ಸರ್ಪ ಸುತ್ತು ಸಮಸ್ಯೆ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯ ಇಲ್ಲಿದೆ

0 4

ಸರ್ಪ ಸುತ್ತು ವೈರಸ್ ನಿಂದಾ ಬರುವ ರೋಗವಾಗಿದೆ ಇದು ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತದೆ ಈ ನೀರ್ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ ನವೆ ಊಂಟಾಗುತ್ತದೆ ನರತಂತುಗಳ ಜಾಲಗಳಲ್ಲಿ ಇವು ಪಸರಿಸುತ್ತವೆ. ಇದನ್ನು ಜನಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು ಸರ್ಪ ದೋಷದಿಂದ ಬರುವ ಸಮಸ್ಯೆ ಎಂದು ಪರಿಗಣಿಸುತ್ತಾರೆ ಸರ್ಪದ ಬಗ್ಗೆ ಇರುವ ಸಹಜ ಭಯ ಮತ್ತು ದೇವತಾರೂಪಿ ನಂಬಿಕೆಯಿಂದ ದೇವರು ಮುನಿದ ಎಂಬ ಆತಂಕದ ಛಾಯೆ ಆವರಿಸುವುದೂ ಉಂಟು. ಇದಕ್ಕಾಗಿ ಸರ್ಪದೋಷ ಪರಿಹಾರ ಅಥವಾ ರೋಗ ವಾಸಿ ಮಾಡುವ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ ನಾವು ಈ ಲೇಖನದ ಮೂಲಕ ಸರ್ಪ ಸುತ್ತಿನ ಬಗ್ಗೆ ತಿಳಿದುಕೊಳ್ಳೋಣ.

ಸರ್ಪ ಸುತ್ತು ಎನ್ನುವ ಖಾಯಿಲೆ ಹೆಚ್ಚಾಗಿ ವಯಸ್ಸಾದವರಿಗೆ ಬರುತ್ತದೆ ಇದನ್ನು ಹರ್ಪಿಸ್ ಜೋಸ್ಟರ್ ಎಂದು ಕರೆಯುತ್ತಾರೆ ವೈರಸ್ ನಿಂದಾ ಬರುವ ರೋಗವಾಗಿದೆ ಒಂದುಸಹ ಚಿಕನ್ ಫಾಕ್ಸ್ ಬಂದವರಿಗೆ ದೇಹದ ನರಗಳಲ್ಲಿ ಅಣು ಅಡಗಿ ಇರುತ್ತದೆ ಕೆಲವೊಂದು ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಮತ್ತೆ ರಿ ಅಕ್ಟಿವೆಟ್ ಆಗುತ್ತದೆ ಶುಗರ್ ಇರುವರಿಗೆ ಶುಗರ್ ಅಂಶ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಹಾಗೆಯೇ ಕ್ಯಾನ್ಸರ್ ಕಿಮೋ ತೆರಪಿದಲ್ಲಿ ಇದ್ದಂಥ ಜನರಿಗೆ ಹೆಚ್ಚಾಗಿ ಬರುತ್ತದೆ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಬರುತ್ತದೆ.

ಕೆಲವರಿಗೆ ಈ ಖಾಯಿಲೆ ಬರುವ ಮುಂಚೆಯೇ ನೋವು ಇರುತ್ತದೆ ದೇಹದ ಒಂದು ಸೈಡ್ ಮಾತ್ರ ಸರ್ಪ ಆಗುತ್ತದೆ ಹಾಗೆಯೇ ಸಾಮಾನ್ಯವಾಗಿ ಎದೆ ಹಾಗೂ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ ನಂತರ ದೇಹದ ಮೇಲೆ ಗುಳ್ಳೆಗಳು ಕಂಡು ಬರುತ್ತದೆ ಇದರಿಂದ ನೋವು ಅಥವಾ ಉರಿ ಕಂಡು ಬರುತ್ತದೆ .

ಈ ಖಾಯಿಲೆಗೆ ಚಿಕಿಸ್ಥೆ ಪಡೆಯಬೇಕು ಗೊಳ್ಳೆಗಳಿಂದ ನೋವು ಅಥವಾ ಉರಿ ಕಂಡು ಬರುತ್ತದೆ ಹಾಗೆಯೇ ಗುಳ್ಳೆಗಳಿಗೆ ಔಷಧಿ ತೆಗೆದುಕೊಳ್ಳುವುದು ಸೂಕ್ತ ಗುಳ್ಳೆಗಳು ಹೋದ ಬಳಿಕವು ಸಹ ಕೆಲವರಿಗೆ ನೋವು ಉರಿ ಕಂಡು ಬರುತ್ತದೆ ಅದು ಬಂದ ಎಪ್ಪತ್ತೆರಡು ಗಂಟೆಯ ಒಳಗೆ ಔಷಧ ತೆಗೆದುಕೊಳ್ಳಬೇಕು ನಂತರ ಮಾತ್ರೆ ತೆಗೆದುಕೊಂಡರೆ ಸರಿಯಾಗಿ ವಾಸಿ ಆಗುವುದು ಇಲ್ಲ ಮಾತ್ರೆಗಳ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಆದಷ್ಟು ಬೇಗ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು. ಸರ್ಪ ಸುತ್ತ ಆಗದೆ ಇರುವ ತರ ವ್ಯಾಕ್ಸೀನ್ ಸಹ ಇರುತ್ತದೆ ಐವತ್ತು ವರ್ಷ ಮೇಲ್ಪ್ಟವರು ಈ ವ್ಯಾಕ್ಸೀನ್ ಹಾಕಿ ಕೊಳ್ಳುವುದು ಉತ್ತಮ ಕಣ್ಣಿನ ಒಳಗೆ ಹಾಗೂ ಮೂಗಿನ ಒಳಗೆ ಆಗುವ ಹರ್ಪಿಸ್ ತುಂಬಾ ಕೆಟ್ಟದ್ದು ಹಾಗೆಯೇ ಕಿವಿ ಒಳಗೆ ಆಗುವ ಹರ್ಪಿಸ್ ಸಹ ಆಗುತ್ತದೆ ವೈಜ್ಞಾನಿಕ ವಿಧಾನದ ಮೂಲಕ ಈ ರೋಗವನ್ನು ಬಗೆಹರಿಸಿಕೊಳ್ಳಬಹುದು.

Leave A Reply

Your email address will not be published.