Dry Fruits Benefits: ಡ್ರೈ ಫ್ರೂಟ್ಸ್ ತಿಂತಿರಾ, ತಿಂದಾಗ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

0 101

Dry Fruits Benefits For good Health: ಡ್ರೈ ಫ್ರೂಟ್ಸ್ ತಿನ್ನುವುದರಿಂದ ಏನೆಲ್ಲಾ ಉಪಯೋಗಗಳಾಗುತ್ತದೆ ಎಂದು ಇಲ್ಲಿ ತಿಳಿದುಕೊಳ್ಳಬಹುದು. ಡ್ರೈ ಫ್ರೂಟ್ಸ್ ಅಂದರೆ ಒಣಗಿದ ಹಣ್ಣು, ಹಣ್ಣುಗಳಲ್ಲಿರುವಂತಹ ನೀರಿನ ಅಂಶವನ್ನು ಒಣಗಿಸಿದ ನಂತರವೇ ಡ್ರೈ ಫ್ರುಟ್ಸ್ ಆಗುತ್ತದೆ. ಇದನ್ನು ನೈಸರ್ಗಿಕವಾಗಿ ಸೂರ್ಯನ ಬಿಸಿಲಿಗೆ ಒಣಗಿಸಲಾಗುತ್ತದೆ ಅಥವಾ ಡ್ರೈಯರ್ ಗಳನ್ನ ಬಳಸಿ ಡಿಹೈಡ್ರೇಟ್ ಮಾಡುವ ಮೂಲಕ ಹಣ್ಣುಗಳನ್ನು ಒಣಗಿಸಿ ನೀರಿನಂಶವನ್ನು ತೆಗೆದುಹಾಕಲಾಗುತ್ತದೆ.

ಇದು ಸುಮಾರು ಕ್ರಿಸ್ತಪೂರ್ವ ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸೇಫೋಟೋಮಿಯಾ ನಾಗರಿಕತೆಯಲ್ಲಿ ಬೆಳಕಿಗೆ ಬಂದಿತ್ತು. ನಂತರ ಹಣ್ಣಿನ ರುಚಿ ಹಾಗೂ ದೇಹದ ಮೇಲೆ ಆಗುವ ಪರಿಣಾಮಗಳಿಂದ ಅತೀ ದೀರ್ಘ ಕಾಲದವರೆಗೆ ಬಾಳಿಕೆ ಬರುವುದರಿಂದ ಡ್ರೈ ಫ್ರೂಟ್ಸ್ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯಿತು.

ಡ್ರೈ ಫ್ರೂಟ್ಸ್ ಅನ್ನ ಅತಿ ಹೆಚ್ಚು ಉತ್ಪಾದಿಸುವ ದೇಶ ಯಾವುದೆಂದರೆ 2020-21ರ ಸಾಲಿನ ಅಂಕಿ ಅಂಶದ ಪ್ರಕಾರ United States and Turkey ಯಲ್ಲಿ ಜಾಸ್ತಿ ಬೆಳೆಯುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಬೆಳೆಯುವುದು ಎಂದರೆ ಅದು ಜಮ್ಮು ಮತ್ತು ಕಾಶ್ಮೀರದಲ್ಲಿ. ಡ್ರೈ ಫ್ರೂಟ್ಸ್ ದೇಹಕ್ಕೆ ಬೇಕಾಗಿರುವ ಉತ್ತಮ ಪೋಷಕಾಂಶದ ಗಣಿ ಎಂದು ಹೇಳಿದರು ತಪ್ಪಾಗಲಾರದು. ಇದನ್ನು ಔಷಧಿಗೂ ಕೂಡ ಬಳಸುತ್ತಾರೆ. ಹಾಗೆ ನಾವು ತಯಾರಿಸುವ ಆಹಾರ ಪದಾರ್ಥಗಳಲ್ಲಿಯೂ ಕೂಡ ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ..ಹಾಸಿಗೆಯಲ್ಲಿ ಮಲಗುವ ಮುನ್ನ, ಲವಂಗ ತಿಂದ್ರೆ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

ಬಾದಾಮಿ : ಶೇಕಡ 80ರಷ್ಟು ಬಾದಾಮಿಯನ್ನು ಕ್ಯಾಲಿಫೋರ್ನಿಯದಲ್ಲಿ ಬೆಳೆಯಲಾಗುತ್ತದೆ. ಬಾದಾಮಿ ತಿನ್ನುವುದರಿಂದ ಕಡಿಮೆ ಸಾಂದ್ರತೆಯ lipoprotein or LDL ಎಂದು ಕರೆಯಲ್ಪಡುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. HDL ಅನ್ನು ಜಾಸ್ತಿ ಮಾಡುತ್ತದೆ. ಬಾದಾಮಿ ನಮ್ಮ ಹೃದಯದ ಆರೋಗ್ಯಕ್ಕೂ ಬಹಳ ಒಳ್ಳೆಯದು. ದೇಹದಲ್ಲಿ ಉಂಟಾಗುವ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹದಲ್ಲಿ magnesium , vitamin E ,fibre ಮತ್ತು ಉತ್ತಮ ಪ್ರೊಟೀನ್ ಗಳನ್ನ ಸರಬರಾಜು ಮಾಡುತ್ತದೆ. ಬಾದಾಮಿ ಸಕ್ಕರೆ ಅಂಶ ಏರಿಕೆ ಆಗದಂತೆ ನೋಡಿಕೊಳ್ಳುತ್ತದೆ.

ಬಾದಾಮಿ ಜಾಸ್ತಿ ತಿಂದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಎಂದು ನೋಡೋಣ : ಬಾದಾಮಿ ಜಾಸ್ತಿ ತಿನ್ನುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ ಮತ್ತು ಹೆಚ್ಚು ತಿನ್ನುವುದರಿಂದ ಇದರಲ್ಲಿರುವಂತಹ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೆಯೇ ದೇಹದ ತೂಕ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.

ಕೆಲವೊಬ್ಬರಿಗೆ ಬಾದಾಮಿಯಿಂದ ಅಲರ್ಜಿ ಆಗುವ ಸಾಧ್ಯತೆಗಳಿರುತ್ತದೆ ಆದರೆ ಈ ಅಲರ್ಜಿ ಭಾರತದಲ್ಲಿ ತುಂಬಾ ಕಡಿಮೆ ಕಂಡುಬರುತ್ತದೆ. ತುಂಬಾ ಬಾದಾಮಿ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆಗಳು ಕೂಡ ಇರುತ್ತದೆ. ದಿನಕ್ಕೆ 10 ರಿಂದ 15 ಬಾದಾಮಿ ತಿನ್ನೋದು ಒಳ್ಳೆಯದು.

ಪಿಸ್ತಾ: ಪಿಸ್ತಾದಿಂದ ಉರಿಯುತ ಕಡಿಮೆಯಾಗುತ್ತದೆ ಹಾಗೆ ಹೃದಯ ಸಂಬಂಧಿ ಸಮಸ್ಯೆಯನ್ನ ಕಡಿಮೆ ಮಾಡುತ್ತದೆ. ಪಿಸ್ತಾ ಸೇವನೆ ಮಾಡುವುದರಿಂದ ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದ ತರ ಅನುಭವ ಕೊಡುತ್ತದೆ.ಪಿಸ್ತಾ ದೇಹದಲ್ಲಿ ಗುಡ್ ಬ್ಯಾಕ್ಟೀರಿಯ ಬಿಡುಗಡೆಯಾಗುವಂತೆ ಮಾಡುತ್ತದೆ ಮತ್ತು ಇದರ ಸೇವನೆ ಮಾಡುವುದರಿಂದ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು.

ಪಿಸ್ತ ಜಾಸ್ತಿ ತಿನ್ನುವುದರಿಂದ ಏನೆಲ್ಲಾ ಸಮಸ್ಯೆ ಉಂಟಾಗಬಹುದೆಂದರೆ: raw pista ಗಳಲ್ಲಿ ಸೋಡಿಯಂ ಅಂಶ ತುಂಬಾ ಅಂದರೆ ತುಂಬಾ ಕಡಿಮೆ ಇರುತ್ತದೆ ಆದರೆ ಹುರಿದ ಪಿಸ್ತಾಗಳಲ್ಲಿ ಉಪ್ಪಿನ ಅಂಶ ಜಾಸ್ತಿ ಇರುತ್ತದೆ ಈ ಸೋಡಿಯಂ ಅಂಶ ಜಾಸ್ತಿಯಾದಂತೆ ರಕ್ತದೊತ್ತಡ, ಹೃದಯದ ಸಮಸ್ಯೆ ಮತ್ತು ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತದೆ. ಇನ್ನು ಕೆಲವರಿಗೆ ಪಿಸ್ತ ತಿಂದರೆ ಆಗುವುದಿಲ್ಲ ಅಂಥವರಿಗೆ ಹೊಟ್ಟೆ ಉಬ್ಬಿದಂತಾಗುವುದು, ವಾಕರಿಕೆ ಬಂದ ತರಹ ಆಗುವುದು, ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವ ತರ ಆಗುತ್ತದೆ. ಪಿಸ್ತವನ್ನು ದಿನಕ್ಕೆ ಒಂದು ಮುಷ್ಟಿಯಷ್ಟು ತಿಂದರೆ ಸಾಕು ತಿಂದರೆ ಸಾಕು ಅದಕ್ಕಿಂತ ಜಾಸ್ತಿ ತಿನ್ನಬಾರದು.

ಗೋಡಂಬಿ : ಗೋಡಂಬಿಯಲ್ಲಿರುವಂತಹ antioxidant ದಿಂದಾಗಿ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ಒಳ್ಳೆ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಗೋಡಂಬಿಯಲ್ಲಿ unsaturated fat , magnesium, potassium ನಂತಹ ಅಂಶಗಳು ಜಾಸ್ತಿ ಇರುವ ಕಾರಣ ದೇಹದಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಗೋಡಂಬಿ ತಿನ್ನೋದರಿಂದ ಡಯಾಬಿಟಿಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುವಂತೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಣ್ಣು ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಜಾಸ್ತಿ ಗೋಡಂಬಿ ತಿನ್ನೋದರಿಂದ ಆಗುವ ಸಮಸ್ಯೆಗಳು: ಗೋಡಂಬಿಯಲ್ಲಿ ಕ್ಯಾಲೋರಿ ಜಾಸ್ತಿ ಇರುವುದರಿಂದ ಕೆಲವರು ಇದನ್ನು ತಮ್ಮ ಡಯಟ್ ಲಿಸ್ಟ್ ಅಲ್ಲಿ ಸೇರಿಸಿಕೊಳ್ಳುವುದಿಲ್ಲ. ಕೆಲವರಿಗೆ ಗೋಡಂಬಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಮಲಬದ್ಧತೆ ಉಂಟಾಗುವುದು ತೂಕ ಹೆಚ್ಚಾಗುತ್ತದೆ. ಗೋಡಂಬಿಯನ್ನ ಹಿತಮಿತವಾಗಿ ತಿನ್ನಬೇಕು ಬೇರೆ ಬೇರೆ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ ತಿನ್ನುವವರು ಗೋಡಂಬಿಯನ್ನು ನಾಲ್ಕು ತಿಂದರೆ ಸಾಕು.

ಎಪ್ರಿಕಾಟ್ಸ್ : ಎಪ್ರಿಕಾಟ್ಸ್ ಅಲ್ಲಿ ನ್ಯೂಟ್ರಿಷನ್ ಜಾಸ್ತಿ ಇದ್ದು ಕ್ಯಾಲೋರಿ ಕಡಿಮೆ ಇದೆ. ಇದರಲ್ಲಿ antioxidant ಜಾಸ್ತಿ ಇರುವ ಕಾರಣ ಹೃದಯದ ಆರೋಗ್ಯವನ್ನ ಕಾಪಾಡುತ್ತದೆ ಹಾಗೆಯೇ ಡಯಾಬಿಟಿಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಮತ್ತು ಚರ್ಮದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಉತ್ತಮ ಬ್ಯಾಕ್ಟೀರಿಯಾವನ್ನು ಬಿಡುಗಡೆ ಮಾಡುವುದರ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತದೆ. ಎಪ್ರಿಕಾಟ್ಸ್ ನ್ನು ಮಿತಿಗಿಂತ ಜಾಸ್ತಿ ಸೇವನೆ ಮಾಡುವುದರಿಂದ ವಾಂತಿ, ಮೂರ್ಛೆ ಬಿಳುವುದು, ತಲೆ ತಿರುಗುವ ಸಮಸ್ಯೆ ಉಂಟಾಗಬಹುದು. ನಾಲ್ಕರಿಂದ ಐದು ಎಪ್ರಿಕಾಟ್ಸ್ ತಿನ್ನುವುದು ಒಳ್ಳೆಯದು.

ಇದನ್ನೂ ಓದಿ..ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆ ಆಗ್ಲಿಲ್ಲಾ ಅಂದ್ರೆ ನಿಮ್ಮ ಹಣ ವಾಪಾಸ್, ನಾಟಿ ವೈದ್ಯನ ಓಪನ್ ಚಾಲೆಂಜ್

ಖರ್ಜೂರ : ನ್ಯಾಚುರಲ್ ಶುಗರ್ ಹೊಂದಿರುವಂತಹ ಖರ್ಜೂರ ಬಹಳ ರುಚಿಕರವಾಗಿರುತ್ತದೆ. ಖರ್ಜೂರ ಮೆದುಳಿನ ಆರೋಗ್ಯ ಚೆನ್ನಾಗಿರಲು ಸಹಾಯಮಾಡುತ್ತದೆ ಮತ್ತು ಕಿಡ್ನಿ ರಕ್ಷಣೆಯನ್ನು ಮಾಡುತ್ತದೆ. ಕ್ಯಾನ್ಸರ್ ಸಮಸ್ಯೆ ದೂರ ಮಾಡುತ್ತದೆ .ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ ರಾತ್ರಿ ಕುರುಡು ಸಮಸ್ಯೆಯನ್ನು ದೂರ ಮಾಡುತ್ತದೆ. ಖರ್ಜೂರ ಜಾಸ್ತಿ ತಿನ್ನೋದ್ರಿಂದ ತೂಕ ಜಾಸ್ತಿ ಆಗಬಹುದು ಹೊಟ್ಟೆ ನೋವು ಉಂಟಾಗಬಹುದು ಹಾಗೆ ಚರ್ಮದಲ್ಲಿ ಗುಳ್ಳೆಗಳು ಉಂಟಾಗಬಹುದು. ದಿನಕ್ಕೆ ಮೂರರಿಂದ ನಾಲ್ಕು ಖರ್ಜೂರ ತಿನ್ನುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

Leave A Reply

Your email address will not be published.