ದಿನಕ್ಕೊಂದು ಸೇಬು ತಿಂದರೆ ವ್ಯೆದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ನಾಣ್ಣುಡಿ ಆಗಿದೆ.ಇದು ಸತ್ಯ ಆದರೆ ಇದನ್ನು ಪಾಲಿಸಿಕೊಂಡು ಹೋಗುವವರು ಬಹಳ ಕಡಿಮೆ.ಕಾರಣ ಇದನ್ನು ಹಣ ಕೊಟ್ಟು ಖರೀದಿ ಮಾಡಬೇಕು.ಇದು ಪಪ್ಪಾಯ, ಅನಾನಸ್ ತರ ಹಳ್ಳಿ ಕಡೆ ದೊರೆಯುವುದಿಲ್ಲ.ಇದನ್ನು ತೆಗೆದುಕೊಳ್ಳಲು ಪೇಟೆಗೆ ಹೋಗಬೇಕು.ಆದರೂ ಸಹ ಸೇಬುಹಣ್ಣು ಅಷ್ಟೊಂದು ದುಬಾರಿ ಅಲ್ಲ.ಹೆಚ್ಚಾಗಿ ಮನೆಯಲ್ಲಿ ಕಾರ್ಯಕ್ರಮ ಇದ್ದರೆ ಕೆಲವರು ತರುತ್ತಾರೆ. ಆದರೆ ಕೆಲವರು ತಮ್ಮ ಆರೋಗ್ಯಕ್ಕಾಗಿ ಇದನ್ನು ದಿನವೂ ತಿನ್ನುತ್ತಾರೆ. ಆದರೆ ನಾವು ಇಲ್ಲಿ ಸೇಬುಹಣ್ಣನ್ನು ಸೇರಿಸುವ ಸರಿಯಾದ ವಿಧಾನವನ್ನು ನೋಡೋಣ.

ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಇದು ಹೆಚ್ಚಿನ ಪ್ರಮಾಣದ ನಾರಿನ ಅಂಶವನ್ನು ಹೊಂದಿದೆ.ಇದರೊಂದಿಗೆ ಸೇಬಿನಲ್ಲಿ ವಿವಿಧ ರೀತಿಯ ಖನಿಜಗಳು, ವಿಟಮಿನ್ ಗಳು,ಪೊಟ್ಯಾಶಿಯಂ ಗಳು ಇವೆ. ಆದರೆ ಸೇಬುಹಣ್ಣನ್ನು ಸೇವಿಸಲು ಅದರದೇ ಆದ ಸರಿಯಾದ ವಿಧಾನ ಇದೆ.ಇಲ್ಲದಿದ್ದರೆ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ.

ಸೇಬುಹಣ್ಣು ತಿಂದರೆ ಅದು ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ. ಸೇಬುಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ ಗಳಿದ್ದು ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಹೃದಯದ ಆರೋಗ್ಯಕ್ಕೆ ಇದು ಉತ್ತಮ ಆಗಿದೆ.ಇದು ಕೊಲೆಸ್ಟ್ರಾಲ್ ನ ಮಟ್ಟವನ್ನು ಇಳಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.ಇದರಿಂದ ಪಾರ್ಶ್ವವಾಯು ಸಮಸ್ಯೆ ದೂರ ಆಗುತ್ತದೆ. ಮುಖದಲ್ಲಿ ನೆರಿಗೆಗಳು ಮೂಡುವುದಿಲ್ಲ.ಮೂಳೆಗಳ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.ಮಲಬದ್ಧತೆ ಮತ್ತು ರಕ್ತಹೀನತೆಗೆ ಉತ್ತಮವಾಗಿದೆ.

ಬೆಳಗಿನ ಉಪಹಾರದ ಒಂದು ಗಂಟೆಯ ನಂತರ ಸೇಬುಹಣ್ಣು ಸೇವಿಸಿದರೆ ಬಹಳ ಒಳ್ಳೆಯದು.ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಕಾರಣ ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.ಮಧ್ಯಾಹ್ನ ಊಟವಾದ ಒಂದು ಗಂಟೆಯ ನಂತರ ಸೇವಿಸಬಹುದು.ಆದರೆ ರಾತ್ರಿ ಸೇವಿಸುವುದರಿಂದ ಕಫದ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಸೇಬನ್ನು ಹಲವರು ಸಿಪ್ಪೆ ತೆಗೆದು ಸೇವಿಸುತ್ತಾರೆ. ಆದರೆ ಸಿಪ್ಪೆಯಲ್ಲಿ ನಾರಿನ ಅಂಶ ಅಧಿಕವಾಗಿ ಇರುತ್ತದೆ.ಸಿಪ್ಪೆ ಸಹಿತ ತಿನ್ನಬೇಕು. ಆದರೆ ಇದಕ್ಕೆ ಹಲವು ದಿನಗಳ ತನಕ ಇರಲೆಂದು ಕೀಟ ನಾಶಕಗಳನ್ನು, ರಾಸಾಯನಿಕಗಳನ್ನು ಬಳಸಲಾಗುತ್ತದೆ.ಆದ್ದರಿಂದ ಸೇಬುಹಣ್ಣನ್ನು ಚೆನ್ನಾಗಿ ತೊಳೆದು ಒಂದು ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ 2 ರಿಂದ 3 ಬಾರಿ ತೊಳೆಯಬೇಕು. ಇದರಿಂದ ಸೇಬುಹಣ್ಣಿನ ಸಂಪೂರ್ಣ ಲಾಭವನ್ನು ಪಡೆಯಬಹುದು.

ಪ್ರತಿಯೊಂದು ಹಣ್ಣುಗಳು ಕೆಲವು ಕಾರಣಗಳಿಂದ ಅದರದೇ ಆದ ಅಡ್ಡ ಪರಿಣಾಮಗಳನ್ನು ನೀಡುತ್ತವೆ.ಅವುಗಳೆಂದರೆ ಸೇವಿಸಿದ ಊಟದಲ್ಲಿ ಮೂಲಂಗಿ ಇದ್ದರೆ ಅಂದು ಸೇಬು ಸೇವಿಸಬಾರದು. ಕಾರಣ ಬಿಳಿ ಮಚ್ಚೆಗಳು ಆಗುವ ಸಾಧ್ಯತೆ ಇದೆ. ಹಾಲು ಅಥವಾ ಮಜ್ಜಿಗೆ ಸೇವಿಸಿದ ನಂತರ ಸೇಬು ಸೇವಿಸಬಾರದು.ಸೇಬು ಸೇವಿಸಿದ ತಕ್ಷಣ ನೀರು ಕುಡಿಯಬಾರದು.ಅಲರ್ಜಿ, ಅತಿಯಾದ ಕಫಬಾಧೆ, ಅಸ್ತಮಾ ಇರುವವರು ರಾತ್ರಿ ಹೊತ್ತಿನಲ್ಲಿ ಸೇಬು ಸೇವಿಸಬಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!