪ ಬೆಲ್ಲ ಸೇರಿಸಿ ತಿನ್ನುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುತ್ತದೆ ಈರುಳ್ಳಿಯಲ್ಲಿ ರಕ್ತವನ್ನು ತೆಳ್ಳಗೆ ಮಾಡುವ ಗುಣ ಇರುತ್ತದೆ ಇದು ಕೊಲೆಸ್ಟ್ರಾಲ್ ಅಂಶದ ಮೇಲೆ ನಿಯಂತ್ರಣ ಇರುತ್ತದೆ ಹಾಗೆಯೇ ದೇಹದ ಭಾಗದಲ್ಲಿ ಪ್ಲೇಟ್ ಲೇಟ್ ಗಳು ಒಟ್ಟು ಗುಡಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ ಆದರೆ ರಕ್ತ ಹೆಪ್ಪು ಗಟ್ಟುವುದನ್ನು ಈರುಳ್ಳಿ ತಪ್ಪಿಸುತ್ತದೆ.

ಪ್ರತಿದಿನ ಈರುಳ್ಳಿ ಹಾಗೂ ಸ್ವಲ್ಪ ಬೆಲ್ಲ ಸೇರಿಸಿ ತಿನ್ನುದರಿಂದ ಹೃದಯದ ಆರೋಗ್ಯ ಸದಾ ಚೆನ್ನಾಗಿ ಇರುತ್ತದೆ ಎಂಬುದು ಹಳೆಯ ಕಾಲದಿಂದಲೂ ಜನರು ಪಾಲಿಸಿಕೊಂಡು ಬಂದಿರುವ ಸೂತ್ರವಾಗಿದೆ ಹೃದಯದ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ಈರುಳ್ಳಿ ತಿನ್ನುದು ಬಹಳ ಉಪಯೋಗ ಇರುತ್ತದೆ .

ಫುಡ್ ಪಾಯಿಜನ್ ಉಂಟು ಮಾಡುವ ಪದಾರ್ಥಗಳಿಂದ ಈರುಳ್ಳಿ ರಕ್ಷಿಸುತ್ತದೆ ಹಾಗಾಗಿ ಊಟದ ಸಮಯದಲ್ಲಿ ಹಸಿ ಈರುಳ್ಳಿ ಸೇವಿಸುವುದು ಉತ್ತಮ ಹಸಿ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಇನ್ಸುಲಿನ್ ಜಾಸ್ತಿ ಮಾಡುತ್ತದೆ ಇದರಿಂದ ಸಕ್ಕರೆ ಅಂಶವನ್ನು ಸರಿಯಾಗಿ ಪರಿಕ್ಷರಿಸಲು ಸಹಾಯಕವಾಗಿದೆ ಈರುಳ್ಳಿಯಲ್ಲಿ ಇರುವ ಅಂಶವು ಯಕೃತ್ ನಲ್ಲಿ ಇರುವ ಖಾಲಿ ಜಾಗವನ್ನು ಆವರಿಸಿ ಅಲ್ಲಿರುವ ಇನ್ಸುಲಿನ್ ಅಂಶವನ್ನು ನಿಷ್ಕ್ರಿಯಗೊಳಿಸುತ್ತದೆ ಇದರಿಂದ ದೇಹದ ಇತರ ಭಾಗದಲ್ಲಿ ಇರುವ ಸಕ್ಕರೆ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುತ್ತದೆ.

ಬಿಸಿ ನೀರಿಗೆ ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ ಕುದಿಸಿ ನಂತರ ಕುಡಿಯುದರಿಂದ ಕೆಮ್ಮಿನ ಸಮಸ್ಯೆ ಇರುವುದಿಲ್ಲ ಈರುಳ್ಳಿಯಲ್ಲಿ ಬಹಳಸ್ಟು ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ ತುಂಬಾ ಜನರು ಹಸಿ ಈರುಳ್ಳಿ ಸೇವನೆಗೆ ಮುಂದೆ ಆಗುವುದು ಇಲ್ಲ ಯಾಕೆಂದರೆ ಅದರ ರುಚಿ ಮತ್ತು ವಾಸನೆ ಅಷ್ಟಾಗಿ ಎಲ್ಲರಿಗೂ ಹಿಡಿಸುವುದು ಇಲ್ಲ ಆದರೆ ಈರುಳ್ಳಿಯನ್ನ ಬೇಯಿಸಿ ತಿನ್ನುವ ಮೂಲಕ ಹೆಚ್ಚಾಗಿ ಪೌಷ್ಟಿಕಾಂಶ ಸಿಗದಿದ್ದರೂ ಕೆಲವು ಪೌಷ್ಠಿಕ ಅಂಶ ಸಿಗುತ್ತದೆ ಈರುಳ್ಳಿ ಬಳಕೆಯಿಂದ ಅಡುಗೆಯಲ್ಲಿ ರುಚಿ ಹೆಚ್ಚಾಗುವ ಜೊತೆಗೆ ಆರೋಗ್ಯ ಸಹ ವೃದ್ಧಿ ಆಗುತ್ತದೆ .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!