ರಾತ್ರಿ ಮಲಗುವ ಮುನ್ನ ಏಲಕ್ಕಿ ತಿಂದು ಬಿಸಿನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತೆ..

0 277

ಏಲಕ್ಕಿ ಭಾರತದ ವಿಶಿಷ್ಟ ಸಾಂಬಾರ ಪದಾರ್ಥವಾಗಿದ್ದು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಲಕ್ಕಿ ಉಪಬೆಳೆಯಾಗಿದ್ದು ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಡಿಕೆ, ತೆಂಗು, ಬಾಳೆ ಮೊದಲಾದ ತೋಟಗಳ ನಡುವೆ ನೆರಳಿನಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಸಬಹುದಾದ ಸಸ್ಯವಾಗಿದೆ. ಸ್ವಾದ ಮತ್ತು ಗುಣದಲ್ಲಿ ಇದು ಪರಿಪೂರ್ಣವಾಗಿ ಭಿನ್ನವಾಗಿದೆ. ಆರೋಗ್ಯಕ್ಕೂ ರುಚಿಗೂ ಬಹಳ ಒಳ್ಳೆಯದಾದ ಏಲಕ್ಕಿಯನ್ನು ನಮ್ಮ ನಿತ್ಯದ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಏಲಕ್ಕಿಯ ಪಾತ್ರವನ್ನು ಬಹಳ ಹಿಂದಿನಿಂದಲೇ ಭಾರತೀಯರು ಗಮನಿಸಿದ್ದಾರೆ. ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡುವಲ್ಲಿಯೂ ಏಲಕ್ಕಿ ನೆರವು ನೀಡುತ್ತದೆ. ಸಾಮಾನ್ಯವಾಗಿ ಸಾಂಬಾರ ಪದಾರ್ಥವೆಂದರೆ ಕೊಂಚ ಕಾರವಾಗಿರುತ್ತದೆ. ಏಲಕ್ಕಿ ಇದಕ್ಕೆ ಅಪವಾದವಾಗಿದ್ದು ಇದರ ಸೇವನೆಯಿಂದ ದೇಹಕ್ಕೆ ತಂಪು ಮತ್ತು ಇದರ ರುಚಿಯೂ ಇಷ್ಟವಾಗುವಂತೆಯೇ ಇರುತ್ತದೆ. ಅಲ್ಲದೇ ಇದು ಜಠರದಲ್ಲಿಯೇ ಪೂರ್ಣವಾಗಿ ಜೀರ್ಣವಾಗುವ ಮೂಲಕ ಜಠರದಲ್ಲಿ ಆಮ್ಲೀಯತೆಯಾಗದಂತೆ ಕಾಪಾಡುತ್ತದೆ. ಇದೇ ಕಾರಣಕ್ಕೆ ಊಟದ ಬಳಿಕ ಸೇವನೆಗೆ ಏಲಕ್ಕಿಯನ್ನು ನೀಡಲಾಗುತ್ತದೆ.

ವಿಶೇಷವಾಗಿ ಜೀರ್ಣಕ್ರಿಯೆಯ ತೊಂದರೆಗಳಾದ ಅಜೀರ್ಣತೆ, ವಾಕರಿಕೆ, ಹುಳಿತೇಗು, ವಾಂತಿ, ಹೊಟ್ಟೆನೋವು, ಹೊಟ್ಟೆಯ ಸೆಡೆತ ಇತ್ಯಾದಿಗಳನ್ನು ಸರಿಪಡಿಸಲು ತಕ್ಷಣವೇ ಒಂದೆರಡು ಏಲಕ್ಕಿಗಳನ್ನು ಜಗಿದು ನುಂಗಿಬಿಡುವ ಮೂಲಕ ಶೀಘ್ರ ಉಪಶಮನ ದೊರಕುತ್ತದೆ. ಏಲಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಈ ಭಾಗದಲ್ಲಿ ವಾಸನೆಯುಂಟಾಗುವುದನ್ನು ತಡೆಯುತ್ತದೆ. ಅಲ್ಲದೇ ಹಲ್ಲುಗಳ ನಡುವೆ ಬ್ಯಾಕ್ಟೀರಿಯಾಗಳು ಆಹಾರಕಣಗಳನ್ನು ಕೊಳೆಸಿ ಈ ಭಾಗವನ್ನು ಆಮ್ಲೀಯವಾಗಿಸಿದ್ದರೆ ಏಲಕ್ಕಿ ಕರಗಿದ ಲಾಲಾರಸ ಈ ಆಮ್ಲೀಯತೆಯನ್ನು ಸಂತುಲಿತಗೊಳಿಸಿ ನಿವಾರಿಸಲು ನೆರವಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ಏಲಕ್ಕಿಯನ್ನು ಅಗೆದು ತಿಂದು ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ಶರೀರಕ್ಕೆ ಯಾವುದೇ ಔಷಧಿಗಳ ಅಗತ್ಯ ಇರುವುದಿಲ್ಲ. ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಅತಿಯಾದ ತೂಕ ಹೆಚ್ಚಳ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದೇ ಹೇಳಬಹುದು. ಹಾಗಾಗಿ ತೂಕ ಕಡಿಮೆ ಮಾಡಲು ಪ್ರತೀ ದಿನ ಏನಾದರೂ ಒಂದು ಹರಸಾಹಸ ಪಡುತ್ತಲೇ ಇರುತ್ತಾರೆ. ಇದಕ್ಕಾಗಿ ಪ್ರತೀ ದಿನ ಒಂದು ಏಲಕ್ಕಿಯನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಇದು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸಿ ಈ ಮೂಲಕ ನಮ್ಮ ದೇಹದಲ್ಲಿ ಉತ್ಪತ್ತಿ ಆಗಿರುವ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸಲು ಏಲಕ್ಕಿ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಶರೀರದಲ್ಲಿ ಇರುವಂತಹ ಹಾನಿಕಾರಕ ಹಾಗೂ ಕೆಟ್ಟ ಪದಾರ್ಥಗಳನ್ನು ಇದು ನಾಶಗೊಳಿಸುತ್ತದೆ. ರಕ್ತ ಸಂಚಾರವನ್ನು ಸರಾಗವಾಗಿಸುತ್ತದೆ. ಎಲಕ್ಕಿ ಹೊಟ್ಟೆಯಲ್ಲಿ ಹಾಗೂ ಎದೆಯ ಭಾಗದಲ್ಲಿ ಮುಂತಾದ ಹಣ್ಣುಗಳನ್ನು ನಿವಾರಣೆ ಮಾಡಿ ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿಮ್ಮದಾಗಿಸಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗುವಂತೆ ನೋಡಿಕೊಂಡು ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಎದುರಾಗದಂತೆ ನಿಮ್ಮನ್ನು ಕಾಪಾಡುತ್ತದೆ.

ನಿದ್ರಾಹೀನತೆಯಿಂದ ಬಳಲುವವರಿಗೆ ರಾತ್ರಿ ಮಲಗುವ ಸಮಯದಲ್ಲಿ ಒಂದು ಏಲಕ್ಕಿಯನ್ನು ಅಗೆದು ಸ್ವಲ್ಪ ಬಿಸಿ ನೀರು ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಹಾಗೂ ನಿದ್ದೆ ಮಾಡುವಾಗ ಬರುವ ಗೊರಕೆಯ ಶಬ್ದ ಕೂಡಾ ಬರುವುದಿಲ್ಲ. ಅಷ್ಟೇ ಅಲ್ಲದೆ ಪ್ರತೀ ದಿನ ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿನ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಚರ್ಮದ ಯಾವುದೇ ರೀತಿಯ ಅಲರ್ಜಿಗಳು ಸಹ ಕಡಿಮೆ ಮಾಡುತ್ತದೆ. ಕೂದಲು ಉದುರುವ ಸಮಸ್ಯೆಗೂ ಸಹ ಇದು ಉತ್ತಮ ಸಹಾಯಕಾರಿ ಆಗಿದೆ.

ಏಲಕ್ಕಿಯಲ್ಲಿ ನೈಸರ್ಗಿಕವಾದ ಫೈಟೋಕೆಮಿಕಲ್ ಅಂಶಗಳಿದ್ದು ಇದು ಕ್ಯಾನ್ಸರ್ ರೋಗದ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುತ್ತದೆ ಕನಿಷ್ಠ ಹದಿನೈದು ದಿನಗಳ ಕಾಲ ನಿರಂತರವಾಗಿ ಏಲಕ್ಕಿಯ ಸೇವನೆಯಿಂದ ಕ್ಯಾನ್ಸರ್ ಗೆಡ್ಡೆಯ ಗಾತ್ರ ಮತ್ತು ತೂಕ ತಗ್ಗುತ್ತದೆ ಕೆಲವೊಂದು ಚರ್ಮ ಸಂಬಂಧಿತ ಕ್ಯಾನ್ಸರ್ ಸಮಸ್ಯೆಗಳಿಗೂ ಕೂಡ ಏಲಕ್ಕಿಯಲ್ಲಿ ಪರಿಹಾರವಿದೆ. ಏಲಕ್ಕಿಯ ನಿತ್ಯ ನಿಯಮಿತ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.

ಹೃದಯ ಸ್ತಂಭನ ಸಮಸ್ಯೆಗಳು ಇಲ್ಲವಾಗುತ್ತವೆ. ಇದರಲ್ಲಿನ ಆಂಟಿ – ಆಕ್ಸಿಡೆಂಟ್ ಅಂಶಗಳು ಹೃದಯದ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಪಡೆದಿವೆ ಇಷ್ಟೇ ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಶಕ್ತಿ ಪಡೆದಿದೆ. ಕೆಲವರಿಗೆ ವಾಹನಗಳಲ್ಲಿ ದೂರ ಪ್ರಯಾಣ ಮಾಡುವ ವೇಳೆ ವಾಂತಿಯಾಗುವ ಸಮಸ್ಯೆಯಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರಯಾಣ ಪ್ರಾರಂಭಿಸುವ ಮೊದಲು ಏಲಕ್ಕಿಯನ್ನು ಬಾಯಿಯಲ್ಲಿ ಇರಿಸಿ. ಹೀಗೆ ಮಾದುವುದರಿಂದ ಪ್ರಯಾಣದುದ್ದಕ್ಕೂ ವಾಂತಿಯಾಗುವುದನ್ನು ತಡೆಯಬಹುದು.

ಏಲಕ್ಕಿಯಲ್ಲಿ ಎಣ್ಣೆಯ ಅಂಶವೂ ಇದೆ ಎಂದು ಹಲವರಿಗೆ ತಿಳಿದಿಲ್ಲ. ಏಲಕ್ಕಿಯಲ್ಲಿರುವ ಸಾರಭೂತ ತೈಲವು ಹೊಟ್ಟೆಯ ಒಳ ಪದರವನ್ನು ಬಲಪಡಿಸುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತೀ ದಿನ ಮಿತವಾದ ಏಲಕ್ಕಿಯ ಸೇವನೆಯಿಂದ ನಾವು ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳು ಪಡೆಯಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.