ದೇಶದಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಹಿಂದಿನಿಂದಲೂ ಇದೆ. ತುಂಬಾ ಜನರಿಗೆ ಎಲ್ಲಿ ಯಾವಾಗ? ಕೆಲಸಕ್ಕೆ ಅರ್ಜಿಹಾಕಬೇಕು. ಯಾವ ಯಾವ ಕೆಲಸಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬುದು ತಿಳಿದರುವುದಿಲ್ಲ. ಅಂತಹವರಿಗೆ ಇಲ್ಲಿದೆ ಸಪ್ಟೆಂಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಕೆಲಸಗಳ ವಿವರ. ಮೊದಲು S.S.L.C ಪಾಸ್ ಆದ ಅಭ್ಯರ್ಥಿಗಳಿಗೆ ಸಪ್ಟೆಂಬರ್ ನಲ್ಲಿ ಕರೆಯಲಾದ ಹುದ್ದೆಗಳು: ಕೆ.ಪಿ.ಎಸ್. ಸಿ ಗ್ರೂಪ್ ಸಿ ನಲ್ಲಿ ಬಿಲ್ ಕಲೆಕ್ಟರ್ ಕೆಲಸಕ್ಕೆ ಕರೆಯಲಾಗಿದೆ. 10 ಹುದ್ದೆಗಳಿಗಾಗಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ೧೯,೦೯,೨೦೨೦ ಕೊನೆಯ ದಿನಾಂಕವಾಗಿದೆ.

SSB ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಒಟ್ಟು ಹುದ್ದೆಗಳು 1522 ಅರ್ಜಿ ಸಲ್ಲಿಸಲು ೨೭,೦೯,೨೦೨೦ ಕೊನೆಯ ದಿನಾಂಕವಾಗಿದೆ. ಹಾವೇರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 132 ಹುದ್ದೆಗಳಿಗೆ ನೇಮಕಾತಿಗೆ ಕರೆಯಲಾಗಿದೆ. ೧೪,೦೯,೨೦೨೦ ಕೊನೆಯ ದಿನಾಂಕ ಆಗಿರುತ್ತದೆ. ಇದು ಹಾವೇರಿಗೆ ಮಾತ್ರ ಸಂಬಂಧಿಸಿದೆ.

ಎರಡನೆಯದಾಗಿ ಪಿಯುಸಿ ಪಾಸ್ ಆದ ಅಭ್ಯರ್ಥಿಗಳಿಗೆ ಸಪ್ಟೆಂಬರ್ ನಲ್ಲಿ ಕರೆಯಲಾದ ಹುದ್ದೆಗಳು: ಕೆಪಿಎಸ್.ಸಿ ಗ್ರೂಪ್ ಸಿ ನಲ್ಲಿ ಜೂನಿಯರ್ ಅಕೌಂಟ್ ಅಸ್ಸಿಸ್ಟೆಂಟ್ 24 ಹುದ್ದೆಗಳು, ಡಾಟಾ ಎಂಟ್ರಿ ಆಪರೇಟರ್ 45 ಹುದ್ದೆಗಳು, ಹೌಸ್ ಫಾದರ್ ಮತ್ತು ಹೌಸ್ ಮದರ್ಗೆ 50 ಹುದ್ದೆಗಳು ಕರೆಯಲಾಗಿದೆ. ೧೯,೦೯,೨೦೨೦ ಕೊನೆಯ ದಿನಾಂಕವಾಗಿರುತ್ತದೆ.

ಇಂಡಿಯನ್ ಆರ್ಮಿ ಟೆಕ್ನಿಕಲ್ ಎಂಟ್ರಿ ಸ್ಕೀಮ್ ನಲ್ಲಿ ಪಿಯುಸಿ ಸೈನ್ಸ್ ಪಾಸಾದ ಅಭ್ಯರ್ಥಿಗಳಿಗೆ 44 ಹುದ್ದೆಗಳಿಗೆ ಕರೆಯಲಾಗಿದೆ. ೦೯,೦೯,೨೦೨೦ ಕೊನೆಯ ದಿನಾಂಕವಾಗಿದೆ.ಎಸ್.ಎಸ್.ಸಿ ಡೆಲ್ಲಿ ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ 1522 ಅರ್ಜಿಗಳನ್ನು ಕರೆಯಲಾಗಿದೆ. ೦೭,೦೯,೨೦೨೦ ಕೊನೆಯ ದಿನಾಂಕವೆಂದು ನಿಗದಿ ಮಾಡಲಾಗಿದೆ.

ಪದವಿ ಪಾಸ್ ಆದ ಅಭ್ಯರ್ಥಿಗಳಿಗೆ ಸಪ್ಟೆಂಬರ್ ನಲ್ಲಿ ಕರೆಯಲಾದ ಹುದ್ದೆಗಳು: ಕೆಪಿಎಸ್.ಸಿ ಗ್ರೂಪ್ ಸಿ ನಲ್ಲಿ ಲೇಬರ್ ಇನ್ಸ್ಪೆಕ್ಟರ್ ಗೆ 26 ಹುದ್ದೆಗಳಿಗೆ, ಅಕೌಂಟ್ ಅಸ್ಸಿಸ್ಟೆಂಟ್ ಗೆ 72 ಹುದ್ದೆಗಳಿಗೆ, ಪಸ್ಟ್ ಗ್ರೇಡ್ ರೆವಿನ್ಯೂ ಇನ್ಸ್‌ಪೆಕ್ಟರ್ ಗೆ 66 ಹುದ್ದೆಗಳಿಗೆ, ಮಾರ್ಕೆಟಿಂಗ್ ಸೂಪರ್ ವೈಸರ್ ಗೆ 06 ಹುದ್ದೆಗಳಿಗೆ ಅರ್ಜೀ ಆಹ್ವಾನಿಸಲಾಗಿದೆ. 19-09-2020 ಕೊನೆಯ ದಿನಾಂಕವಾಗಿರುತ್ತದೆ. ಐಬಿಪಿಎಸ್ ಸಿ.ಆರ್.ಪಿ ಕ್ಲರ್ಕ್ ಗೆ 1557 ಅರ್ಜಿ ಸಲ್ಲಿಸಲು ಅವಕಾಶವಿದೆ. 23-09-2020 ಕೊನೆಯ ದಿನಾಂಕವಾಗಿದೆ. ಸಿ.ಎ.ಪಿ.ಎಪ್ ಅಸ್ಸಿಸ್ಟೆಂಟ್ ಇನ್ಸ್‌ಪೆಕ್ಟರ್ ಗೆ 209 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. 07-09-2020 ಕೊನೆಯ ದಿನಾಂಕವಾಗಿರುತ್ತದೆ. ಕೆಲವು ಅರ್ಜಿ ಕರೆದ ವೆಬ್ ಸೈಟ್ ಗಳು ಕೆಳಗೆ ನೀಡಲಾಗಿದೆ.

Leave a Reply

Your email address will not be published. Required fields are marked *