ಶೇಂಗಾ ಬೀಜ ತಿನ್ನುವುದರಿಂದ ಏನ್ ಲಾಭವಿದೆ ನೋಡಿ

0 31

ಶೇಂಗಾ ಬೀಜ ತಿನ್ನುವುದು ಎಂದರೆ ಬಹಳಷ್ಟು ಜನರಿಗೆ ಇಷ್ಟ ಆದರೆ ಅದರಿಂದ ಆರೋಗ್ಯಕರ ಲಾಭ ಏನು ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಬಡವರ ಬಾದಾಮಿ ಎಂದು ಕರೆಯುವ ಶೇಂಗಾಬೀಜ ಬಾದಾಮಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುವುದರ ಜೊತೆಗೆ ಆರೋಗ್ಯಕರವಾಗಿ ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ಹಾಗಾದರೆ ಶೇಂಗಾ ಬೀಜದ ಸೇವನೆಯಿಂದ ಆಗುವ ಆರೋಗ್ಯಕರ ಲಾಭವನ್ನು ಈ ಲೇಖನದ ಮೂಲಕ ತಿಳಿಯೋಣ.

ಬಡವರ ಬಾದಾಮಿ ಎಂದೇ ಪ್ರಸಿದ್ಧವಾದ ಶೇಂಗಾ ಬೀಜ ಇದು ಬಾದಾಮಿಗೆ ಹೋಲಿಸಿದರೆ ಎಲ್ಲಾ ಕಡೆ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದು ದ್ವಿದಳ ಧಾನ್ಯವಾಗಿದ್ದು ಇದರಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು, ಪ್ರೋಟೀನ್ಸ್ ಇದೆ. ಶೇಂಗಾ ಚಳಿಗಾಲಕ್ಕೆ ಹೆಚ್ಚು ಸೂಕ್ತವಾಗಿದೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಇದು ಒದಗಿಸುತ್ತದೆ. ಶೇಂಗಾ ಬೀಜ ತಿನ್ನುವುದರಿಂದ ಹೃದಯ ಸ್ತಂಭನ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ಖನಿಜಗಳು ಇದ್ದು ಹೃದಯ ಸಂಬಂಧಿ ಖಾಯಿಲೆಗೆ ಪರಿಹಾರವಾಗಿದೆ.

ಆಗಾಗ ಶೇಂಗಾ ಬೀಜವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಖಿನ್ನತೆಯಂತ ಸಮಸ್ಯೆಗೆ ಶೇಂಗಾ ಪರಿಹಾರವಾಗಿದೆ. ಮೆದುಳಿನಲ್ಲಿ ಬೇಕಾದ ಸೆರಟೋನಿನ್ ಎಂಬ ರಸ ಸ್ರವಿಸುವುದಕ್ಕೆ ನೆರವಾಗುತ್ತದೆ ಇದು ಮಾನಸಿಕ ನಿರಾಳತೆಗೆ ಸಹಾಯಕವಾಗಿದೆ. ಸೇರಟೋನಿನ್ ಅಂಶ ಖಿನ್ನತೆಯನ್ನು ದೂರಮಾಡಲು ಸಹಾಯಕವಾಗಿದೆ. ಶೇಂಗಾ ಬೀಜ ಸೇವನೆಯಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ .

ಶೇಂಗಾ ಬೀಜದಲ್ಲಿ ಉತ್ತಮ ಪ್ರಮಾಣದ ಮ್ಯಾಗ್ನಸಿಸ್ ಇರುತ್ತದೆ. ಇದರಲ್ಲಿ ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್ ಗಳು ಇದ್ದು ಜೀವ ರಾಸಾಯನಿಕ ಕ್ರಿಯೆ, ಕ್ಯಾಲ್ಶಿಯಂ ಹೀರಿಕೊಳ್ಳುವ ಕ್ಷಮತೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

ಕೆಲವು ಸಂಶೋಧನೆಯ ಪ್ರಕಾರ ಶೇಂಗಾ ಬೀಜವನ್ನು ಸೇವಿಸುತ್ತಾ ಬಂದರೆ ಮಧುಮೇಹ ಬರುವುದು ಸುಮಾರು 90% ನಷ್ಟು ಕಡಿಮೆ ಇರುತ್ತದೆ. ಶೇಂಗಾ ಬೀಜ ತಿನ್ನುವುದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ. ಶೇಂಗಾದಲ್ಲಿರುವ ವಿಟಮಿನ್ ಬಿ 2, ನಿಯಾಸಿನ್ ಸಹ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಶೇಂಗಾ ಬೀಜವನ್ನು ಕಡಲೆ ಬೀಜ ಎಂತಲೂ ಕರೆಯುತ್ತಾರೆ. ಒಟ್ಟಿನಲ್ಲಿ ಬಡವರ ಬಾದಾಮಿಯಾದ ಶೇಂಗಾ ತಿನ್ನುವುದರಿಂದ ಬಹಳಷ್ಟು ಆರೋಗ್ಯಕರ ಲಾಭವಿದೆ. ಶೇಂಗಾ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಸುಸ್ತು, ಆಯಾಸವನ್ನು ಕಡಿಮೆ ಮಾಡುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಶೇಂಗಾದಿಂದ ಆರೋಗ್ಯ ಕಾಪಾಡಿಕೊಳ್ಳಿ.

Leave A Reply

Your email address will not be published.