ಕನ್ನಡ ಚಿತ್ರ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಖ್ಯಾತಿ ಗಳಿಸಿರುವ ವಿಜಯ್ ಅಲಿಯಾಸ್ ದುನಿಯಾ ವಿಜಯ್ ಅವರು ಇತ್ತೀಚೆಗಷ್ಟೇ ತೆರೆಕಂಡ ಸಲಗ ಸಿನಿಮಾದ ಯಶಸ್ವಿಯನ್ನು ಕಂಡು ತುಂಬಾ ಖುಷಿಯಾಗಿದ್ದಾರೆ.ದುನಿಯಾ ಸಿನಿಮಾದ ನಂತರ ದುನಿಯಾ ವಿಜಯ್ ಅಂತಾನೆ ಹೆಸರುವಾಸಿಯಾಗಿರುವ ವಿಜಯ್ ಅವರು ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದವರು.ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅವರಿಗೆ ಮೊದಲು ಸಿಕ್ಕಿದ್ದು ಸಣ್ಣ ಪುಟ್ಟ ವಿಲನ್ ಪಾತ್ರಗಳು ಅಷ್ಟೇ ಆಗಿದ್ದರು ಕೂಡ ಧೃತಿಗೆಡದೆ ಹಗಲಿರುಳು ಎನ್ನದೆ ಶ್ರಮಿಸಿದ ಫಲವಾಗಿ ದುನಿಯಾ ಸಿನಿಮಾದ ಮೂಲಕ ಮೊದಲ ಬಾರಿಗೆ ಪರಿಪೂರ್ಣ ನಟನಾಗಿ ಹೊರಹೊಮ್ಮಿದ್ದರು. ಅವರ ಶ್ರಮಕ್ಕೆ ಪ್ರತಿಫಲವಾಗಿ ಆ ಸಿನಿಮಾ ಅವರ ಕೈ ಹಿಡಿದು ಯಶಸ್ವಿಯಾಗಿ ಮುನ್ನುಗ್ಗಿತ್ತು. ಅಂದಿನಿಂದ ಇಂದಿನವರೆಗೂ ಮತ್ತೆ ಹಿಂದುರುಗಿ ನೋಡಿದ್ದೆ ಇಲ್ಲ.
ಪ್ರತಿ ಹಂತದಲ್ಲೂ ಸಿನಿಮಾನೇ ಅವರ ದೊಡ್ಡ ಕನಸಾಗಿತ್ತು. ಹಾಗೂ ಅದಕ್ಕೆ ಬೇಕಾದಂತಹ ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡು ಪರಿಶ್ರಮದಿಂದ ಕಷ್ಟಪಟ್ಟು ಮೇಲೆ ಬಂದಿದ್ದಾರೆ ನಟ ದುನಿಯಾ ವಿಜಯ್. ಮೊದಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ ನಟ ದುನಿಯಾ ವಿಜಯ್, ಮೊದಲ ಸಿನಿಮಾ ನಿರ್ದೇಶನದಲ್ಲಿಯೇ ಸಕ್ಸಸ್ ಕಂಡುಕೊಂಡಿದ್ದಾರೆ. ನಟ ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದಷ್ಟೇ ಅಲ್ಲದೆ ಆ ಸಿನಿಮಾದಲ್ಲಿ ತಾವೇ ಅಭಿನಯಿಸಿ ಸಲಗದ ಮೂಲಕ ಹೆಚ್ಚು ಕನ್ನಡಿಗರ ಮನಸ್ಸನ್ನು ಗೆಲ್ಲುವುದರಲ್ಲು ಕೂಡ ಯಶಸ್ವಿಯಾಗಿದ್ದಾರೆ.
ವಿಜಯ್ ಅವರಿಗೆ ಮೂವರು ಮಕ್ಕಳಿದ್ದು ಮೋನಿಕಾ ಹಾಗೂ ಮೋನಿಷಾ ಎಂಬ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಒಬ್ಬ ಪುತ್ರ ಕೂಡ ಇದ್ದಾನೆ. ಮಗಳು ಮೋನಿಷಾ ಅಪ್ಪನ ಹಾದಿಯಲ್ಲೇ ಸಾಗಿದ್ದು ಮೋನಿಷಾ ಸೋಶಿಯಲ್ ವಿಡಿಯೋದಲ್ಲಿ ಈಗ ಟ್ರೆಂಡ್ ಆಗುತ್ತಿದ್ದಷ್ಟೆ ಅಲ್ಲದೆ ಬಹಳ ಸುದ್ದಿಯಲ್ಲಿ ಇದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಅಪ್ಪನ ತೊಡೆಯ ಮೇಲೆ ಕುಳಿತುಕೊಂಡು ತುಂಬಾನೆ ತುಂಟಾಟ ಆಡುತ್ತಿದ್ದ ಮೋನಿಷ ಈಗ ಮಾಡೆಲ್ ಜಗತ್ತಿಗೆ ಲಗ್ಗೆ ಇಟ್ಟು ಸ್ವಂತ ಬಿಸಿನೆಸ್ ಆರಂಭಿಸಿದ್ದಾರೆ.
ಶುಗರ್ ವೈ ಮೋನಿಷಾ ಎಂಬ ಸಂಸ್ಥೆಯನ್ನು ಮೋನಿಷಾ ಆರಂಭಿಸಿ ಸ್ವಂತ ಉದ್ಯಮದಲ್ಲಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಮೋನಿಷಾ ಅವರ ಮೇಕಪ್ ಹಾಗೂ ಅವರು ತೊಡುವ ಬಟ್ಟೆಗಳ ವಿನ್ಯಾಸ (ಡಿಸೈನ್ ) ಮಾಡುವುದು ಅವರ ತಾಯಿಯೇ ಎನ್ನಲಾಗಿದೆ.
ಇಷ್ಟಕ್ಕೂ ದುನಿಯಾ ವಿಜಯ್ ಪುತ್ರಿ ಮೋನಿಷ ಅವರು ಯಾವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ಓದಿ ನೋಡಿ. ಈಗಿರುವ ಮೋನಿಷಾ ಅವರನ್ನು ಕಂಡರೆ ನಿಜಕ್ಕೂ ನೀವೇ ಬೆರಗಾಗುತ್ತೀರಾ. ಮಾಡೇರ್ನ್ ಹಾಗೂ ಟ್ರೇಡಿಶನಲ್ ಆಗಿ ಮೋನಿಷಾ ಸಕತ್ ಸ್ಟೈಲಿಶ್ ಎಂದು ಹೇಳಲಾಗುತ್ತಿದೆ. ಅಪ್ಪನ ಹಾಗೆ ಮಗಳು ಮೋನಿಷಾ ಕೂಡ ಯಶಸ್ವಿಯಾಗಲಿ ಎಂದು ಹರಸಿ ಹಾರೈಸೋಣ.