ಕರ್ನಾಟಕ ಜನತೆಯ ಮನ ಗೆದ್ದ ಅಪ್ಪು ಅಭಿನಯದ ಕೊನೆಯ ಮತ್ತು ಬಹುನಿರೀಕ್ಷಿತ ಚಿತ್ರ ಜೇಮ್ಸ್ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸಿದೆ. ಮೊದಲ ದಿನ ಸಾವಿರಾರು ಶೋಗಳು ಹೌಸ್ ಫುಲ್ ಆಗಿವೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆಗಿದೆ. ಈ ಸಿನಿಮಾ ಬರೋಬ್ಬರಿ 30 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಕೆ ಮಾಡಿದೆ. ಆ ಮೂಲಕ ಯಶ್ ನಟನೆಯ ಕೆಜಿಎಫ್:ಚಾಪ್ಟರ್ 1 ಚಿತ್ರದ ದಾಖಲೆಯನ್ನೂ ಉಡೀಸ್ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಜೇಮ್ಸ್ ಪ್ರದರ್ಶನ ಕಾಣುತ್ತಿದೆ.

ಪುನೀತ್ ರಾಜ್‌ಕುಮಾರ್‌ ಅವರ ಕೊನೇ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ ಇದೊಂದು ಎಮೋಷನ್ ಆಗಿದೆ. ಈ ಸಿನಿಮಾಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ಈ ಖುಷಿಯನ್ನು ಸವಿಯಲು ಅಪ್ಪು ನಮ್ಮ ಜೊತೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.

ಚೇತನ್ ಕುಮಾರ್ ಅವರು ಜೇಮ್ಸ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಕಿಶೋರ್ ಪತ್ತಿಕೊಂಡ ಅವರು ಅದ್ದೂರಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ನಿರ್ಮಾಪಕರಿಗೆ ಜೇಮ್ಸ್ ಚಿತ್ರದಿಂದ ಭರ್ಜರಿ ಲಾಭ ಆಗಲಿದೆ. ಎರಡನೇ ದಿನವಾದ ಮಾರ್ಚ್ 18ರಂದು ಕೂಡ ಬಹುತೇಕ ಕಡೆಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಆಗುತ್ತಿದೆ. ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಹಾಗಾಗಿ ಎರಡನೇ ದಿನ ಕೂಡ ಜೇಮ್ಸ್ ಉತ್ತಮ ಗಳಿಕೆ ಮಾಡಲಿದೆ.

ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಕಡೆ ಸಿನಿಮಾ ಜೇಮ್ಸ್ ಗೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಪ್ಪು ಇಲ್ಲ ಅನ್ನೋ ನೋವಿನ ಜೊತೆಗೆ ಅವರ ಸಿನಿಮಾವನ್ನ ಸೆಲೆಬ್ರೇಟ್ ಮಾಡ್ತಿದ್ದಾರೆ. ಹಲವು ವಿಚಾರಗಳಲ್ಲಿ ಹಲವು ದಾಖಲೆ ಬರೆದಿರುವ ಅಪ್ಪು ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಮೊದಲ ದಿನದ ಕಲೆಕ್ಷನ್ ಎಲ್ಲರನ್ನ ದಂಗಾಗಿಸುವಂತೆ ಮಾಡಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.

376 ಸಿಂಗಲ್ ಸ್ಕ್ರೀನ್ 180 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ತೆರೆಕಂಡಿದ್ದು, ಮೊದಲ ದಿನವೇ ಬರೋಬ್ಬರಿ 25-30 ಕೋಟಿ ಕಲೆಕ್ಷನ್ ಪಡೆದಿದೆ ಎನ್ನಲಾಗಿದೆ. ಒಂದೇ ವಾರದಲ್ಲಿ 100 ಕೋಟಿ ದಾಟುವ ನಿರೀಕ್ಷೆ ಚಿತ್ರತಂಡಕ್ಕಿದೆ . ಈಗಾಗಲೇ ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. 13 ಕೋಟಿಗೂ ಹೆಚ್ಚು ಮೊತ್ತ ಪಡೆದಿದೆ ಎನ್ನಲಾಗಿದೆ. ಹೀಗೆ ಹಲವು ದಾಖಲೆಗಳನ್ನ ಅಪ್ಪು ಸಿನಿಮಾ ಸೃಷ್ಟಿ ಮಾಡುತ್ತಿದೆ. ಇಷ್ಟೆಲ್ಲಾ ಕಲೆಕ್ಷನ್ ಮಾಡುತ್ತಿರುವ ಜೇಮ್ಸ್ ಸಿನೆಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಪುನೀತ್ ರಾಜಕುಮಾರ್ ಅವರು ಸುಮಾರು 7 ರಿಂದ 8 ಕೋಟಿ ಸಂಭಾವನೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *