ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕ, ಒಂದು ದಿನದ ಜೇಮ್ಸ್ ಕಲೆಕ್ಷನ್ ಎಷ್ಟು ಗೊತ್ತೆ ಇಡೀ ಚಿತ್ರರಂಗವೇ ಶಾ’ಕ್

0 1

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಇಂದು. ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಇಂದೇ ಅಪ್ಪು ಅಭಿಮಾನದ ಕೊನೆಯ ಚಿತ್ರ ಇಡೀ ರಾಜ್ಯ ಮತ್ತು ಕೆಲ ಹೊರರಾಜ್ಯಗಳಲ್ಲೂ ಜೇಮ್ಸ್ ರೀಲೀಸ್ ಆಗಿದೆ. ಜೇಮ್ಸ್ ಚಿತ್ರದ ಬಿಡುಗಡೆಗೂ ಮುನ್ನವೇ ಅನೇಕ ದಾಖಲೆಗಳನ್ನು ಬರೆದಿದೆ.

ಅಪ್ಪು ಇಲ್ಲದ ನೋವಿನ ನಡುವೆಯೂ ಪವರ್ ಸ್ಟಾರ್ ಅಭಿನಯದ ಜೇಮ್ಸ್ ರಿಲೀಸ್ ಆಗುತ್ತಿರುವ ಕಾರಣ ಈ ಚಿತ್ರಕ್ಕೆ ಫುಲ್ ಡಿಮ್ಯಾಂಡ್ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಹೆಚ್ಚಿನ ಶೋ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಿನಿಮಾಕ್ಕೆ ಶಿವಣ್ಣ ಅವರು ಅಪ್ಪು ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ನಿರ್ಮಾಪಕ ಕಿಶೋರ್ ಬಂಡವಾಳ ಹೊಡಿದ್ದಾರೆ.

ಮುಂಜಾನೆ 6 ಗಂಟೆಗೆ ಜೇಮ್ಸ್ ವಿಶೇಷ ಶೋ ಏರ್ಪಡಿಸಲಾಗಿದೆ. ಇದನ್ನು ಕಣ್ಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಹೀಗಾಗಿ, ಮುಂಜಾನೆ ಶೋಗೂ ಬೇಡಿಕೆ ಸೃಷ್ಟಿಯಾಗುತ್ತಿದೆ. ಪರಿಣಾಮ ಅನೇಕ ಶೋಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.

ಅಲ್ಲದೆ ಫಸ್ಟ್ ಟೈಂ ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ ಕೆಜಿ ರಸ್ತೆಯಲ್ಲಿ ಎರಡು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮೆಜೆಸ್ಟಿಕ್‌ನ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದ್ದು, ಎರಡು ಚಿತ್ರಮಂದಿರಗಳಲ್ಲಿ ಇಂದಿನ ಎಲ್ಲಾ ಶೋಗಳು ಪುಲ್ ಹೌಸ್ ಆಗಿವೆ. ಇನ್ನು ಮಾಗಡಿ ರಸ್ತೆಯ ವೀರೇಶ ಚಿತ್ರಮಂದಿರದಲ್ಲಿ ನಾಳೆ 6 ಶೋಗಳಿದ್ದು, ಆರು ಶೋಗಳ ಟಿಕೆಟ್ ಒಂದು ದಿನ ಮುಂಚೆಯೇ ಸೋಲ್ಡ್ ಔಟ್ ಆಗಿವೆ ಇನ್ನೂ ಅಕ್ಕ ಪಕ್ಕದ ರಾಜ್ಯದಲ್ಲೂ ಜೇಮ್ಸ್ ಅಬ್ಬರ ಜೋರಾಗಿದೆ ಆಂಧ್ರ ಮತ್ತು ತೆಲಂಗಾಣದಲ್ಲಿ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗುತ್ತಿದೆ . ಅಲ್ಲದೆ ಕೇರಳ, ತಮಿಳು ನಾಡು, ಹಾಗೂ ಮುಂಬೈನಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ. ಒಟ್ಟಿನಲ್ಲಿ ರಾಜ್ಯದ ಮೂಲೆಮೂಲೆಯಲ್ಲೂ ಜೇಮ್ಸ್ ಹವಾ ಮತ್ತು ಹವಾಮಾನ ಬಲು ಜೋರಾಗಿದೆ.

ಇದಲ್ಲದೆ ಜೇಮ್ಸ್ ಸಾಗರದಾಚೆಯು ಅಬ್ಬರಿಸಲು ಸಜ್ಜಾಗಿದ್ದು, ಕೆನಡಾ, ಆಸ್ಟ್ರೇಲಿಯ, ಅಮೆರಿಕ, ದುಬೈನಲ್ಲೂ ಇಂದು ಜೇಮ್ಸ್ ದರ್ಶನವಾಗಲಿದೆ. ವಿಶೇಷ ಅಂದ್ರೆ ಆಸ್ಟ್ರೇಲಿಯಾದಲ್ಲಿ 150 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಒಟ್ಟಿನಲ್ಲಿ ಜೇಮ್ಸ್ ಕ್ರಿಯೇಟ್ ಮಾಡಿರುವ ಹೈಪ್ ನೋಡಿದ್ರೆ ಒಂದೇ ವಾರದಲ್ಲಿ ಜೇಮ್ಸ್ 100 ಕೋಟಿ ಕ್ಲಬ್ ಸೇರೋದು ಪಕ್ಕಾ ಅಂತಿದ್ದಾರೆ ಸಿನಿಮಾ ಪಂಡಿತರು.

ಹಂತಹಂತವಾಗಿ ಶೋಗಳನ್ನು ಆನ್‌ಲೈನ್ ನಲ್ಲಿ ಬಿಡಲಾಗುತ್ತಿದೆ. ಕರ್ನಾಟಕದಾದ್ಯಂತ ಶೇ .80 ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರಿಂದ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.

ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಸ್ಯಾಂಡಲ್‌ವುಡ್‌ನ ಆಲ್ ಟೈಮ್ ರೆಕಾರ್ಡ್ ಅಂತಿದ್ದಾರೆ ಗಾಂಧಿನಗರ ಸಿನಿಪಂಡಿತರು. ಅಲ್ಲದೆ ಇಂದು ಜೇಮ್ಸ್ ಚಿತ್ರ ಮೊದಲ ದಿನ 30 ಕೋಟಿ ಗಳಿಕೆ ಮಾಡುವುದರಲ್ಲಿ ಡೌಟೇ ಇಲ್ಲ ಅನ್ನುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಇತಿಹಾಸದಲ್ಲಿ ಮೈಸೂರಿನಲ್ಲಿ ಮೊದಲ ದಿನ 80 ಶೋ ಫುಲ್ ಆದ ದಾಖಲೆಯೇ ಇಲ್ಲ. ಆದರೆ, ಜೇಮ್ಸ್ ಬರೋಬ್ಬರಿ 85 ಶೋಗಳ ಟಿಕೆಟ್ ಈಗಾಗಲೇ ಅಭಿಮಾನಿಗಳ ಕೈ ಸೇರಿವೆ. ಅಲ್ಲದೆ ಶಿವಮೊಗ್ಗದಲ್ಲಿ 28 ಶೋಗಳು ಹೌಸ್ ಪುಲ್ ಆಗಿದೆ. ಉತ್ತರ ಕರ್ನಾಟಕದಲ್ಲಿ ಜೇಮ್ಸ್ ಬಿರುಗಾಳಿ ಚಿತ್ರಮಂದಿರಗಳ ಸುತ್ತುವರೆದಿದೆ.

Leave A Reply

Your email address will not be published.