ದೇಗುಲಗಳ ಬೀಡು ನಮ್ಮ ಭಾರತ. ಎಷ್ಟೋ ರಹಸ್ಯವನ್ನು ಒಡಲಲ್ಲಿ ಇಟ್ಟುಕೊಂಡ ವಿಚಿತ್ರಗಳ ಮನೆಯಾಗಿದೆ. 20 ಲಕ್ಷಗಳಿಗಿಂತ ಹೆಚ್ಚು ದೇಗುಲಗಳನ್ನು ಹೊಂದಿದ ದೇಶವಾಗಿದೆ. ಚಮತ್ಕಾರವುಳ್ಳ ವಿಗ್ರಹಗಳನ್ನು ಹೊಂದಿದೆ. ಅದರಲ್ಲಿ ಒಂದು ದೇವಸ್ಥಾನ ನೀರಲ್ಲಿ ಮುಳುಗಿ ವಿಶ್ರಮಿಸುವ ಶಿವನ ವಿಗ್ರಹವುಳ್ಳ ದೇವಾಲಯದ ಕಥೆ ಇದೆ. ಅಷ್ಟಕ್ಕೂ ಆ ದೇವಾಯ ಇರೋದಾದ್ರೂ ಎಲ್ಲಿ ಅಲ್ಲಿನ ವಿಶೇಷತೆ ಏನು ಅನ್ನೋದನ್ನ ನೋಡುತ್ತಾ ಹೋದ್ರೆ ಆ ದೇವಾಲಯ ಸಿಗೋದು ಉತ್ತರ ಪ್ರದೇಶದ ಸೀತಾಪುರಂ ಜಿಲ್ಲೆಯಲ್ಲಿ. ನೋಡಲು ಸಾಮಾನ್ಯ ದೇವಾಲಯದಂತೆ ಕಂಡುಬಂದರು ಅಲ್ಲಿನ ಕೊಳ ವಿಶೇಷತೆಯಿಂದ ಕೂಡಿದ್ದು. ಈ ಕೊಳದಲ್ಲಿ ಮಾಹಾದೇವನ ವಾಸವಿದೆ ಎಂದು ನಂಬುತ್ತಾರೆ. ಇಲ್ಲಿನ ಚರಿತ್ರೆಯ ಪ್ರಕಾರ ಭಕ್ತಿಯಿಂದ ಪರಶಿವನನ್ನು ನೆನೆದು ನೀರಲ್ಲಿ ಇಣುಕಿದರೆ ನೀರಲ್ಲಿ ತಣ್ಣಗೆ ವಿಶ್ರಮಿಸುತ್ತಿರುವ ಮಹಾದೇವನ ವಿಗ್ರಹ ಕಾಣಿಸುತ್ತದೆಯಂತೆ.

ಅಲ್ಲಿಯ ಆಲದ ಮರದ ಎಲೆ ನೀರೊಳಗೆ ಹಾಕಿದಾಗ ಮುಳುಗುತ್ತದೆಯಂತೆ. ಸಾಮಾನ್ಯವಾಗಿ ನೀರಲ್ಲಿ ಆಲದ ಎಲೆ ಮುಳುಗುವುದಿಲ್ಲ ಆದರೆ ಈ ಕೊಳದಲ್ಲಿ ಮುಳುಗಿ ಶಿವನನ್ನು ಅಲಂಕರಿಸುತ್ತದೆ ಎಂಬುದು ಇಲ್ಲಿಯ ಜನರ ವಾದ.

ಮತ್ತೊಂದೆಡೆ ಬ್ರಹ್ಮ ಮುಹೂರ್ತದಲ್ಲಿ ಈ ಕೊಳದಿಂದ ಓಂಕಾರ ಕೇಳಿ ಬರುತ್ತದೆ ಎಂಬುದು ಅಲ್ಲಿಯ ಜನರ ನಂಬಿಕೆ. ನೀರಿನಲ್ಲಿರುವ ಆ ಮಹಾದೇವನನ್ನು ಒಬ್ಬ ಮಹಾನ್ ಪುರುಷ ಆತ್ಮರೂಪದಲ್ಲಿ ಪೂಜಿಸುತ್ತಾನೆ. ಅದರಿಂದಲೆ ಅಲ್ಲಿ ಓಂಕಾರ ಶಬ್ದ ಕೇಳಿಬರುತ್ತದೆ ಎಂಬುದು ಜನರ ನಂಬಿಕೆ. ಪುರಾಣ ಕಥೆಯ ಪ್ರಕಾರ ಶಿವನು ತಾಂಡವ ಆಡುತ್ತಾನೆ. ಆ ತಾಂಡವದ ಬಿಸಿಯ ಬೇಗೆ ತಣಿಸಿಕೊಳ್ಳಲು ಇಲ್ಲಿ ನೀರಿನಲ್ಲಿ ಬಂದು ತಂಪಾಗುತ್ತಾನೆ ಎನ್ನುವುದು ಅಲ್ಲಿನ ಕಥೆ. ಎಷ್ಟೋ ಅದ್ಭುತ ಹಾಗೂ ವೈಚಿತ್ರ್ಯಗಳಿಗೆ ಹೆಸರಾದ ದೇಗುಲಗಳಲ್ಲಿ ಇದು ಒಂದು. ಇಂತಹ ಎಷ್ಟೋ ದೇವಾಲಯಗಳ ತವರು ನಮ್ಮ ಭಾರತ. ನಿಮಗೆ ಈ ದೇವಾಲಯದ ವಿಶೇಷತೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!