ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಉಪಯೋಗಗಳು ಇವೆ. ನಮ್ಮ ದೇಹಕ್ಕೆ ಇದರಿಂದ ಏನೇನು ಲಾಭಗಳು ಇವೆ ಅನ್ನೋದನ್ನ ನೋಡೋಣ.
ಬಾದಾಮಿ ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳು ಇವೆ ಅನ್ನೋದು ಕೆಲವರಿಗೆ ಗೊತ್ತು ಇನ್ನು ಕೆಲವರಿಗೆ ಗೊತ್ತಿಲ್ಲ. ಬಾದಾಯಲ್ಲಿ ಎರಡು ವಿಧಗಳಿವೆ ಸಿಹಿ ಬಾದಾಮಿ ಮತ್ತು ಕಹಿ ಬಾದಾಮಿ. ಸಿಹಿ ಬಾದಾಮಿಯನ್ನು ತಿನ್ನಲು ಉಪಯೋಗ ಮಾಡಿದರೆ ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಉಪಯೋಗ ಮಾಡುತ್ತಾರೆ. ಬಾದಾಮಿಯಲ್ಲಿ ಪ್ರೊಟೀನ್, ಒಮೆಗ 3 ಕೊಬ್ಬಿನ ಆಮ್ಲ, ಒಮೆಗ 6 ಕೊಬ್ಬಿನ ಆಮ್ಲ, ವಿಟಮಿನ್ ಈ, ಕ್ಯಾಲ್ಶಿಯಂ, ಪಾಸ್ಪರಸ್, ಸತು, ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನ ಅಂಶಗಳನ್ನು ಪ್ರಮುಖವಾಗಿ ನಾವು ಕಾಣಬಹುದು. ಮಾರುಕಟ್ಟೆಯಲ್ಲಿರುವ ಉತ್ಪನ್ನಗಳು ಚರ್ಮದ ನೆರಿಗೆಗಳನ್ನು ನಿವಾರಣೆ ಮಾಡದೇ ಇರಬಹುದು. ಆದರೆ ಬಾದಾಮಿಯಲ್ಲಿ ಇರುವ ನೈಸರ್ಗಿಕ ಅಂಶಗಳು ಚರ್ಮದ ನೆರಿಗೆಗಳನ್ನು ಹೋಗಲಾಡಿಸುವವು. ಪ್ರತೀ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಚರ್ಮದ ಮೇಲಿನ ನೆರಿಗೆ ಮತ್ತು ವಯಸ್ಸಾದ ಹಾಗೆ ಕಾಣುವ ಲಕ್ಷಣಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹೇಳುತ್ತಾರೆ.
ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೀ ಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ. ಪ್ರೀ ಬಯಾಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವ ಮೂಲಕ ಹೊಟ್ಟೆಯ ಮೇಲೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ. ಇನ್ನು ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕಿಯೆಗೆ ಸಹಾಯ ಮಾಡಿ ಆಹಾರವು ಸರಾಗವಾಗಿ ಹಾಗೂ ವೇಗವಾಗಿ ಕರಗಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದ್ರೆ ಸಿಪ್ಪಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ತಾಯಿ ಆಗುವವರು ಇದ್ದರೆ ಪ್ರತೀ ದಿನವೂ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಒಳ್ಳೆಯದು. ಇದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿಯ ಹಾಗೂ ಗರ್ಭದಲ್ಲಿ ಇರುವ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಶಕ್ತಿಯನ್ನು ಒದಗಿಸುತ್ತವೆ.
ಬಾದಾಮಿಯಲ್ಲಿ ಇರುವ ಪೊಲೀಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಫಲ್ಯವನ್ನು ಉಂಟಾಗದಂತೆ ತಡೆಗಟ್ಟುತ್ತದೆ. ಪ್ರತಿ ದಿನ ನಾಲ್ಕರಿಂದ ಆರು ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ಮೆದುಳಿಗೆ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ ಜೊತೆಗೆ ಮೆದುಳಿನ ನರ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಹ ಸಹಾಯಕಾರಿ ಆಗುತ್ತದೆ. ಬೆಳಗ್ಗೆ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ವೈಖರಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ದೀರ್ಘ ಕಾಲದ ಮಲಬದ್ಧತೆಯನ್ನು ಸಹ ನಿವಾರಣೆ ಮಾಡಬಹುದು. ನೆನೆಸಿಟ್ಟ ಬಾದಾಮಿಯಲ್ಲಿ ಹೀರಿಕೊಳ್ಳದ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಒರಟು ಪ್ರಮಾಣವನ್ನು ಅಧಿಕಗೊಳಿಸಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಇನ್ನು ಹೊಟ್ಟೆಯ ಸುತ್ತಲೂ ಇರುವ ಕೊಬ್ಬನ್ನು ಕರಗಿಸಬೇಕು ಅಂತ ಇದ್ರೆ ನೆನೆಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಬಾದಾಮಿಯ ಸಿಪ್ಪೆಯನ್ನು ತೆಗೆಯುವ ಕಾರಣ ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಬೇಗನೆ ಜೀರ್ಣ ಆಗುವುದು. ನೆನೆಸಿಟ್ಟ ಬಾದಾಮಿಯಲ್ಲಿ ಏಕಪರ್ಯಾಪ್ತ ಕೊಬ್ಬು ಇರುತ್ತದೆ. ಇದು ನಮಗೆ ಆದಷ್ಟು ಹಸಿವೆಯನ್ನ ಕಡಿಮೆ ಮಾಡಿ ಬೇಗನೆ ಹೊಟ್ಟೆ ತುಂಬುವ ಹಾಗೆ ಮಾಡುತ್ತದೆ. ನೆನೆಸಿಟ್ಟ ಬಾದಾಮಿಯಿಂದ ಇಷ್ಟೆಲ್ಲ ಪ್ರಯೋಜನಗಳು ಇರಬೇಕಾದರೆ ತಪ್ಪದೆ ನೆನೆಸಿಟ್ಟ ಬಾದಾಮಿಯನ್ನು ಪ್ರತೀ ದಿನ ಸೇವಿಸುವುದು ಉತ್ತಮ.