ದುನಿಯಾ ವಿಜಿ ಕೆಲಸಕ್ಕೆ ಬೇಕಿದೆ ನಿಮ್ಮ ಬೆಂಬಲ

0 6

ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗದ ಒಬ್ಬ ನಟರಾಗಿದ್ದಾರೆ. ಇವರು ದುನಿಯಾ ಎಂಬ ಸಿನೆಮಾವನ್ನು ಮಾಡಿದ್ದರು. ಇದರಿಂದ ಅವರಿಗೆ ದುನಿಯಾ ವಿಜಯ್ ಎಂಬ ಹೆಸರನ್ನು ಪಡೆದರು. ದುನಿಯಾ ಸಿನೆಮಾದಲ್ಲಿ ಶುಭಾಪೂಂಜಾ ಅವರ ಜೊತೆ ವಿಜಯ್ ಅವರು ನಟಿಸಿದ್ದರು. ಇದು ಪ್ರಶಸ್ತಿಯನ್ನು ಪಡೆದಿದೆ. ಆದ್ದರಿಂದ ನಾವು ಇಲ್ಲಿ ದುನಿಯಾ ವಿಜಯ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದುನಿಯಾ ವಿಜಯ್ ಅವರು ಕನ್ನಡ ಚಲನಚಿತ್ರದಲ್ಲಿ ಒಬ್ಬ ಒಳ್ಳೆಯ ನಟರಾಗಿದ್ದಾರೆ. ಇವರು ಜುಲೈ 24 1970 ನೇ ಇಸವಿಯಲ್ಲಿ  ರವಿವಾರದಂದು ಜನಿಸಿದ್ದಾರೆ. ಇವರು ಮೂಲತಃ ಕರ್ನಾಟಕ ರಾಜ್ಯದವರು ಆಗಿದ್ದಾರೆ. ಮೊದಲು ಇವರು ಕಿರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತರದಲ್ಲಿ ದುನಿಯಾ ಎಂಬ ಪಿಚ್ಚರ್ ಗೆ ಹೀರೋ ಆಗಿ ಕಾಲಿಟ್ಟರು. ಇವರಿಗೆ ಮದುವೆ ಆಗಿದೆ. ಇವರಿಗೆ ಎರಡು ಹೆಂಡತಿಯರಿದ್ದಾರೆ. ಹಾಗೆಯೇ ಮೂರು ಮಕ್ಕಳು ಇದ್ದಾರೆ. ಇವರು ಬೆಂಗಳೂರಿನಲ್ಲಿ ಕತ್ರಿಗುಪ್ಪೆಯಲ್ಲಿ ವಾಸವಾಗಿದ್ದಾರೆ.

ಈಗ ಇವರಿಗೆ ಸುಮಾರು 46 ವರ್ಷಗಳು ಆಗಿದೆ. ನಂತರದಲ್ಲಿ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಇದರಿಂದ ಅಭಿಮಾನಿಗಳ ಮನಸ್ಸಿನಲ್ಲಿ ಕುಳಿತಿದ್ದಾರೆ. ಹಾಗೆಯೇ ಈಗ ಸಲಗ ಚಿತ್ರದ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. ಇವರು ಒಳ್ಳೆಯ ಗುಣವನ್ನು ಹೊಂದಿದ್ದಾರೆ. ಏಕೆಂದರೆ ಈ ವರ್ಷ ಅವರ ಹುಟ್ಟಿದ ಹಬ್ಬದ ದಿನ ಒಂದು ಸಣ್ಣ ಸಹಾಯವನ್ನು ಮಾಡಲು ಹೊರಟಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ವಿಜಯ್ ಅವರು ಈವರ್ಷ ಅಲ್ಲಿಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಅಲ್ಲಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್ಲಾ ಸೌಲಭ್ಯಗಳನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಆದ್ದರಿಂದ ಬಡ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡಬಹುದು. ಈ ರೀತಿಯಾಗಿ ಸಹಾಯಗಳನ್ನು ಮಾಡುವವರು ಬಹಳ ಕಡಿಮೆ. ಯಾವಾಗ ಏನೇ ಸಹಾಯವನ್ನು ಕೇಳಿದರು ಇವರು ಮಾಡುತ್ತಾರೆ. ಆದ್ದರಿಂದ ಇಂತಹ ಸಹಾಯ ಮಾಡುವವರು ಇದ್ದಾಗ ಬಡವರು ಹೋಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇಂತಹ ಸಹಾಯ ಮಾಡುವ ಬುದ್ಧಿ ಇರುವ ಇವರಿಗೆ ಆ ದೇವರು ಒಳ್ಳೆಯ ಆರೋಗ್ಯ ಮತ್ತು ಆಯಸ್ಸನ್ನು ನೀಡಲಿ ಎಂದು ಹಾರೈಸೋಣ.

Leave A Reply

Your email address will not be published.