ಅಂಜೂರ ಹಣ್ಣು ಅಥವಾ ಅತ್ತಿ ಹಣ್ಣು ತಿನ್ನುವುದರಿಂದ ದೇಹದಲ್ಲಿ ಆಗುವಂತಹ ಪ್ರಮುಖವಾದ ಬದಲಾವಣೆಗಳನ್ನು ಅನ್ನೋದರ ಬಗ್ಗೆ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳೋಣ. ಅಂಜೂರದ ಹಣ್ಣನ್ನು ತಿನ್ನುವುದರಿಂದ ಹೃದಯ ಕಾಯಿಲೆ ಬರುವುದಿಲ್ಲ. ಹೆಚ್ಚಿನ ಜನರಿಗೆ ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗೂ ಇದನ್ನು ತಿನ್ನಬಾರದು ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಇದೆ. ಈ ಹಣ್ಣಿನಿಂದ ಆಗುವ ಉಪಯೋಗಗಳ ಬಗ್ಗೆ ಕೆಲವರಿಗೆ ತಿಳಿದಿರಲಿಕ್ಕಿಲ್ಲ ಅದರ ಬಗ್ಗೆ ತಿಳಿದುಕೊಂಡರೆ ಆಶ್ಚರ್ಯ ಆಗುವುದು ಖಚಿತ. ಅಂಜೂರದ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ಲೇಖನದ ಮೂಲಕ ಓದಿ ತಿಳಿದುಕೊಳ್ಳಿ.
ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಊಟದ ನಂತರ ಪ್ರತಿನಿತ್ಯ ಅಂಜೂರದ ಹಣ್ಣನ್ನು ತಿನ್ನುವುದರಿಂದ ಅವರ ದೇಹದಲ್ಲಿ ಸಕ್ಕರೆ ಕಾಯಿಲೆ ಕಡಿಮೆ ಆಗುವಂತೆ ನೋಡಿಕೊಳ್ಳುತ್ತದೆ. ಹಣ್ಣನ ತಿನ್ನುವುದರಿಂದ ಕ್ಯಾನ್ಸರ್ ನ ಸಮಸ್ಯೆ ನಿವಾರಣೆಯಾಗುತ್ತದೆ ಅಲ್ಲದೆ ಹಣ್ಣಿನಲ್ಲಿ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿ ಇನ್ಫೆಕ್ಷನ್ ಆಗದಂತೆ ತಡೆಯುತ್ತದೆ. ಅಂಜೂರದ ಹಣ್ಣಿನಲ್ಲಿ ಕ್ಯಾಲ್ಸಿಯಂನ ಪ್ರಮಾಣ ಹೇರಳವಾಗಿರುತ್ತದೆ ಇದರಿಂದ ನಮ್ಮ ದೇಹದ ಮೂಳೆಗಳು ಗಟ್ಟಿಯಾಗಿರುತ್ತದೆ. ಮೂಳೆಗಳ ಸಮಸ್ಯೆ ಇರುವವರು ಅಂಜೂರದ ಹಣ್ಣನ್ನು ತಿನ್ನುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ಹಾಗೆಯೇ ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ.
ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಇದರಿಂದ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಂಜೂರದ ಹಣ್ಣನ್ನು ಊಟಕ್ಕಿಂತ ಮೊದಲು ತಿನ್ನುವುದರಿಂದ ಹಸಿವೆ ಆಗುವುದಿಲ್ಲ. ಇದರಿಂದಾಗಿ ನಮ್ಮ ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟೇ ಊಟವನ್ನು ಸೇವಿಸಬಹುದು. ಅಂಜೂರದ ಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಅಂಶಗಳು ಹೇರಳವಾಗಿರುತ್ತವೆ. ರಕ್ತದೊತ್ತಡ ಸಮಸ್ಯೆಗಳು ಇರುವವರು ಈ ಹಣ್ಣನ್ನು ತಿನ್ನುವುದರಿಂದ ರಕ್ತದೊತ್ತಡ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ನಮ್ಮ ದೇಹದಲ್ಲಿನ ಕೆಟ್ಟ ರಕ್ತವನ್ನು ಶುದ್ಧೀಕರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಅಂಜೂರದ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಅಂಜೂರದ ಹಣ್ಣಿನಲ್ಲಿರುವ ಪೆಕ್ವಿನ್ ಎಂಬ ಅಂಶ ದೇಹದಲ್ಲಿರುವ ಬೇಡವಾದ ಅಥವಾ ವ್ಯರ್ಥ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಹೃದಯ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಇವಿಷ್ಟು ಅಂಜೂರದ ಹಣ್ಣು ಅಥವಾ ಅತ್ತಿಹಣ್ಣು ತಿನ್ನೋದರಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕರ ಲಾಭಗಳು.