ಎಳನೀರಿನಿಂದ ಸಿಗುವ 18 ಲಾಭಗಳನೊಮ್ಮೆ ನೋಡಿ

0 0

ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಸಹಕಾರಿ ಮತ್ತು ಸಂಜೀವಿನಿ ಎಂದರೆ ಅದು ಎಳನೀರು. ಸಾಮಾನ್ಯವಾಗಿ ಕಾಡುವ ಎಲ್ಲಾ ಕಾಯಿಲೆಗಳಿಗೆ ದಿವ್ಯ ಔಷಧಿಯೂ ಹೌದು. ಬಳಲಿ ಬೆಂಡಾದ ದೇಹಕ್ಕೆ ಕೆಲವೇ ಗಂಟೆಗಳಲ್ಲಿ ಹೊಸ ಚೈತನ್ಯ ನೀಡುವ ನೈಸರ್ಗಿಕ ಔಷಧ ಇದು. ಬಿಸಿಲಿಗೆ ದೇಹವನ್ನು ತಂಪಾಗಿಸಿ ದೇಹದ ಉಷ್ಣವನ್ನು ಕಡಿಮೆ ಮಾಡುವ ಗುಣ ಎಳನೀರಿಗೆ ಇದೆ. ಬಾಯಾರಿಕೆಯನ್ನು ನೀಗಿಸುವುದರ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುವ ಸೌಂದರ್ಯವರ್ಧಕವಾಗಿ ಹಾಗೂ ಅನಾರೋಗ್ಯದಿಂದ ಬಳಲುತ್ತಾ ಇದ್ದರೆ ಔಷಧ ರೂಪದಲ್ಲಿ ಚೈತನ್ಯ ನೀಡುವುದು ಈ ಎಳೆನೀರು. ಎಳೆನೀರನ್ನು ಸೇವಿಸುವುದರಿಂದ ದೇಹದಲ್ಲಿ ಮಹತ್ತರ ಬದಲಾವಣೆ ಅಥವಾ ಚೈತನ್ಯವನ್ನು ಕಾಣಬಹುದು.

ಉಷ್ಣ ವಲಯಗಳಲ್ಲಿ ಅಥವಾ ಸಮುದ್ರ ತೀರದಲ್ಲಿ ನೌಸರ್ಗಿಕವಾಗಿ ಬೆಳೆಯಲಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು. ರಾಜ್ಯದಲ್ಲಿ ಎಲ್ಲೆಡೆಯೂ ಇದನ್ನು ಕಾಣಬಹುದು. ಇನ್ನು ಬೆಳಗ್ಗೆ ಎದ್ದು ಎಳನೀರನ್ನು ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ನೋಡೋಣ.

ಪುರಾತನ ಕಾಲದಿಂದಲೂ ಔಷಧ ಹಾಗೂ ತಂಪಾದ ಪಾನೀಯದ ರೂಪದಲ್ಲಿ ಇದನ್ನು ಸೇವಿಸುತ್ತಲೇ ಬಂದಾಗಿದೆ. ಮನುಷ್ಯ ಸಂಕುಲಕ್ಕೆ ಅಪಾರವಾದ ಲಾಭವಿದ ಇದು ಅಪಾರವಾದ ಪ್ರೊಟೀನ್, ಕಾರ್ಬೋ ಹೈಡ್ರೇಟ್, ಖನಿನಗಳು, ವಿವಿಧ ಜೀವ ಸತ್ವಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಸಿಗುವ ಈ ದಿವ್ಯ ಔಷಧದಿಂದ ಆರೋಗ್ಯದ ಆರೈಕೆಯನ್ನು ಪಡೆಯಬಹುದು. ರಕ್ತದ ಒತ್ತಡದ ನಿಯಂತ್ರಣಕ್ಕಾಗಿ ಸಾಮಾನ್ಯವಾಗಿ ಜನರು ರಕ್ತದೊತ್ತಡದಿಂದ ಬಳಲುತ್ತಾ ಇರ್ತಾರೆ. ಇಂತವರು ಏಳನೀರು ಸೇವಿಸುವುದರಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ತಾಜಾ ಎಳನೀರಿನಲ್ಲಿ ಅಧಿಕ ಪ್ರಮಾಣದ ಪೊಟ್ಯಾಶಿಯಂ ಮತ್ತು ಮ್ಯಾಗ್ನಿಶಿಯಂ ಇರತ್ತೆ ಇದರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲೂ ಇಟ್ಟುಕೊಳ್ಳಬಹುದು.
ಹೃದಯದ ಸಮಸ್ಯೆಗಾಗಿ ಏಳನೀರಿನಲ್ಲಿ ಯಾವುದೇ ರೀತಿಯ ಅನಾವಶ್ಯಕ ಕೆಟ್ಟ ಕೊಬ್ಬು ಇಲ್ಲದೆ ಇರುವುದ್ರಿಂದ ಇದು ಹೃದಯದ ಸಮಸ್ಯೆ ಇರುವವರು ಯಾವುದೇ ಅಡ್ಡಿ ಇಲ್ಲದೆ ನೈಸರ್ಗಿಕವಾಗಿ ದೊರೆಯುವ ಈ ಪಾನೀಯವನ್ನು ಸೇವಿಸಬಹುದು. ಇದು ಉತ್ತಮ ರೋಗ ನಿರೋಧಕ ಶಕ್ತಿಯನ್ನೂ ಸಹ ಹೊಂದಿರುತ್ತದೆ. ಲಿಪೋ ಪ್ರೊಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಪಧಮನಿಗೆ ಹಾನಿ ಉಂಟು ಮಾಡುವ ಕೆಟ್ಟ ಕೊಬ್ಬನ್ನು ತಡೆಯುತ್ತೆ. ಜೊತೆಗೆ ಹೃದಯಾಘಾತ ಆಗುವುದನ್ನೂ ತಡೆಯಬಹುದು. ಅಷ್ಟೇ ಅಲ್ಲದೆ ತೂಕ ಕಡಿಮೆ ಮಾಡಿಕೊಳ್ಳಲು ಸಕ ಇದು ಸಹಕಾರಿ. ಅಧಿಕ ತೂಕ ಇರುವವರಿಗೆ ಇದು ಉತ್ತಮವಾದ ನೈಸರ್ಗಿಕ ಪಾನೀಯ. ಪೊಟ್ಯಾಶಿಯಂ ಅಧಿಕವಾಗಿ ಇರುವುದರಿಂದ ದೇಹದಲ್ಲಿ ಇರುವ ದುರ್ಬಲ ವಿಷಕಾರಿ ಅಂಶಗಳನ್ನು ತೆಗೆಯುತ್ತದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಿಸಿ ಜೀರ್ಣ ಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಜೀರ್ಣ ಕ್ರಿಯೆಯು ಸರಾಗವಾಗಿ ನಡೆಯುತ್ತದೆ. ಇದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಬೆಳವಣಿಗೆ ಆಗುವುದಿಲ್ಲಾ.

ಎಳನೀರು ನಿರ್ಜಲೀಕರಣವನ್ನು ತಡೆಯುತ್ತದೆ. ಇದರಲ್ಲಿ ಸುಲಭವಾಗಿ ಜೀರ್ಣ ಆಗುವ ಕಾರ್ಬೋ ಹೈಡ್ರೇಟ್ ಗಳು ಸಮೃದ್ಧವಾಗಿದೆ. ಹೀಗಾಗಿ ಅತಿಸಾರ ಮತ್ತು ವಾಕರಿಕೆಗಳಿಂದ ಬಳಲುತ್ತಾ ಇದ್ದವರು ಎಳನೀರನ್ನು ಸೇವಿಸಬೇಕು. ದೇಹವು ಹೆಚ್ಚಿನ ಪ್ರಮಾಣದಲ್ಲಿ ದ್ರವದ ನಷ್ಟವನ್ನು ಎದುರಿಸುತ್ತಾ ಇರುತ್ತದೆ ತಕ್ಷಣ ಜಲಸಂಚಯಣಕ್ಕೆ ಅವಕಾಶ ಮಾಡಿಕೊಡುತ್ತದೆ. ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರೊಟೀನ್ ಮತ್ತು ಫೈಬರ್ ಏಳನೀರಿನಲ್ಲಿ ಸಮೃದ್ಧವಾಗಿದೆ. ಹಾಗಾಗಿ ಮಧುಮೇಹಿಗಳಿಗೆ ನಿಯಮಿತವಾಗಿ ಈ ಪಾನೀಯವನ್ನು ಕೊಡಬಹುದು. ಮಧುಮೇಹಗಳ ಕೆಲವು ಹಾನಿಕಾರಕ ಹಾಗೂ ಅಡ್ಡ ಪರಿಣಾಮಗಳನ್ನು ತಡೆಯುತ್ತದೆ.

ಮೂತ್ರದ ತೊಂದರೆಗಳನ್ನು ನಿವಾರಿಸುತ್ತದೆ. ಏಳನೀರಲ್ಲಿ ಪೊಟ್ಯಾಷಿಯಂ ಅಂತಹ ಆರೋಗ್ಯಕರ ಕಿಣ್ವಗಳ ಉತ್ಪತ್ತಿಯು ಮೂತ್ರಗಳ ಹೆಚ್ಚಿನ ಉತ್ಪಾದನೆಯ ಮೂಲಕ ಹೊರಬರುವ ಎಲ್ಲಾ ಜೀವಾಣುಗಳನ್ನು ಹೊರ ಹಾಕಲು ಪರಿಪೂರ್ಣವಾದ ಪಾನೀಯವಾಗಿದೆ. ಮೂತ್ರದ ಆಮ್ಲೀಯ ಪ್ರಕೃತಿ ತೆಂಗಿನ ನೀರಿನ ಲವನಗಳಿಂದ ಉಂಟಾಗುತ್ತದೆ. ಇದು ಮೂತ್ರದ ಸೋಂಕನ್ನು ತಡೆಯುವಲ್ಲಿ ಸಹಾಯಕಾರಿ ಆಗಿದೆ. ಅಷ್ಟೇ ಅಲ್ಲದೆ ಸೌಂದರ್ಯವರ್ಧಕವಾಗಿಯೂ ಸಹ ಎಳನೀರನ್ನು ಉಪಯೋಗಿಸಬಹುದು. ಕೂದಲಿನ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ನಿಯಮಿತ ಸೇವನೆಯಿಂದ ಕೂದಲಿನ ಬೇರುಗಳು ಹೆಚ್ಚು ಪ್ರಭಲವಾಗುತ್ತದೆ. ಹೀಗಾಗಿ ಕೂದಲು ಉದುರುವುದನ್ನು ತಡೆಯಬಹುದು. ನೈಸರ್ಗಿಕ ಪದಾರ್ಥಗಳೊಂದಿಗೆ ತೆಂಗಿನನೀರನ್ನು ಬಳಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಬಹುದು. ಇದರಿಂದ ಹೊಟ್ಟು, ಸೂರ್ಯನ ಕಿರಣಗಳಿಂದ ಉಂಟಾಗುವ ಕೂದಲ ಸಮಸ್ಯೆಯನ್ನು ನಿಯಾರಣೆ ಮಾಡಬಹುದು.

ಎಳನೀರು ಮಾನಸಿಕ ಶಕ್ತಿಯನ್ನು ಬಲಪಡಿಸುತ್ತದೆ. ಗ್ಲುಟಮಿಕ್ ಆಮ್ಲ ಸಮೃದ್ಧವಾಗಿದೆ. ಇದರಲ್ಲಿ ಮೆದುಳಿನ ಸ್ಮರಣೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಈ ನೈಸರ್ಗಿಕ ಪಾನೀಯವು ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಮಾನಸಿಕ ಸ್ಥಿತಿಯು ಉತ್ತಮವಾಗಿರುವಂತೆ ಮಾಡುವ ಗುಣಗಳು ಇರುತ್ತವೆ. ಮೂತ್ರ ಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ. ಅತ್ಯುತ್ತಮವಾದ ಮೂತ್ರವರ್ಧಕವಾಗಿದೆ. ಮೂತ್ರವನ್ನು ಹೆಚ್ಚಿಸಿ ಕಲ್ಮಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೂತ್ರ ಪಿಂಡಗಳಲ್ಲಿ ಈಗಾಗಲೇ ಕಾಲುಗಳು ಆಗಲು ಆರಂಭ ಆಗಿದ್ದರೆ ಕರಗಿಸಿ ಕಲ್ಲುಗಳು ಆಗದಂತೆ ರಕ್ಷಿಸುತ್ತದೆ. ಇನ್ನು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಮೂತ್ರ ಕೋಶ, ಮೂತ್ರ ವ್ಯವಸ್ಥೆಯಲ್ಲಿ ಕಂಡುಬರುವ ಸೋಂಕು, ಜ್ವರ, ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ವಶೇಷವಾಗಿ ವಾಸಡುಗಳಲ್ಲಿ ರಕ್ತ ಬರುವ, ಸೋಂಕು ಉಂಟಾಗುವ ಸಾಧ್ಯತೆಗಳನ್ನು ಸಹ ಕಡಿಮೆ ಮಾಡುತ್ತದೆ. ಚರ್ಮಕ್ಕೆ ಸಂಬಂಧಿಸಿ ಕೂಡಾ ಎಳನೀರು ತುಂಬಾ ಸಹಾಯಕಾರಿ. ಚರ್ಮದ ಆರೈಕೆಯಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಚರ್ಮಕ್ಕೆ ಬೇಕಾದ ಆರ್ಧ್ರತೆಯನ್ನು ಒಳಗಿನಿಂದಲೇ ಕೊಟ್ಟು ಚರ್ಮಕ್ಕೆ ಬೇಕಾದ ಕಾಂತಿಯನ್ನು ಸಹ ನೀಡುತ್ತದೆ. ಏಳನೀರಿನಿಂದ ಇಷ್ಟೊಂದು ಲಾಭದಾಯಕ ಪ್ರಯೋಜನಕಾರಿ ಅಂಶಗಳು ನಮ್ಮ ದೇಹಕ್ಕೆ ಇದೆ.

Leave A Reply

Your email address will not be published.