ಪ್ರತಿ ತಿಂಗಳು ಮನೆಗೆ ಅತಿಥಿಗಳು ಬರುತ್ತಾರೋ ಇಲ್ಲವೋ ಆದರೆ ವಿದ್ಯುತ್ ಬಿಲ್ ಗಳಂತು ತಪ್ಪದೆ ಬರುತ್ತದೆ. ಬಡವರು ಮತ್ತು ಶ್ರೀಮಂತರು ಎಂದು ನೋಡದೆ ಎಲ್ಲರಿಗೂ ಬಿಲ್ ಕಟ್ಟುವ ಕರ್ತವ್ಯ ಇರುತ್ತದೆ. ಇಂತಹ ದಿನಗಳಲ್ಲಿ ಬಡವರಿಗೆ ಸರಕಾರವೂ ಒಂದು ಹೊಸ ವಿದ್ಯುತ್ ದರದ ನೀತಿಯನ್ನು ಜಾರಿ ಮಾಡಿದೆ. ಪ್ರತಿ ತಿಂಗಳು ತಪ್ಪದೆ ವಿದ್ಯುತ್ ಬಿಲ್ ಕಟ್ಟುತ್ತಾ ಇದ್ದವರಿಗೆ ಸರಕಾರವು ಸಿಹಿ ಸುದ್ದಿ ನೀಡಿದೆ. ಬಡವರಿಗೆ ಶ್ರೀಮಂತರಿಗೆ ಯಾವುದೆ ವ್ಯತ್ಯಾಸ ಇಲ್ಲದೆ ಬರುತ್ತಿದ್ದ ವಿದ್ಯುತ್ ಬಿಲ್ ನಲ್ಲಿ ಬಡವರಿಗೆ ಬಾರಿ ದೊಡ್ಡ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈಗಾಗಲೇ ದೇಶದ ಬಹಳಷ್ಟು ಜನರಿಗೆ ದಿನ ನಿತ್ಯ ಬೇಕಾಗುವ ಎಲ್ಪಿಜಿ ಗ್ಯಾಸ್ ನೀಡಿದ್ದು. ಅದರಲ್ಲಿ ಸಬ್ಸಿಡಿ ರೂಪದಲ್ಲಿ ಒಂದಷ್ಟು ಹಣ ಗ್ರಾಹಕರ ಖಾತೆಗೆ ಜಮಾವಣೆಯಾಗುವ ಕೆಲಸ ಮಾಡಿತ್ತು ಆದ್ರೆ ಇದೀಗ ಅದನ್ನು ನಿಲ್ಲಿಸಲಾಗಿದೆ. ಅದೆ ರೀತಿಯಲ್ಲಿ ವಿದ್ಯುತ್ ಬಿಲ್ ಕಟ್ಟಿದರೂ ಸಬ್ಸಿಡಿ ಸಿಗಲಿದೆ. ಅಂತೆಯೆ ಈಗ ಬಡವರು ಪಾವತಿಸುವ ವಿದ್ಯುತ್ ಬಿಲ್ ನ ಸಬ್ಸಿಡಿಯು ಎಲ್ಲ ಗ್ರಾಹಕರ ಖಾತೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಷ್ಟು ದಿನ ಬಡವರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ವಿದ್ಯುತ್ ಬಿಲ್ ಹೊರೆಯಾಗುತ್ತಿತ್ತು. ಇದರಿಂದ ಬಡವರನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ತಿರ್ಮಾನಿಸಿದೆ. ಇನ್ನು ಮುಂದೆ ದೇಶದ ಎಲ್ಲಾ ಬಡ ಕುಟುಂಬಗಳು ಕಟ್ಟುವ ವಿದ್ಯುತ್ ಬಿಲ್ ನಲ್ಲಿ ಒಂದಷ್ಟು ಹಣವನ್ನು ಸಬ್ಸಿಡಿಯಾಗಿ ಗ್ರಾಹಕರ ಖಾತೆಗೆ ಜಮಾವಣೆ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ.
ಈ ಬಗ್ಗೆ ಚರ್ಚಿಸಿ ಇಂಧನ ಸಚಿವಾಲಯವು ಹೊಸ ವಿದ್ಯುತ್ ದರ ನೀತಿಯನ್ನು ರೂಪಿಸುತ್ತಿದೆ. ಹೀಗೆ ಸಬ್ಸಿಡಿ ರೂಪದಲ್ಲಿ ಬಂದ ಹಣವೂ ಡಿ.ಬಿ.ಟಿ. ಮೂಲಕ ಅಂದರೆ ನೇರ ನಗದು ವರ್ಗಾವಣೆ ಮೂಲಕ ಗ್ರಾಹಕರ ಖಾತೆಯಲ್ಲಿ ಪ್ರತಿ ತಿಂಗಳು ಜಮಾವಣೆ ಆಗಲಿದೆ. ಕೇಂದ್ರ ಇಂಧನ ಸಚಿವಾಲಯವು ಮುಂದಿನ ಅಗಸ್ಟ ತಿಂಗಳ ಮೊದಲವಾರದಿಂದಲೆ ಹೊಸದಾಗಿ ರೂಪಿಸಿದ ವಿದ್ಯುತ್ ದರ ನೀತಿಯನ್ನು ಏಕರೂಪದಲ್ಲಿ ಜಾರಿಗೆ ತರಲಾಗುತ್ತಿದೆ.